Video: ಆಫೀಸ್ ನಲ್ಲಿ ಕೆಲಸ ಮಾಡುತ್ತಲೇ ಡ್ಯಾನ್ಸ್ ಮಾಡುತ್ತಿದ್ದಳು ಯುವತಿ, ಅಷ್ಟರಲ್ಲಿ ಬಾಸ್ ಬಂದ…..

ಕಚೇರಿಯಲ್ಲಿ ಕೆಲಸ ಮಾಡುವಾಗ ಅನೇಕರಿಗೆ ಬೇಸರವಾಗುತ್ತದೆ.  ಇದರಿಂದ ಕೆಲವರು ಟೀ ಕುಡಿದು ಬೇಸರವನ್ನು ಕಳೆದರೆ ಇನ್ನು ಕೆಲವರು ಹಾಡುಗಳನ್ನು ಕೇಳುತ್ತ ಬೇಸರವನ್ನು ಕಳೆಯುತ್ತಾರೆ. ಹೀಗಿರುವಾಗ ಒಬ್ಬ ಹುಡುಗಿ ತನ್ನ ಆಫೀಸಿನಲ್ಲಿ ಲೀಲಾಜಾಲವಾಗಿ ಡ್ಯಾನ್ಸ್ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆ ಹುಡುಗಿ  ಮನಸೋಕ್ತವಾಗಿ ಡ್ಯಾನ್ಸ್ ಮಾಡುತ್ತಿರುವಾಗ ಅವಳ ಹಿಂದುಗಡೆ ಬಾಸ್ ಬಂದು ನಿಲ್ಲುತ್ತಾನೆ. ಈ ಯುವತಿ ಆತನ ಆಫೀಸಿನಲ್ಲಿ ಸ್ವಚ್ಛತೆಯನ್ನು ಮಾಡುತ್ತಲೇ ಮನಸ್ಸು ಬಿಚ್ಚಿ ಡ್ಯಾನ್ಸ್ ಮಾಡುತ್ತಿರುವ ದೃಶ್ಯ ಬಾಸ್ ನೋಡುತ್ತಾನೆ. ಈ ವೀಡಿಯೋ ನೋಡಿ ಅನೇಕರು ಹೊಗಳಿದ್ದಾರೆ ಅಷ್ಟೇ ಅಲ್ಲ ಕಾಮೆಂಟ್ ಸಹ ಮಾಡಿದ್ದಾರೆ.

ಆಫೀಸಿನ ಕೆಲಸ  ಯಾವಾಗ ಮುಗಿಯುತ್ತದೆ ಅದರಿಂದ ಯಾವಾಗ ಮುಕ್ತರಾಗಬೇಕು ಎಂದು ಎಲ್ಲರೂ ಭಾವಿಸುತ್ತಾರೆ.   ಆದರೆ ವೀಡಿಯೊದಲ್ಲಿರುವ ಹುಡುಗಿ ತನ್ನ ಕೆಲಸವನ್ನು ಆನಂದದಿಂದ ಮಾಡುತ್ತಿರುವ ದೃಶ್ಯ ಕಂಡು ಬರುತ್ತದೆ. ಅನೇಕರು ತಮ್ಮ ಕೆಲಸವನ್ನು ತುಂಬಾ ಸಂತೋಷದಿಂದ ಮಾಡುತ್ತಾರೆ.

ಈ ಯುವತಿಯ ಕೆಲಸ ಆಫೀಸ್ ಸ್ವಚ್ಛಗೊಳಿಸುವ ಕಾರ್ಯವಾಗಿತ್ತು. ಅನೇಕರಿಗೆ ಈ ಕೆಲಸ ತುಂಬಾ ಬೇಸರವೆನಿಸುತ್ತೆ ಅಲ್ಲದೆ ಕೆಲವರು ಈ ಕೆಲಸವನ್ನು ತುಂಬಾ ಕೀಳಾಗಿ ಸಹ ನೋಡುತ್ತಾರೆ. ಆದರೆ ನಾವು ಯಾವುದೇ ಕೆಲಸ ಮನಸ್ಸಿನಿಂದ ಮಾಡಲು ನಿರ್ಧಾರ ಮಾಡಿದರೆ ಸಾಕು ಆ ಕೆಲಸವನ್ನು ಎಂತಹದೇ ಇರಲಿ ಮಾಡಲು ಬೇಸರ ಬರುವದಿಲ್ಲ. ಯಾವುದೇ ಕೆಲಸ ಬೇಜಾರು ತರುವದಿಲ್ಲ ಎಂಬುದು ಈ ಯುವತಿ ತನ್ನ ಕೆಲಸ ಮಾಡುವ ಶೈಲಿಯ ಮುಖಾಂತರ ತಿಳಿಸುತ್ತಿದ್ದಾಳೆ.

ಕೋರಿಯನ್ ಮ್ಯೂಜಿಕ್ ಮೇಲೆ ತನ್ನ ಲಯ ಹಿಡಿದುಕೊಂಡು ಡ್ಯಾನ್ಸ್ ಮಾಡುತ್ತಿರುವ ಈ ಯುವತಿಗೆ ತನ್ನ ಹಿಂದುಗಡೆ ಬಾಸ್ ಬಂದದ್ದು ಗೊತ್ತೇ ಆಗಲಿಲ್ಲ ಏಕೆಂದರೆ ಅಷ್ಟೊಂದು ಲೀಲಾಜಾಲವಾಗಿ ಡ್ಯಾನ್ಸ್ ನಲ್ಲಿ ತೇಲಾಡುತ್ತಿದ್ದಳು ತದನಂತರ  ಹಿಂದೆ ತಿರುಗಿ ನೋಡಿದಾಗ ಬಾಸ್ ಕಾಣುತ್ತಾನೆ, ಬಾಸ್ ಕಂಡೊಡನೆ ಒಮ್ಮಿಂದೊಮ್ಮಿಗೆ ತನ್ನ ಡ್ಯಾನ್ಸ್ ನಿಲ್ಲಿಸುತ್ತಾಳೆ. ಡ್ಯಾನ್ಸ್ ನಿಲ್ಲಿಸಿ ಬಾಸ್ ನನ್ನು ಕಂಡು  ನಾಚುತ್ತ , ಮುಗುಳ್ನಗೆ ಚೆಲ್ಲುತ್ತಾ ಅಲ್ಲಿಂದ ಹೋಗುತ್ತಾಳೆ.

ವೀಡಿಯೋ ನೋಡಿ

ಈ ವಿಡಿಯೋ ನೋಡಿದ ಅನೇಕ ನೆಟ್ಟಿಗರು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಇದರಲ್ಲಿ ಈ ಯುವತಿಗೆ ಬಾಸ್ ಗೆ ನಾಚಿಗೆ ಪಡುವ ಅವಶ್ಯಕತೆ ಇಲ್ಲ ಎಂದು ಸಹ ಕಾಮೆಂಟ್ ಮಾಡಿದ್ದಾರೆ. ಪ್ರತಿಕ್ರಿಯೆ ಏನೇ ಆಗಿರಲಿ ಆದರೆ ನೆಟ್ಟಿಗರಿಗೆ ಈ ಯುವತಿಯ ವಿಡಿಯೋ ತುಂಬಾನೇ ಲೈಕ್ ಆಗಿದೆ.