Video; ಆಮೆಯನ್ನು ತಿಂದು ಅದರ ಕವಚ ತಲೆ ಮೇಲೆ ಹೊತ್ತು ತಿರುಗಿದ ಕೊಮೊಡೋ ಡ್ರಾಗನ್! ಸೊಕ್ಕಿನ ಬಿಲ್ಡಪ್ ಕೊಟ್ಟ ರೀತಿ ಸ್ವಲ್ಪ ನೀವೂ ನೋಡಿ.
ಆಮೆಯ ಬೇಟೆಯಾಡುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಯಾಕೆಂದರೆ ಅಪಾಯ ಕಾಣುತ್ತಲೇ ಆಮೆ ತನ್ನ ಅಂಗಾಂಗಗಳನ್ನು ಬಿರುಸಾದ ಕವಚದೊಳಗೆ ಸೆಳೆದುಕೊಳ್ಳುತ್ತದೆ. ಅಮೆಯ ಕವಚ ತುಂಬಾ ಕಠಿಣವಾಗಿರುವದರ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಈ ಕವಚ ಮೊಸಳೆಯ ಚೂಪಾದ ಹಲ್ಲುಗಳಿಂದಲೂ ಓಡೆಯುವುದಿಲ್ಲ. ಆದರೆ ಇಂಥ ಅಸಾಧ್ಯ ಕೆಲಸವನ್ನು ಕೊಮೋಡೋ ಡ್ರ್ಯಾಗನ್ ಸಾಧ್ಯ ಮಾಡಿ ತೋರಿಸಿದೆ. ಕೆಲವೇ ಕೆಲವು ಕ್ಷಣಗಳಲ್ಲಿ ಈ ಡ್ರ್ಯಾಗನ್ ಆಮೆಯನ್ನು ತಿಂದು ಹೊಟ್ಟೆ ತುಂಬಿಸಿಕೊಂಡಿದೆ. ಆಶ್ಚರ್ಯದ ಸಂಗತಿ ಏನೆಂದರೆ ಈ ಕೋಮುಡೋ ಡ್ರ್ಯಾಗನ್ ಆಮೆಯನ್ನು ತಿಂದು ಮುಗಿಸಿದ ನಂತರ ಅದರ ಕವಚವನ್ನು ತಲೆಯ ಮೇಲೆ ಹೊತ್ತು ತುಂಬಾ ಆತ್ಮವಿಶ್ವಾಸದಿಂದ ಸೊಕ್ಕಿನಿಂದ ತಿರುಗಾಡಿದೆ.
ನೋಡಿ ಈ ಕೊಮೊಡೋ ಡ್ರ್ಯಾಗನ್ ನ ವಿಡಿಯೋ…
https://twitter.com/fasc1nate/status/1581887451315941377?ref_src=twsrc%5Etfw%7Ctwcamp%5Etweetembed%7Ctwterm%5E1581887451315941377%7Ctwgr%5E7a43d11c0d0faaa5a78c9343b63075db917e9d0e%7Ctwcon%5Es1_c10&ref_url=https%3A%2F%2Fmaharashtratimes.com%2Fviral%2Fviral-news%2Fkomodo-dragon-eats-turtle-and-wears-its-shell-like-a-hat%2Farticleshow%2F94939711.cms
ಈ ವಿಡಿಯೋದಲ್ಲಿ ಕಂಡು ಬರುವ Komodo dragon ಪ್ರಾಣಿಗೆ ಕನ್ನಡದಲ್ಲಿ ದೊಡ್ಡ ಹಲ್ಲಿ ಅಥವಾ ದೈತ್ಯ ಹಲ್ಲಿ ಎಂದು ಕರೆಯುತ್ತಾರೆ. ಇದು ದೊಡ್ಡ ದೊಡ್ಡ ಪ್ರಾಣಿಗಳ ಬೇಟೆಯಾಡುತ್ತದೆ. ಆಕಾರದಲ್ಲಿ ಸುಮಾರು ಮೂರರಿಂದ ಮೂರುವರೆ ಮೀಟರ್ ಉದ್ದವಿರುತ್ತದೆ. ತೂಕ 100 ಕೆಜಿಗಿಂತಲೂ ಹೆಚ್ಚಾಗಿರುತ್ತದೆ. ಈ ದೊಡ್ಡ ಗಾತ್ರದ ಹಲ್ಲಿಯನ್ನು ನೋಡುತ್ತಲೇ ಜೀವ ನಡಗುತ್ತದೆ.

ಭಾರೀ ಹಲ್ಲಿಯ ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಫ್ಯಾಸಿನೇಟಿಂಗ್ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಸಾವಿರಾರು ಜನರು ತಮ್ಮ ವಿವಿಧ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.