ನಿಮ್ಮ ಹೆಂಡತಿಯ ಕೂದಲು ಸಹ ಈ ತರ ಉದ್ಧವಿದ್ದರೆ ಎಚ್ಚರ! ಇಲ್ಲದಿದ್ದರೆ ನಿಮಗೂ ಈ ಪರಸ್ಥಿತಿ ಬರುತ್ತೆ…..!!!

ಸೋಶಿಯಲ್ ಮೀಡಿಯಾದಲ್ಲಿ ನಿಮಗೆ ಎಲ್ಲಾ ಸಂಬಂಧಗಳಿಗೆ ಸಂಬಂಧಿಸಿದ ವಿಡಿಯೋಗಳು ನೋಡಲು ಸಿಗುತ್ತವೆ. ಒಮ್ಮೆ ತಾಯಿ-ಮಗಳ, ತಂದೆ-ಮಗನ, ಸಹೋದರ-ಸಹೋದರಿಯರ, ಪತಿ-ಪತ್ನಿಯ, ತಂದೆ-ಮಗಳ ಅಷ್ಟೇ ಏಕೆ ಗುರು–ಶಿಷ್ಯರ ವಿಡಿಯೋಗಳು ಸಹ ನೋಡಲು ಸಿಗುತ್ತವೆ.

ಈ ರೀತಿ ಸಂಬಂಧಗಳಿಗೆ ಸಂಬಂಧಿಸಿದ ವೀಡಿಯೊಗಳನ್ನು ನೋಡಲು ನೇಟಿಜನ್ಸ್ ಗಳು ತುಂಬಾ ಇಷ್ಟ ಪಡುತ್ತಾರೆ. ಅದಕ್ಕಾಗಿಯೇ ಈ ರೀತಿಯ ಕಂಟೆಂಟ್ ಗಳು ತುಂಬಾ ವೈರಲ್ ಆಗುತ್ತವೆ. ಈಗ ಇದೇ ರೀತಿಯ ಒಂದು ವಿಡಿಯೋ ನಿಮಗಾಗಿ ತಂದಿದ್ದೇವೆ. ಈ ವಿಡಿಯೋ ಪತಿ ಪತ್ನಿಯ ನಡುವೆ ನಡೆದ ಘಟನೆಯ ವೀಡಿಯೋ ಇದಾಗಿದೆ. ಸದ್ಯಕ್ಕೆ ಈ ವೀಡಿಯೋ ತುಂಬಾನೇ ಚರ್ಚೆಯಲ್ಲಿದೆ.

‘ಗಂಡ ಹೆಂಡತಿಯರ ಜಗಳ ಉಂಡು ಮಲಗುವ ತನಕ’ ಎಂಬ ಮಾತನ್ನು ಕೇಳಿದ್ದೇವೆ. ಅಷ್ಟೇ ಅಲ್ಲ ನಮ್ಮ ಜೀವನದಲ್ಲಿ ಸಹ ನಾವು ಅನುಭವಿಸಿದ್ದೇವೆ. ಹೀಗಾಗಿ ಸೋಶಿಯಲ್ ಮಿಡಿಯಾದಲ್ಲಿ ಗಂಡ ಹೆಂಡತಿಯರ ನಡುವೆ ನಡೆದ ಕೆಲವು ಪ್ರಸಂಗಗಳ ವಿಡಿಯೋ ತುಂಬಾನೇ ವೈರಲ್ ಆಗುತ್ತವೆ. ಹೆಂಡತಿಯರು ತಮ್ಮ ಗಂಡರು ತಮ್ಮನ್ನು ಬೇರೆ ಯಾರ ಜೊತೆಗೆ ಮಾತನಾಡಬಾರದು, ಬೇರೆಯವರ ಜೊತೆಗೆ ಚಾಟ್ ಮಾಡಬಾರದು, ಬೇರೆಯವರನ್ನು ಕಣ್ಣೆತ್ತಿ ನೋಡಬಾರದು ಎಂದು ಬಯಸುತ್ತಾರೆ. ಆದರೆ ಗಂಡ ತನ್ನ ಹೆಂಡತಿ ಎಷ್ಟೇ ಹೇಳಿದರು ಸಹ ಆತನ ಗುಣಗಳನ್ನು ಬಿಡುವುದೇ ಇಲ್ಲ. ಈ ವಿಷಯದ ಕುರಿತೇ ಈ ವಿಡಿಯೋ ಇದೆ.

ಈ ವೀಡಿಯೋದಲ್ಲಿ ಪತಿ, ಪತ್ನಿ ಇಬ್ಬರು ಕುಳಿತುಕೊಂಡು ತಮ್ಮ ಮೊಬೈಲ್ ನಲ್ಲಿ ಏನೋ ಮಾಡುತ್ತಿರುತ್ತಾರೆ. ಹೆಂಡತಿಯ ಮುಖ ಆಕಡೆ ಇದೆ ಎಂದುಕೊಂಡು ಗಂಡ ತನ್ನ ಮೊಬೈಲ್ ನಲ್ಲಿ ಬೇರೆ ಯುವತಿಯ ಫೋಟೋವನ್ನು ಜೂಮ್ ಮಾಡಿ ಪದೇ ಪದೇ ನೋಡುತ್ತಾನೆ. ನೋಡಿ ಸಾಕಾದ ನಂತರ ಹೆಂಡತಿಯ ಮುಖ ತನ್ನಡೆಗೆ ಮಾಡಬೇಕು ಎಂದು ಆಕೆಯನ್ನು ನೋಡಲು ಹೇಳುತ್ತಾನೆ. ಆದರೆ ಹೆಂಡತಿ ತುಂಬಾನೇ ಜಾಣೆ ಅನ್ನಿಸುತ್ತೆ. ಏಕೆಂದರೆ ಆಕೆಯ ಕೇಶರಾಶಿ ತುಂಬಾನೇ ಉದ್ಧವಾಗಿದ್ದವು ಹೀಗಾಗಿ ಆಕೆ ಬರಿ ಕೈ ಮಾತ್ರ ಮುಂದೆ ಮಾಡಿ ತನ್ನ ಮುಖವನ್ನು ಗಂಡನ ಮೊಬೈಲ್ ಕಡೆಗೆ ಮಾಡಿ ಮುಖದ ಮೇಲೆ ಬಿಟ್ಟಿರುತ್ತಾಳೆ. ಹೀಗಾಗಿ ಗಂಡನು ನೋಡಿರುವ ಫೋಟೋ ಈ ಹೆಂಡತಿ ಸಹ ನೋಡಿರುತ್ತಾಳೆ. ಇದನ್ನು ಅರಿತ ಗಂಡ ತುಂಬಾ ಶಾಕ್ ಆಗುತ್ತಾನೆ. ಈ ವೀಡಿಯೋ ನೋಡಿದ ನೆಟ್ಟಿಗರು ‘ನಿಮ್ಮ ಹೆಂಡತಿಯ ಕೂದಲು ಸಹ ಉದ್ಧವಾಗಿದ್ದರೆ ಎಚ್ಚರವಾಗಿರಿ” ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ವಿಡಿಯೋ ನೋಡಿ.

 

View this post on Instagram

 

A post shared by Venky Swathy (@venkyswathy)

ಪ್ರಸ್ತುತ ವೈರಲ್ ಆಗುತ್ತಿರುವ ಈ ವೀಡಿಯೋ ಇನ್ಸ್ಟಾಗ್ರಾಮ್ ನಲ್ಲಿ venkyswathy ಎಂಬ ಹೆಸರಿನ ಅಕೌಂಟ್ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವೀಡಿಯೋವನ್ನು ಸುಮಾರು ಐದು ಮಿಲಿಯನ್ ಕ್ಕಿಂತ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಈ ವಿಡಿಯೋವನ್ನು ಸುಮಾರು ಎರಡು ಲಕ್ಷಕ್ಕಿಂತ ಹೆಚ್ಚು ನೆಟ್ಟಿಗರು ಲೈಕ್ ಸಹ ಮಾಡಿದ್ದಾರೆ.