UPSC Interview Questions : ತಿಳಿದುಕೊಳ್ಳಿ ನೀವು DM ಆಗಿದ್ದೀರಿ; ಎರಡು ಟ್ರೈನ್ ಗಳು ಡಿಕ್ಕಿಯಾಗಿದ್ದು ತಿಳಿದಾಗ ಮೊಟ್ಟ ಮೊದಲು ನೀವು ಮಾಡುವ ಕೆಲಸವೇನು?

 

ಸ್ಪರ್ಧಾ ಪರೀಕ್ಷೆಗಳಲ್ಲಿ ಉತ್ತಿರ್ಣವಾದ ನಂತರ ಮುಂದೆ ನಿಮಗೆ ಮೌಖಿಕ ಪರೀಕ್ಷೆಗಳಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಇಲ್ಲಿ ಕೇಳುವ ಪ್ರಶ್ನೆಗಳಿಂದ ನಿಶ್ಚಿತವಾಗಿಯೂ ತಲೆಯಲ್ಲಿ ಹುಳಗಳು ಬೀಳುತ್ತವೆ. ಆ ರೀತಿಯ ಪ್ರಶ್ನೆಗಳನ್ನು ಇಲ್ಲಿ ಎದುರಿಸಬೇಕಾಗುತ್ತದೆ. ಇದೇ ರೀತಿಯ ಅನೇಕ ಮಾರ್ಮಿಕ ಪ್ರಶ್ನೆಗಳನ್ನು ನಮ್ಮ ಇವತ್ತಿನ ಲೇಖನದಲ್ಲಿ ತೆಗೆದುಕೊಂಡು ಬಂದಿದ್ದೇವೆ.

ಚಿಕ್ಕಂದಿನಿಂದಲೂ ಅನೇಕ ವಿದ್ಯಾರ್ಥಿಗಳು ದೊಡ್ಡವರಾದ ಮೇಲೆ ದೊಡ್ಡ ದೊಡ್ಡ ಹುದ್ದೆಯ ಮೇಲೆ ಅಲಂಕೃತವಾಗಬೇಕೆಂದು ಕನಸುಗಳನ್ನು ಕಾಣುತ್ತಾರೆ. ಅದಕ್ಕಾಗಿ ಅನೇಕ ಸ್ಪರ್ಧಾ ಪರೀಕ್ಷೆಗಳನ್ನು ನೀಡುತ್ತಾರೆ. ಆದರೆ ಕೊನೆಯ ಹಂತಕ್ಕೆ ತುಂಬಾ ಕಡಿಮೆ ವಿದ್ಯಾರ್ಥಿಗಳು ಗುರಿ ಮುಟ್ಟಲು ಯಶಸ್ವಿಯಾಗುತ್ತಾರೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಉತ್ತೀರ್ಣರಾದಾಗ್ಯೂ ಅನೇಕ ವಿದ್ಯಾರ್ಥಿಗಳು ಓರಲ್ ಎಕ್ಸಾಂನಲ್ಲಿ ಕಷ್ಟ ಪಡುತ್ತಾರೆ. ಈ ಇಂಟರ್ ವ್ಯೂವ್ 15 ರಿಂದ 20 ನಿಮಿಷಗಳ ವರೆಗೆ ನಡೆಯುತ್ತದೆ. ಇಲ್ಲಿ ಅನೇಕ ವಿಚಿತ್ರವಾದ ಹಾಗೂ ತುಂಬಾ ಕನ್ಫ್ಯೂಸ್ ಮಾಡುವ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇಂಟರ್ ವ್ಯೂವ್ ತೆಗೆದುಕೊಳ್ಳುವವರು ಪ್ರಸ್ತುತ ಅಭ್ಯರ್ಥಿ ಎಮರ್ಜೆನ್ಸಿಯಲ್ಲಿ ಹಾಗೂ ಕಠಿಣ ಪ್ರಸಂಗಳಲ್ಲಿ ಹೇಗೆ ಸ್ಪಂದಿಸುತ್ತಾರೆ ಮತ್ತು ನಿರ್ಣಯ ತೆಗೆದುಕೊಳ್ಳುವ ಕ್ಷಮತೆ ಈತನಲ್ಲಿ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಓರೆಗೆ ಹಚ್ಚಿ ನೋಡುವ ಉದ್ದೇಶ ಹೊಂದಿರುತ್ತಾರೆ.

ಈಗ ಇಲ್ಲಿ ನೀಡಿದ ಈ ಪ್ರಶ್ನೆಗಳನ್ನು ಓದಿರಿ ಮತ್ತು ಅವುಗಳಿಗೆ ಉತ್ತರಿಸುವ ಯತ್ನ ಮಾಡಿ ಹಾಗೂ ನಿಮ್ಮ ಮೈಂಡ್ ರಿಫ್ರೆಶ್ ಮಾಡಿಕೊಳ್ಳಿ.

* ತಿಳಿದುಕೊಳ್ಳಿ ನೀವು DM ಆಗಿದ್ದೀರಿ; ಎರಡು ಟ್ರೈನ್ ಗಳು ಡಿಕ್ಕಿಯಾಗಿದ್ದು ತಿಳಿದಾಗ ಮೊಟ್ಟ ಮೊದಲು ನೀವು ಮಾಡುವ ಕೆಲಸವೇನು?

ಉತ್ತರ :- ಮೊಟ್ಟ ಮೊದಲು ನೀವು ಮಾಡುವ ಕೆಲಸವೇನು ಎಂದು ಕೇಳಿದ್ದೀರಿ, ಅದಕ್ಕೆ ಮೊದಲು ಯಾವ ಟ್ರೈನ್ ಡಿಕ್ಕಿಯಾಗಿವೆ ಎಂಬುದರ ಬಗ್ಗೆ ತಿಳಿದುಕೊಳ್ಳುವೆ. ಅಂದರೆ ಡಿಕ್ಕಿಯಾದ ಟ್ರೈನ್ ಪ್ಯಾಸೆಂಜರ್ ಟ್ರೈನ್ ಆಗಿವೆಯೋ ಇಲ್ಲ ಎರಡು ಗೂಡ್ಸ್ ಟ್ರೈನ್ ಗಳಾಗಿವೆ ಎಂಬುದನ್ನು ತಿಳಿದುಕೊಂಡು ಆನಂತರ ಮುಂದಿನ ಡಿಸಿಜನ್ ತೆಗೆದುಕೊಳ್ಳುವೆ.

* ಭಾರತದಲ್ಲಿ ಅಕ್ಕಿಯ ಕಣಜವೆಂದು ಯಾವ ರಾಜ್ಯಕ್ಕೆ ಗುರುತಿಸಲಾಗುತ್ತದೆ?

ಉತ್ತರ :- ಆಂಧ್ರಪ್ರದೇಶ

* ರವೀಂದ್ರನಾಥ್ ಟ್ಯಾಗೋರ್ ಅವರು ಭಾರತದ ಹೊರತಾಗಿ ಬೇರೆ ಯಾವ ದೇಶದ ರಾಷ್ಟ್ರಗೀತೆಯನ್ನು ಬರೆದಿದ್ದಾರೆ.

ಉತ್ತರ :- ಬಾಂಗ್ಲಾದೇಶ

* ಮುಳುಗುತ್ತಿರುದನ್ನು ಉಳಿಸಲು ಯಾರೂ ಮುಂದೆ ಬರುವುದಿಲ್ಲ, ಅದೇನು?

ಉತ್ತರ:- ಸೂರ್ಯಾಸ್ತ, ಸಾಯಂಕಾಲದ ಸಮಯದಲ್ಲಿ ಸೂರ್ಯ ಮುಳುಗುತ್ತಿರುವಾಗ ಯಾರು ಉಳಿಸಲು ಮುಂದಾಗುವುದಿಲ್ಲ.

* ಯಾವ ರೈಲ್ವೆ ಸ್ಟೇಷನ್ ಎರಡು ರಾಜ್ಯಗಳಲ್ಲಿ ಇಬ್ಭಾಗವಾಗಿದೆ?

ಉತ್ತರ :- ನವಾಪೂರ್ ರೈಲ್ವೆ ಸ್ಟೇಷನ್. ಇದು ಮಹಾರಾಷ್ಟ್ರ ಮತ್ತು ಗುಜರಾತ್ ಈ ಎರಡು ರಾಜ್ಯಗಳಲ್ಲಿ ವಿಭಜಿತವಾಗಿದೆ.

* ದೇಶದಲ್ಲಿ ಮೊಟ್ಟಮೊದಲ ಆಧಾರ ಕಾರ್ಡ್ ಯಾರಿಗೆ ನೀಡಲಾಯಿತು?

ಉತ್ತರ :- ಮಹಾರಾಷ್ಟ್ರದ ನಿವಾಸಿಯಾದ ರಂಜನಾ ಸೋನವಣೆ ಹೆಸರಿನ ಯುವತಿಗೆ 2010 ರಲ್ಲಿ ಮೊದಲ ಆಧಾರ್ ಕಾರ್ಡ್ ವಿತರಿಸಲಾಯಿತು.