Video: ‘ಕತ್ತೆಗೆ ಬುದ್ದಿ ಇರೋದಿಲ್ಲ’ ಈ ಮಾತು ತಪ್ಪು ಎಂದು ಸಾಬೀತುಪಡಿಸಿದ ಕತ್ತೆಗಳು! ವೀಡಿಯೋ ನೋಡಿ
ಸಾಮಾನ್ಯವಾಗಿ ಕತ್ತೆ ಎಂದರೆ ಬುದ್ಧಿಹೀನ ಪ್ರಾಣಿ ಎಂದು ನಾವು ಭಾವಿಸುತ್ತೇವೆ. ನಾವು ಕತ್ತೆಗೆ ಎಷ್ಟೇ ಕೆಲಸ ಹಚ್ಚಿದರು ಸಹ ಅದು ಸತತವಾಗಿ ದಣಿವಿಲ್ಲದೆ ಮಾಡುವ ಪ್ರಾಣಿಯಾಗಿದೆ. ಆದ್ದರಿಂದ ನಾವು ಕತ್ತೆಯಂತೆ ಕೆಲಸ ಮಾಡಬೇಕು ಆಗಲೇ ನಾವು ಜೀವನದಲ್ಲಿ ಯಶಸ್ಸು ಕಾಣುತ್ತೇವೆ ಅಂತ ಹಿರಿಯರು ಹೇಳುತ್ತಾರೆ.
ಬರೀ ಕತ್ತೆಯಂತೆ ಕೆಲಸ ಮಾಡಿದರೆ ಸಾಲದು ಅದರ ಹಿಂದಿರುವ ಉದ್ದೇಶ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿದರೆ ಯಾವುದೇ ಕಾರ್ಯ ಸಾಧ್ಯ ಮಾಡಬಹುದು.
ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ಒಂದು ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಕತ್ತೆಗೆ ಬುದ್ಧಿ ಇರುವದಿಲ್ಲ ಅಂತ ನಾವು ಕೇಳಿದ್ದೇವೆ ಹಾಗಾಗಿ ಬುದ್ದಿ ಇಲ್ಲದವರಿಗೆ ಕತ್ತೆಗೆ ಹೋಲಿಸುತ್ತಾರೆ. ಜಾಣನಿಗೆ ಮಾತಿನ ಪೆಟ್ಟು, ಕತ್ತೆಗೆ ಲತ್ತೆಯ ಪೆಟ್ಟು’ ಎಂಬ ಗಾದೆ ಮಾತನ್ನು ನಾವು ಕೇಳಿದ್ದೇವೆ. ಇದರ ಮೇಲಿಂದ ಕತ್ತೆಗೆ ಎಷ್ಟು ಬುದ್ಧಿ ಮಾತು ಹೇಳಿದರೂ ಅದು ಕೇಳದು ಹೊರತಾಗಿ ಅದಕ್ಕೆ ಲತ್ತೆಯ ಪೆಟ್ಟು ಕೊಟ್ಟರೆ ಸರಾಗವಾಗಿ ಕೆಲಸ ಮಾಡುತ್ತದೆ ಅಂತ ಈ ಗಾದೆ ಮಾತಿನ ಅರ್ಥವಾಗಿದೆ. ಆದರೆ ಪ್ರಸ್ತುತ ವೀಡಿಯೋದಲ್ಲಿ ಕತ್ತೆಯ ಬೇರೆ ಅವತಾರವೇ ನೋಡಲು ದೊರೆಯುತ್ತದೆ. ಏಕೆಂದರೆ ಈ ವೀಡಿಯೋದಲ್ಲಿ ಕತ್ತೆ ತನ್ನ ಬುದ್ಧಿವಂತಿಕೆಯನ್ನು ತೋರುತ್ತದೆ.
ಪ್ರಸ್ತುತ ವೀಡಿಯೋ ಕೆಲವು ಕತ್ತೆಗಳಿಗೆ ಏನೋ ಭಾರವಾದ ವಸ್ತುಗಳನ್ನು ಅವುಗಳ ಬೆನ್ನ ಮೇಲೆ ಹೊತ್ತು ಬಿಟ್ಟಿರುತ್ತಾರೆ. ಆದರೆ ಆ ವಸ್ತುಗಳನ್ನು ಸುಮಾರು ಸ್ಟೆಪ್ ಗಳನ್ನು ನಡೆದು ನಿರ್ಧಾರ ಪಡಿಸಿದ ಸ್ಥಳಕ್ಕೆ ತಲುಪಿಸಬೇಕಾಗಿರುತ್ತದೆ. ನಾವು ಬರಿ ಸ್ಟೆಪ್ ಗಳನ್ನು ಹತ್ತಿದರೆ ಸಾಕು ನಮಗೆ ತುಂಬಾ ಆಯಾಸಾವಾಗಿ ಆಗಾಗ್ಗೆ ಕುಳಿತುಕೊಂಡು ಸ್ಟೆಪ್ ಹತ್ತುತ್ತೇವೆ. ಆದರೆ ಈ ಕತ್ತೆಗಳು ಸ್ಟೆಪ್ ಹತ್ತ ಬೇಕಾದರೆ ತುಂಬಾ ತೊಂದರೆ ಯಾಗುವದು ಅಂತ ತಿಳಿದುಕೊಂಡು ಅವುಗಳು ಒಂದು ಪ್ಲ್ಯಾನ್ ಮಾಡುತ್ತವೆ. ಆ ಪ್ಲ್ಯಾನ್ ಪ್ರಕಾರ ಹತ್ತಿದರೆ ಯಾವುದೇ ತೊಂದರೆ ನಿರ್ಮಾಣವಾಗುವದಿಲ್ಲ ಜೊತೆಗೆ ಧಾರಾಳವಾಗಿ ಹತ್ತಬಹುದು. ಆ ಜಾಣ ಕತ್ತೆಗಳು ಸ್ಟೆಪ್ ಹತ್ತಲು ಯಾವ ಪ್ರಕಾರದ ಪ್ಲ್ಯಾನ್ ಮಾಡಿದ್ದವು ಎಂಬುದು ನೀವೇ ವೀಡಿಯೋದಲ್ಲಿ ನೋಡಿ.
ವಿಡಿಯೋ ನೋಡಿ.
Following the path of least resistance & conserving energy👌
And we think they are not intelligent…
VC:Koborin pic.twitter.com/JNpFGuZNQO— Susanta Nanda IFS (@susantananda3) April 21, 2022