Video: ಅಂಗಡಿ ಮಾಲೀಕ ಒಂದು ಬಾಳೆಹಣ್ಣು ಬೇಡಿದಕ್ಕಾಗಿ ಹೊಡೆದೋಡಿಸಿದ, ಸಿಟ್ಟಿಗೆದ್ದು ವಿಚಿತ್ರವಾಗಿ ಸೇಡು ತೀರಿಸಿಕೊಂಡ ಮಂಗ!!!
ಮಂಗ ಇದೊಂದು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಚರ್ಚೆಯಲ್ಲಿರುವ ಪ್ರಾಣಿಯಾಗಿದೆ. ಏಕೆಂದರೆ ಏನಾದರೂ ಒಂದು ಕೃ#ತ್ಯ ಮಾಡುವ ಮೂಲಕ ನೆಟ್ಟಿಗರ ಮುಂದೆ ಸದಾ ಚರ್ಚೆಯಲ್ಲಿ ಬರುವದು. ಮೊನ್ನೆ ತಾನೇ ನಾಯಿಮರಿಯನ್ನು ಸಾ#ಯಿಸುವ ಮೂಲಕ ಮಂಗ ತುಂಬಾ ಚರ್ಚೆಯಲ್ಲಿತ್ತು. ಹೀಗಾಗಿ ಮಂಗ ಯಾವಾಗಲೂ ತನ್ನ ವಿಚಿತ್ರವಾದ ಕಾರ್ಯದಿಂದ ಜನರ ಮನಸ್ಸು ಸೆಳೆಯುತ್ತದೆ. ಅಲ್ಲದೆ ಕೆಲವೊಮ್ಮೆ ಇದು ಜನರಿಗೆ ತುಂಬಾ ತೊಂದರೆಯನ್ನು ಕೊಡುವ ಪ್ರಾಣಿ ಸಹ ಇದಾಗುತ್ತದೆ.
ಸದ್ಯಕ್ಕೆ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಈ ವಿಡಿಯೋ ಮಂಗನ ವಿಡಿಯೋ ಇದಾಗಿದ್ದು ಇದರಲ್ಲಿ ಮಂಗನ ವಿಚಿತ್ರ ಕಾರ್ಯ ನೋಡಿದರೆ ನಿಮಗೂ ಸಹ ಆಶ್ಚರ್ಯ ವಾಗುವದು. ಏಕೆಂದರೆ ಮಂಗನ ಈ ಕಾರ್ಯ ತುಂಬಾ ವಿಚಿತ್ರವಾಗಿದೆ.
ಪ್ರಸ್ತುತ ಈ ವಿಡಿಯೋದಲ್ಲಿ ಒಂದು ಹಣ್ಣಿನ ಅಂಗಡಿ ಇದೆ. ಆ ಅಂಗಡಿಯ ಬದಿಯಲ್ಲಿ ಕೆಲವು ಮಂಗಗಳು ವಾಸ ವಾಗಿರುತ್ತವೆ. ಹೀಗಾಗಿ ಅದರಲ್ಲಿಯ ಒಂದು ಮಂಗ ಈ ಹಣ್ಣಿನ ಅಂಗಡಿಗೆ ಬಂದು ಮಾಲೀಕನಿಗೆ ಒಂದು ಬಾಳೆ ಹಣ್ಣು ಕೇಳುತ್ತದೆ ಆದರೆ ಮಾಲೀಕ ದಿನಾಲೂ ಹೀಗೆ ಮಾಡುತ್ತೆ ಅಂತ ಕೋಪಗೊಂಡು ಮಂಗವನ್ನು ಅಲ್ಲಿಂದ ಹೊಡೆದು ಓಡಿಸುತ್ತಾನೆ. ಇದನ್ನು ತನ್ನ ಮನದಲ್ಲಿ ಇಟ್ಟುಕೊಂಡು ಮಂಗ ಈತನಿಗೆ ಸರಿಯಾಗಿ ಬುದ್ಧಿ ಕಲಿಸಬೇಕು ಎಂದು ಮನದಲ್ಲಿ ವಿಚಾರ ಮಾಡುತ್ತೆ.
ಕೆಲವು ಸಮಯದ ನಂತರ ಮಂಗ ಸಿಟ್ಟಿಗೆದ್ದು ಆ ಹಣ್ಣಿನ ಅಂಗಡಿಯ ಮೇಲ್ಭಾಗದಲ್ಲಿ ಯಾರಿಗೂ ಕಾಣದೆ ಹತ್ತುತ್ತದೆ. ಮೇಲ್ಭಾಗದಲ್ಲಿ ಹೋಗಿದ ಮೇಲೆ ಮಾಲೀಕ ತನ್ನ ಅಂಗಡಿಯ ಎದುರುಗಡೆ ಒಂದು ದಾರದ ಮೂಲಕ ಬಾಳೆಹಣ್ಣಿನ ಗೊನೆಯನ್ನು ಜೋತು ಬಿಟ್ಟಿರುವುದನ್ನು ನೋಡುತ್ತದೆ ನಂತರ ಸಾವಕಾಶವಾಗಿ ಆ ದಾರವನ್ನು ಮೇಲಕ್ಕೆ ಜಗ್ಗುತ್ತದೆ ಜಗ್ಗಿದ ಕೂಡಲೇ ಬಾಳೆಹಣ್ಣಿನ ಪೂರ್ಣ ಗೊನೆ ಸಹ ಮೇಲೆ ಬರುತ್ತದೆ ಇದನ್ನು ಕಂಡು ಮಾಲೀಕ ಇನ್ನೇನು ಆ ಬಾಳೆ ಹಣ್ಣು ಕಸಿದುಕೊಳ್ಳಬೇಕು ಅನ್ನೋವಷ್ಟರಲ್ಲಿ ಮಂಗ ಅಲ್ಲಿಂದ ಹಾರಿ ಹೋಗುತ್ತದೆ. ಒಂದು ಬಾಳೆ ಹಣ್ಣು ಕೊಡದ ಕಾರಣ ಇಡೀ ಬಾಳೆಹಣ್ಣಿನ ಗೊನೆಯನ್ನೇ ತಗೆದುಕೊಂಡು ಓಡಿ ಹೋಯಿತು.
ವಿಡಿಯೋ ನೋಡಿ.
ಪ್ರಸ್ತುತ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಶೇರ ಮಾಡಲಾಗಿದೆ. ಇದನ್ನು ಕಂಡು ಅನೇಕ ನೆಟ್ಟಿಗರು ಲೈಕ್ಸ್ ಮತ್ತು ಕಾಮೆಂಟ್ ಮಾಡುತ್ತಿದ್ದಾರೆ. ನೆಟ್ಟಿಗರು ತಮ್ಮ ಕಾಮೆಂಟ್ ನಲ್ಲಿ ಮಂಗನ ಈ ಕಾರ್ಯಕ್ಕೆ ಹೊಗಳಿದ್ದಾರೆ. ಇನ್ನೂ ಕೆಲವರು ಮಂಗನ ಕಿತಾಪತಿಯ ಕುರಿತು ತಮಾಷೆಯ ಕಾಮೆಂಟ್ ಮಾಡಿದ್ದಾರೆ.