Video: ಎಂದೂ ನೋಡದಂಥ ಕತರ್ನಾಕ್ ಸ್ಟಂಟ್! ಒಮ್ಮೆ ನೋಡಿಯೇ ಬಿಡಿ, ಈ ವೈರಲ್ ವಿಡಿಯೋದಲ್ಲಿ…

ಸೋಶಿಯಲ್ ಮೀಡಿಯಾದಲ್ಲಿ ಅನೇಕ ಸಲ ಅನೇಕ ಪ್ರಕಾರದ ಸ್ಟಂಟ್ ಗಳ ವಿಡಿಯೋ ವೈರಲ್ ಆಗುತ್ತವೆ ಅಥವಾ ನೋಡಲು ಸಿಗುತ್ತವೆ. ಆದರೆ ಇಂದು ಇಲ್ಲಿ ಈ ಯುವಕನ ಸ್ಟಂಟ್ ನೋಡಿದಾಗ ಗೊತ್ತಿಲ್ಲದೆ ಬಾಯಿಯಿಂದ ಅಬ್ಬಾ ಎಂಬ ಶಬ್ದ ತನ್ನಂತಾನೆ ಬರುವದು. ಈವರೆಗೆ ಎಲ್ಲಿಯೂ ನೋಡದಂಥ ಸ್ಟಂಟ್ ನ ವಿಡಿಯೋ ಇದಾಗಿದೆ. ಇಲ್ಲಿ ಯುವಕನೊಬ್ಬ ತನ್ನ ಜೀವನದ ಪರಿವೆಯೇ ಇಲ್ಲದೆ ಈ ರೀತಿಯ ಸ್ಟಂಟ್ ಮಾಡುತ್ತಿದ್ದಾನೆ. ಈ ವಿಡಿಯೋ ಬರೀ ನೋಡಲಿಕ್ಕೆ ಮಾತ್ರ, ಇದನ್ನು ದಯವಿಟ್ಟು ಅನುಸರಿಬೇಡಿ.

ಈ ವೈರಲ್ ವಿಡಿಯೋ ನೋಡಿದ ನೆಟ್ಟಿಗರು ಮಾತ್ರ ಸ್ಥಬ್ಧರಾಗಿದ್ದಾರೆ. ಇದೊಂದು ಶುದ್ಧ ಹುಚ್ಚುತನದ ಉದಾಹರಣೆಯಾಗಿದೆ ಎನ್ನುತ್ತಿದ್ದಾರೆ. ವಿಡಿಯೋದಲ್ಲಿ ಕಾಣುವ ವ್ಯಕ್ತಿ ಹಾಫ್ ಪ್ಯಾಂಟ್ ಮತ್ತು ಒಂದು ಕ್ಯಾಪ್ ಧರಿಸಿ ಎತ್ತರದ ಅಡ್ಡ ಪಿಲ್ಲರ್ ಗಳ ಮೇಲೆ ಮಂಗನಂತೆ ತನ್ನ ಎರಡು ಕಾಲುಗಳನ್ನು ಹವೆಯಲ್ಲಿ ಹಾರಾಡಿಸಿ ಒಂದರಿಂದ ಮತ್ತೊಂದು ಪಿಲ್ಲರ್ ಮೇಲೆ ಹಾರಾಡುತ್ತಿದ್ದಾನೆ. ಆತನ ಈ ಬ್ಯಾಲೆನ್ಸ್ ನಿಜಕ್ಕೂ ಅದ್ಭುತವಾಗಿದೆ ಎಂದೇ ಹೇಳಬಹುದು. ಈ ರೀತಿಯ ಸ್ಟಂಟ್ ಮಾಡಲು ಆತ ನಿಜಕ್ಕೂ ತುಂಬಾ ಅದ್ಭುತವಾದ ಪರಿಶ್ರಮ ತೆಗೆದುಕೊಂಡಿದ್ದಾನೆ ಎಂದೇ ಹೇಳಬಹುದು. ಇಲ್ಲಿ ಸ್ವಲ್ಪವಾದರೂ ಆತನ ಬ್ಯಾಲೆನ್ಸ್ ಕಳೆದುಕೊಂಡಿದ್ದೇ ಆದರೆ ಆತ ಯಾವ ಸ್ಥಿತಿಗೆ ಬರುತ್ತಾನೆ ಎಂದು ಯೋಚಿಸಿದರೂ ಮೈ ಕಂಪಿಸುವದು.

ವಿಡಿಯೋ ನೋಡಿ

ಈ ಅದ್ಭುತ ಮತ್ತು ಯುವಕನ ಸಾಹಸದ ವಿಡಿಯೋವನ್ನು parkour_tribe ಹೆಸರಿನ ಇನ್ಸ್ಟಾಗ್ರಾಮ್ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋಗೆ ಇಲ್ಲಿಯವರೆಗೆ 2 ಲಕ್ಷಕ್ಕೂ ಮೀರಿ ವ್ಯೂವ್ಸ್ ದೊರಕಿವೆ. 20 ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ವಿಡಿಯೋ ನೋಡಿದ ಅನೇಕರು ಆತನ ಈ ಸಾಹಸವನ್ನು ನೋಡಿ ಹೊಗಳುತ್ತಿದ್ದಾರೆ. ಈ ರೀತಿಯ ಸ್ಟಂಟ್ ನೋಡಿ ನಿಮಗೇನನ್ನಿಸುತ್ತದೆ ಫ್ರೆಂಡ್ಸ್? ದಯವಿಟ್ಟು ಕಾಮೆಂಟ್ ಮಾಡಿ ಹೇಳಿ…