Articles

ಬಿಗ್ ಬಿ ಅಮಿತಾಬ್ ಅವರು ತಮ್ಮ ಮನೆಯ ಹತ್ತಿರದ ಬಂಗಲೆ SBI ಗೆ ನೀಡಿದರು ಬಾಡಿಗೆಗೆ; ತಿಂಗಳ ಬಾಡಿಗೆ ಕೇಳಿದರೆ ತಲೆಸುತ್ತಿ ಬರುತ್ತೆ…

ಬಾಲಿವುಡ್ ಸ್ಟಾರ್ ಅಮಿತಾಭ್ ಬಚ್ಚನ್ ಅವರು ತುಂಬಾ ಜನಪ್ರಿಯ ನಟರಾಗಿದ್ದಾರೆ. ಇವರು ಎಷ್ಟೊಂದು ಒಡೆತನದ ಮಾಲೀಕರಾಗಿದ್ದಾರೆ ಎಂಬುದು ತಿಳಿದುಕೊಳ್ಳಲು ಎಲ್ಲರಿಗೂ ಇಚ್ಛೆ ಇದ್ದೇ ಇರುತ್ತದೆ. ಹಾಗೆ ನೋಡಲಾಗಿ ಅಮಿತಾಬ್ ಅವರು ಕೋಟ್ಯಾವಧಿ ರೂಪಾಯಿಗಳ ಮಾಲೀಕರಾಗಿದ್ದಾರೆ. ಸರ್ವ ಸಾಮಾನ್ಯರಂತೆ ಅಮಿತಾಬ್ ಅವರು ತಮ್ಮ ಖಾಲಿ ಮನೆಯನ್ನು ವಿವಿಧ ಕಂಪನಿಗಳಿಗೆ ಬಾಡಿಗೆ ರೂಪದಲ್ಲಿ ನೀಡುತ್ತಾರೆ. ಇಂಥದೇ ಒಂದು ಬಂಗಲೆ ಅಮಿತಾಬ್ ಅವರು ಎಸ್ಬಿಐ ಬ್ಯಾಂಕಿಗೆ ಹದಿನೈದು ವರ್ಷಗಳವರೆಗೆ ಬಾಡಿಗೆಯ ಆಧಾರದ ಮೇಲೆ ನೀಡಿದ್ದಾರೆ.

ಸೂತ್ರಗಳಿಂದ ತಿಳಿದ ಮಾಹಿತಿಯ ಪ್ರಕಾರ ಅಮಿತಾಬ್ ಅವರು ಜಲಸಾ ಹೆಸರಿನ ತಮ್ಮ ಮನೆಯ ಹತ್ತಿರದ ಸ್ಥಳವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಹದಿನೈದು ವರ್ಷಗಳ ಕರಾರಿನ ಮೇಲೆ ಬಾಡಿಗೆಗೆ ಕೊಟ್ಟಿದ್ದಾರೆ. ಇದರ ಬದಲಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಾಡಿಗೆ ರೂಪದಲ್ಲಿ ಅಮಿತಾಬ್ ಅವರಿಗೆ ದೊಡ್ಡ ಮೊತ್ತವನ್ನು ನೀಡುತ್ತಿದೆ.

ಮುಂಬೈಯ ಉಪನಗರವಾದ ಬಾಂದ್ರಾದ ಜುಹು ಪರಿಸರದಲ್ಲಿಯ ಅಮ್ಮು ಮತ್ತು ವತ್ಸ ಬಂಗಲೆಯ ನೆಲ ಮಹಡಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಾಡಿಗೆಗೆ ತೆಗೆದುಕೊಂಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಮಿತಾಭ್ ಬಚ್ಚನ್ ಮತ್ತು ಅವರ ಮಗನಾದ ಅಭಿಷೇಕ್ ಬಚ್ಚನ್ ಅವರ ಜೊತೆಗೆ ಈ ಕರಾರನ್ನು ಮಾಡಿಕೊಂಡಿದೆ. ಒಂದು ನ್ಯೂಸ್ ರಿಪೋರ್ಟ್ ಪ್ರಕಾರ ಬಚ್ಚನ್ ಕುಟುಂಬಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರತಿ ತಿಂಗಳಿಗೆ 18.9 ಲಕ್ಷ ರೂಪಾಯಿಗಳನ್ನು ಬಾಡಿಗೆ ಸ್ವರೂಪದಲ್ಲಿ ನೀಡುತ್ತಿದೆ. ಇದರ ಹೊರತಾಗಿ ಬಾಡಿಗೆಯಲ್ಲಿ ಪ್ರತಿ 5 ವರ್ಷಕ್ಕೊಮ್ಮೆ 25% ಹೆಚ್ಚಳ ಮಾಡುವ ಕರಾರು ಆಗಿದೆ. ಅದರ ಪ್ರಕಾರ ಮುಂದಿನ ಐದು ವರ್ಷಗಳಲ್ಲಿ 23.62 ಲಕ್ಷ ಹಾಗೂ ಕೊನೆಯ ಐದು ವರ್ಷಗಳಲ್ಲಿ 29.53 ಲಕ್ಷ ರೂಪಾಯಿಗಳನ್ನು ಎಸ್ಬಿಐ ಬಾಡಿಗೆ ಸ್ವರೂಪದಲ್ಲಿ ಪಾವತಿಸಬೇಕಾಗಿದೆ. ಎಸ್ಬಿಐ ಬ್ಯಾಂಕ್ ಈಗಾಗಲೇ ಮೊದಲ ವರ್ಷದ ಬಾಡಿಗೆಯನ್ನು ಮುಂಗಡವಾಗಿ ನೀಡಿದೆ.

ಅಮಿತಾಬ್ ಅವರ ಈ ಬಂಗಲೆ ಅವರದೇ ಆದ ಜಲಸಾ ಹೆಸರಿನ ಬಂಗಲೆಯ ಹತ್ತಿರವೇ ಇದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಾಡಿಗೆಯ ಆಧಾರದ ಮೇಲೆ ತೆಗೆದುಕೊಂಡ ಒಟ್ಟು ಜಾಗ 3150 ಸ್ಕ್ವೇರ್ ಫೀಟ್ ಇದೆ. ಈ ಜುಹೂನಲ್ಲಿಯೇ ಅಮಿತಾಬ್ ಅವರ ಜಲಸಾ ಜೊತೆಗೆ ಪ್ರತಿಕ್ಷಾ, ಜನಕ್, ಅಮ್ಮು, ವತ್ಸ ಬಂಗಲೆಗಳು ಇವೆ.

Leave a Comment

Your email address will not be published. Required fields are marked *