UP ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಈ ಎರಡು ಫೋಟೋಗಳು ತೂಫಾನ್ ವೈರಲ್…

ಸದ್ಯ ಭಾರತದಲ್ಲಿ ಮುಖ್ಯಮಂತ್ರಿಗಳಲ್ಲಿಯೇ ಹೆಚ್ಚು ಸದ್ದು ಮಾಡುತ್ತಿರುವ ವ್ಯಕ್ತಿ ಯಾರು ಎಂದು ಕೇಳಿದರೆ UP ಯ ಯೋಗಿ ಆದಿತ್ಯನಾಥ್ ಎನ್ನುವಂಥ ಉತ್ತರ ಸಹಜವಾಗಿ ಬರುತ್ತದೆ. ಯಾವುದೇ ವಿಷಯಗಳಿಗೆ ಸಂಬಂಧಪಟ್ಟಂತೆ ತೆಗೆದುಕೊಳ್ಳುವ ನಿರ್ಧಾರ ತುಂಬಾ ಯೂನಿಕ್ ಹಾಗೂ ನೇರವಾಗಿರುತ್ತದೆ. ಇವರು ಯುಪಿಯಲ್ಲಿ ಮುಖ್ಯಮಂತ್ರಿಯಾದ ನಂತರ ಅಲ್ಲಿಯ ಗುಂಡಾರಾಜ್ ಕಡಿಮೆಯಾಗಿದ್ದು ಮಾಫಿಯಾಗಳ ಸದ್ದೇ ಅಡಗಿ ಹೋಗಿದೆ. ಇದರ ಹಿಂದಿನ ಕಾರಣ ಯೋಗಿಯವರು ಗೂಂಡಾಗಳ ವಿರುದ್ಧ ತೆಗೆದುಕೊಳ್ಳುತ್ತಿರುವ ಖಡಕ್ ನಿರ್ಣಯಗಳು. ಸಾಮಾನ್ಯ ಜನರ ಮೂಲಭೂತ ಸಮಸ್ಯೆಗಳಿಗೆ ಯೋಗಿಯವರು ಸ್ಪಂದಿಸುವ ರೀತಿಯೇ ಬೇರೆಯಾಗಿದೆ. ಅದನ್ನೇ ಹೇಳುವ ಯೋಗಿ ಆದಿತ್ಯನಾಥ್ ಅವರ ಎರಡು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿವೆ.

ಈಗಿನ ದಿನಗಳಲ್ಲಿ ರಾಜ್ಯ ಕಾರಭಾರ ಮಾಡುವವರು ಜನಸಾಮಾನ್ಯರ ಮೇಲೆ ದಬ್ಬಾಳಿಕೆ ನಡೆಸುತ್ತಾರೆ. ಅವರೆದುರು ರಾಜರಂತೆ ಮೆರೆಯುತ್ತಾರೆ. ಚುನಾವಣೆಯ ಸಮಯದಲ್ಲಿ ಮತಯಾಚನೆಗೆ ತಗ್ಗಿ-ಬಗ್ಗಿ ಬರುವ ಈಗಿನ ರಾಜಕಾರಣಿಗಳು ಚುನಾವಣೆ ಗೆದ್ದ ಮೇಲೆ ಗುಂಡಾರಾಜನಂತೆ ವರ್ತಿಸುತ್ತಾರೆ. ಆದರೆ ಯೋಗಿ ಆದಿತ್ಯನಾಥ್ ಅವರ ಈ ಎರಡು ಫೋಟೋಗಳು ಜನಸಾಮಾನ್ಯರ ಜೊತೆಗೆ ಯಾವ ರೀತಿ ಅವರು ನಡೆದುಕೊಳ್ಳುತ್ತಾರೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತಿದೆ.

ಒಂದು ಫೋಟೋದಲ್ಲಿ ಮುಸ್ಲಿಮ್ ಮಹಿಳೆಯ ಜೊತೆಗೆ ಯೋಗಿಯವರು ಮಾತನಾಡುತ್ತಿದ್ದಾರೆ. ಆ ಮಹಿಳೆಯ ಸಮಸ್ಯೆಯನ್ನು ಯೋಗಿಯವರು ತುಂಬಾ ಗಮನಹರಿಸಿ ಕೇಳುತ್ತಿದ್ದಾರೆ. ಈಗ ನೀವು ಇದೇನು ಮಹಾ ಎನ್ನಬಹುದು, ಆದರೆ ಪ್ರಸ್ತುತ ಚಿತ್ರದಲ್ಲಿ ಮಹಿಳೆಯು ಚೇರ್ ಮೇಲೆ ಕುಳಿತಿದ್ದು ಯೋಗಿಯವರು ಮಹಿಳೆಯ ಎದುರು ನಿಂತಲ್ಲಿಯೇ ಸಹಜವಾಗಿ ಆಕೆಯ ಸಮಸ್ಯೆಯನ್ನು ಕೇಳುತ್ತಿದ್ದಾರೆ.

ಎರಡನೆಯ ಚಿತ್ರದಲ್ಲಿಯೂ ಯೋಗಿಯವರು ಹಿರಿಯ ವ್ಯಕ್ತಿಯ ಎದುರು ನಿಂತು ಅವರ ಸಮಸ್ಯೆಯನ್ನು ಕೇಳುತ್ತಿದ್ದಾರೆ. ಇಲ್ಲಿಯೂ ಸಹ ಮುಖ್ಯಮಂತ್ರಿಗಳು ತಮ್ಮ ಸ್ಟೇಟಸ್, ಹುದ್ದೆಯನ್ನು ಮರೆತು ಹಿರಿಯನಾಗರಿಕನ ಎದುರು ಸಾಮಾನ್ಯರಂತೆ ನಿಂತು ಅವರ ಸಮಸ್ಯೆಯನ್ನು ಕೇಳುತ್ತಿದ್ದಾರೆ. ಮತ್ತು ಪ್ರಸ್ತುತ ಹಿರಿಯ ವ್ಯಕ್ತಿಯು ಮುಖ್ಯಮಂತ್ರಿಗಳ ಎದುರು ಚೇರ್ ಮೇಲೆ ಕುಳಿತು ತಮ್ಮ ಸಮಸ್ಯೆಯ ವಿವರಣೆಯನ್ನು ಮುಖ್ಯಮಂತ್ರಿಗಳಿಗೆ ಹೇಳುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಈ ಎರಡು ಫೋಟೋಗಳು ತುಂಬಾ ವೈರಲ್ ಆಗುತ್ತಿದೆ. ಈ ಫೋಟೋಗಳನ್ನು ನೋಡಿದ ನಂತರ ನೇಟಿಜನ್ಸ್ ಗಳು ಕಾಮೆಂಟ್ನಲ್ಲಿ ಯೋಗಿ ಆದಿತ್ಯನಾಥ್ ಅವರ ಕಾರ್ಯವೈಖರಿಯ ಬಗ್ಗೆ ಪ್ರಶಂಸೆಯ ಮಳೆಯನ್ನೇ ಹರಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಯಾರೇ ಆಗಲಿ ಜನಸಾಮಾನ್ಯರ ಸಮಸ್ಯೆಗಳನ್ನು ಸರಿಯಾಗಿ ಕೇಳಿಕೊಂಡು ಅವುಗಳನ್ನು ಬಗೆಹರಿಸಲು ಕಿಂಚಿತ್ತಾದರೂ ಪ್ರಯತ್ನ ಮಾಡಿದರೆ ಎಷ್ಟೋ ಧನಾತ್ಮಕ ಬದಲಾವಣೆಗಳು ಸಮಾಜದಲ್ಲಿ ಕಂಡುಬರುತ್ತವೆ ಎಂದು ನೇಟಿಜನ್ಸ್ ಗಳು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತ ಮಾಡುತ್ತಿದ್ದಾರೆ.