ವ್ಯಾಲೆಂಟೈನ್ ಡೇ ಸ್ಪೆಷಲ್..! ಇಲ್ಲಿ ನೋಡಿ ಹಳ್ಳಿಯ ಸೊಗಡು, ಜವಾರಿ ಜೋಡಿ; ಇಂಗ್ಲಿಷ್ ನಲ್ಲಿ ಪ್ರಪೋಸ್👌
ಸದ್ಯ ಎಲ್ಲೆಡೆಯೂ ಫೆಬ್ರುವರಿ ತಿಂಗಳ ಬರುವ ಮಧುರ ಪ್ರೇಮದ ಆಗಮನವಾಗಿದೆ. ಫೆಬ್ರವರಿ 7 ರಿಂದ 14 ರ ವರೆಗೆ ಹದಿಹರೆಯದ ಯುವಪ್ರೇಮಿಗಳು ತಮ್ಮ ತಮ್ಮ ಸಂಗಾತಿಯ ಸುಂದರ ಕನಸಿನಲ್ಲಿ ತೇಲಾಡುತ್ತಿದ್ದಾರೆ. ಫೆಬ್ರವರಿ 7 ರಿಂದ ಈ ಜೋಡಿಗಳ ದಿನಕ್ಕೊಂದು ಇವೆಂಟ್ಗಳು ಶುರುವಾಗಿವೆ. ಪ್ರತಿಯೊಂದು ದಿನವನ್ನು ಯಾವ ರೀತಿಯಲ್ಲಿ ಸೆಲೆಬ್ರೇಟ್ ಮಾಡಬೇಕು ಎನ್ನುವ ತಯಾರಿಯಲ್ಲಿ ಇವರ ದಿನಗಳು ಸಾಗುತ್ತಿವೆ.
ಫೆಬ್ರವರಿ ತಿಂಗಳ ಬಂದರೆ ಸಾಕು ಯುವಪ್ರೇಮಿಗಳಿಗೆ ದೊಡ್ಡ ಪರ್ವ ಬಂದ ಹಾಗೆ ಆಗುತ್ತದೆ. ಈ ಪರ್ವವನ್ನು ಆಚರಿಸಲು ತಮ್ಮಿಂದ ಸಾಧ್ಯವಾಗುವ ಅತೀ ಮೇಲ್ಮಟ್ಟದ ತಯಾರಿಯನ್ನು ಇವರು ಮಾಡಿಕೊಂಡಿರುತ್ತಾರೆ. ಫೆಬ್ರವರಿ 7 ಇದು ರೋಜ್ ಡೇ, ಫೆಬ್ರವರಿ 8 ಇದು ಪ್ರಪೋಸ್ ಡೇ, 9 ನೇ ದಿನಾಂಕ ಚಾಕ್ಲೆಟ್ ಡೇ, ನಂತರ ಬರುವ 10 ನೇಯ ದಿನಾಂಕ ಟೆಡ್ಡಿ ಡೇ, ಆಮೇಲೆ ಬರುವ 11 ಈ ದಿನಾಂಕ ಪ್ರಾಮಿಸ್ ಡೇ, ನಂತರದ್ದು 12 ನೇ ತಾರೀಕು ಹಗ್ ಡೇ, 13 ದಿನಾಂಕ ಇದು ಕಿಸ್ ಡೇ ಆದ ನಂತರ ಕೊನೆಯದಾಗಿ ಫೆಬ್ರುವರಿ 14 ರಂದು ವೆಲೆಂಟೈನ್ ಡೇ ಎಂದು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಎಷ್ಟೋ ಯುವಪ್ರೇಮಿಗಳು ತಮ್ಮ ತಮ್ಮ ಸಂಗಾತಿಗೆ ಆಯ್ಕೆ ಮಾಡುತ್ತಾರೆ. ಈ ಎಲ್ಲ ಗದ್ದಲದಲ್ಲಿ ಕೆಲವು ಹೃದಯಗಳು ಒಡೆದು ನುಚ್ಚುನೂರು ಆಗುವದುಂಟು.
ಇರಲಿ ಸದ್ಯ ಇದೇ ಸೆಲೆಬ್ರೇಶನ್ ಗೆ ಸಂಬಂಧಪಟ್ಟ ಹಳ್ಳಿಯ ಜವಾರಿ ಜೋಡಿಯ ಸುಂದರ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ. ಅದಕ್ಕಾಗಿಯೇ ಎಲ್ಲರೂ ನೋಡುವ ಮುನ್ನ ಆದಷ್ಟು ಶೀಘ್ರದಲ್ಲಿ ನಿಮಗಾಗಿ ಈ ವಿಡಿಯೋವನ್ನು ತಂದಿದ್ದೇವೆ.
ಪ್ರಸ್ತುತ ಈ ವಿಡಿಯೋದಲ್ಲಿ ಕಂಡು ಬರುವ ದೃಶ್ಯ ಯಾರಿಗೆ ಆಗಲಿ ಇಷ್ಟವಾಗುವುದು. ಅಂತಹ ಸುಂದರ ಮತ್ತು ಮುಗ್ಧ ಪ್ರೀತಿಯ ದೃಶ್ಯವನ್ನು ಇಲ್ಲಿ ನೋಡಬಹುದು. ಉರಿಯುವ ಸುಡುಬಿಸಿಲಿನಲ್ಲಿ ಕೆಲವರು ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಒಂದು ಜೋಡಿಯು ತಮ್ಮ ಪ್ರೀತಿಯನ್ನು ಪ್ರಪೋಸ್ ಮಾಡುವದನ್ನು ಇಲ್ಲಿ ನೋಡಬಹುದು. ಹೆಚ್ಚಾಗಿ ಹಳ್ಳಿಗಳಲ್ಲಿ ಸ್ತ್ರೀಯರು ತುಂಬಾ ನಾಚಿಕೊಳ್ಳುತ್ತಾರೆ. ಆದರೆ ಇಲ್ಲಿ ಪುರುಷ ತನ್ನ ಪ್ರೀತಿಯ ಹೆಂಡತಿ ಮಾಡುತ್ತಿರುವ ಪ್ರಪೋಸ್ ನ್ನು ನೋಡಿ ನಾಚಿ ನೀರಾಗಿದ್ದಾನೆ. ತೋಟದಲ್ಲಿ ಕೆಲಸ ಮಾಡುವಾಗ ಹೆಂಡತಿಯು ಕೈಯಲ್ಲಿ ಗುಲಾಬಿ ಹೂವನ್ನು ಹಿಡಿದು ತನ್ನ ಪ್ರೀತಿಯ ಮುದ್ದು ಗಂಡನಿಗೆ “I Love You” ಎಂದು ಹೇಳುತ್ತಾಳೆ. ಈ ಶಬ್ದವನ್ನು ಕೇಳಿದ ನಂತರ ಗಂಡ ನಾಚಿ ನೀರಾಗಿ ಪ್ರೀತಿಯಿಂದ ಹೆಂಡತಿಗೆ ತಟ್ಟುತ್ತಾನೆ. ಈ ಜವಾರಿ ಜೋಡಿಯ ಸುಂದರವಾದ ಅಷ್ಟೇ ಮುಗ್ಧವಾದ ಈ ವಿಡಿಯೋ ಎಲ್ಲರಿಗೂ ಇಷ್ಟವಾಗುತ್ತಿದೆ.
ಮೊದಲು ಇಲ್ಲಿ ನೋಡಿ ಈ ವಿಡಿಯೋ…
ಈ ಪ್ರೀತಿಯ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದೇ ತಡ ಹುಚ್ಚೆದ್ದು ವೈರಲ್ ಆಗುತ್ತಿದೆ. ಪ್ರಸ್ತುತ ಈ ವಿಡಿಯೋ ಇಲ್ಲಿಯವರೆಗೆ 39.7 ಮಿಲಿಯನ್ಗಳವರೆಗೆ ವೀಕ್ಷಣೆಯನ್ನು ಪಡೆದಿದ್ದು, ಎರಡು ಮಿಲಿಯನ್ ಗಿಂತಲೂ ಹೆಚ್ಚು ಮೆಚ್ಚುಗೆಯನ್ನು ಗಳಿಸಿದೆ.
ಇನ್ನು ಈ ವಿಡಿಯೋಗೆ ಬಂದ ಪ್ರತಿಕ್ರಿಯೆಗಳ ಬಗ್ಗೆ ಹೇಳುವುದಾದರೆ ನೆಟ್ಟಿಗರು ಹೃದಯ ತುಂಬಿ ಈ ಜೋಡಿಗೆ ಹರಸಿದ್ದಾರೆ. ಒಬ್ಬ ಯೂಸರ್ ಇವರ ಮುಖದ ಮೇಲೆ ಕಂಡು ಬರುತ್ತಿರುವ ಸಂತೋಷ ಎಲ್ಲಕ್ಕೂ ಮತ್ವದ್ದಾಗಿದೆ ಎಂದಿದ್ದಾನೆ. ಇನ್ನೊಬ್ಬ ಯೂಸರ್ ಈ ವಯಸ್ಸಿನಲ್ಲಿಯೂ ಇವರಂತೆ ಸುಖವಾಗಿರುವುದು ಅಷ್ಟೊಂದು ಸರಳವಲ್ಲ ಎಂದಿದ್ದಾನೆ. ಒಟ್ಟಿನಲ್ಲಿ ನೇಟಿಜನ್ಸ್ ಗಳಿಗೆ ಈ ವಿಡಿಯೋ ಮಾತ್ರ ತುಂಬಾ ಖುಷಿ ನೀಡಿದೆ.