VIDEO : ಸೀರೆ ಧರಿಸಿರುವ ನಟಿಯ ವಿಡಿಯೊ ವೈರಲ್! ನಟಿ ಊರ್ವಶಿ ಉಟ್ಟಿರುವ ಈ ಸೀರೆಯ ಬೆಲೆ 425500!
ನಟಿ ಊರ್ವಶಿ ರೌತೆಲಾ ಅವರನ್ನು ಇಂದು ಯಾರು ಇಷ್ಟಪಡುವುದಿಲ್ಲ ಹೇಳಿ? ಊರ್ವಶಿ ಅವರು ತಮ್ಮ ಕೆಲಸದಿಂದ ಹಿಡಿದು ತಮ್ಮ ಫೋಟೋಗಳವರೆಗೆ ಅಭಿಮಾನಿಗಳ ಮನ ಗೆದ್ದಿದ್ದಾರೆ. ಅಂದಹಾಗೆ ಇತ್ತೀಚೆಗೆ ಊರ್ವಶಿ ರೌತೆಲಾ ಅವರು ಮುಸ್ಕಾನ್ ಅವರ ಮೆಹಂದಿ ಸಮಾರಂಭದಲ್ಲಿ ಭಾಗವಹಿಸಿದ್ದರು, ಈ ಶತಮಾನದ ಪ್ರಸಿದ್ಧ ಮೆಘಾಸ್ಟಾರ್ ಮನೋಜ್ ಕುಮಾರ್ ಅವರ ಮೊಮ್ಮಗಳು ಆಕೆ.
ಈ ಸಮಯದಲ್ಲಿ ಆಕೆ ತುಂಬಾ ಸುಂದರವಾಗಿ ಕಾಣುತ್ತಿದ್ದಳು ಮತ್ತು ಈಗ ಅಕೆಯ ಫೋಟೋಗಳು ಮತ್ತು ವೀಡಿಯೊಗಳು ಹೆಚ್ಚು ವೈರಲ್ ಆಗುತ್ತಿವೆ. ಈ ಮೆಹಂದಿ ಸಮಾರಂಭದಲ್ಲಿ ನಟಿ ಊರ್ವಶಿ ಅವರು ಮಲ್ಟಿ ಕಲರ್ ಸೀರೆಯನ್ನು ಧರಿಸಿದ್ದರು. ಈಗ ಅವರ ಆ ಸೀರೆಯನ್ನು ತುಂಬಾ ಇಷ್ಟಪಡುತ್ತಿದ್ದು, ಹೆಂಗಳೆಯರಿಂದ ಭಾರಿ ಡಿಮ್ಯಾಂಡ್ ಬಂದಿದೆಯಂತೆ.

ವಾಸ್ತವವಾಗಿ ಅವರ ಸೀರೆ ಮೂಲ ಕ್ಲಾಸಿಕ್ ಪಟೋಲಾ ರೆಡ್ ಸೀರೆಯಾಗಿದ್ದು, ಇದನ್ನು ಗುಜರಾತ್‌ನಿಂದ ವಿಶೇಷವಾಗಿ ಆರ್ಡರ್ ಮಾಡಿ ತರಿಸಲಾಗಿದೆ. ಈ ಸಮಯದಲ್ಲಿ ತನ್ನ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ನಟಿ ಈ ಸೀರೆಯಲ್ಲಿ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಅದನ್ನು ನೀವು ನೋಡಬಹುದು.
ಈ ಚಿತ್ರಗಳನ್ನು ಪೋಸ್ಟ್ ಮಾಡಿದ ನಟಿ, “ಗುಜರಾತ್‌ನಲ್ಲಿ ಮಾಡಿದ ಪಟೋಲಾ ಸೀರೆ ಧರಿಸುವುದನ್ನು ನಾನು ತುಂಬಾ ಇಷ್ಟಪಡುತ್ತೇನೆ, ಪ್ರತಿ ಕ್ಲಾಸಿಕ್ ಪಟೋಲಾ ಸೀರೆ ಸುಮಾರು 300 ವರ್ಷಗಳ ಕಾಲ ಏನೂ ಆಗಲ್ಲ, ಮತ್ತು ಅದರ ಬಣ್ಣ ಕೂಡ ಕೆಡಲ್ಲ ಎಂದಿದ್ದಾರೆ. ಅವರು ಎದ್ದುಕಾಣುವ ಗಾಢ ಬಣ್ಣಗಳ ಸೀರೆ ಉಡುವಲ್ಲಿ ಹೆಸರುವಾಸಿಯಾಗಿದ್ದಾರೆ.
ಊರ್ವಶಿ ರೌತೆಲಾ ಧರಿಸಿರುವ ಮಲ್ಟಿ ಕಲರ್ ಮತ್ತು ರೆಡ್ ಬಾರ್ಡರ್ ಸೀರೆಯನ್ನು ಡಿಸೈನರ್ ಆಶಾ ಗೌತಮ್ ಅವರು ತಯಾರಿಸಿದ್ದ, ಇದಕ್ಕೆ ನೀಲಿ ಸ್ಲೀವ್ ಲೆಸ್ ಬ್ಲೌಸ್ ಮ್ಯಾಚ್ ಮಾಡಲಾಗಿದೆ. ಈ ಸೀರೆಯ ಬೆಲೆ 4,25,500 ರೂ. ಮತ್ತು ಸೀರೆಯೊಂದಿಗೆ ಅವರು ಧರಿಸಿರುವ ಮ್ಯಾಚಿಂಗ್ ಆಭರಣ ಪೂಜಾ ಡೈಮಂಡ್ ನದ್ದಾಗಿದೆ. ಈ ಆಭರಣಗಳ ಬೆಲೆ 24,50,500 ರೂ.!!
ಇನ್ನು ಊರ್ವಸಿ ಧರಿಸಿರುವ ಅಷ್ಟೂ ಸಾಮಗ್ರಿಗಳ ಲೆಕ್ಕ ಹಾಕಿದರೆ 58,75,500 ರೂ. ಆಗುತ್ತದೆ!! ಕೆಲಸದ ಬಗ್ಗೆ ಮಾತನಾಡುವುದಾದರೆ, ಊರ್ವಶಿ ರೌತೆಲಾ ದೊಡ್ಡ ಬಜೆಟ್ ನ ತಮಿಳು ಚಿತ್ರದ ಮೂಲಕ ತಮಿಳಿಗೆ ಪಾದಾರ್ಪಣೆ ಮಾಡಲಿದ್ದಾರೆ. ಈ ಚಿತ್ರದಲ್ಲಿ ಅವರು ಮೈಕ್ರೋ ಬಯಾಲಜಿಸ್ಟ್ ಮತ್ತು ಐಐಟಿಯನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.