Video: ಕಾಡು ಬಿಟ್ಟು ಜನವಸತಿಗೆ ಬರುತ್ತಲೇ ಹುಲಿ ಮಾಡಿದ್ದೇನು? ನೀವೆಂದೂ ನೋಡಲಿಕ್ಕಿಲ್ಲ ಇಂಥ ಹುಲಿ! ನೋಡಿ ಈ ವಿಡಿಯೋ

ಕಾಡಿನಲ್ಲಿ ಜನವಸತಿ ಇರುವ ಕಡೆಗೆ ಬಂದ ಹುಲಿಯು ಮಾಡಿದ ಕೆಲಸವೇನು ನೋಡಿ, ಎಲ್ಲಿಯೂ ನೋಡಲಿಕ್ಕಿಲ್ಲ ಇಂಥ ಕೂಲ್ ಹುಲಿ…

ಭಾರತದ ಮಾಜಿ ಸೈನ್ಯ ಅಧಿಕಾರಿಯಾದ ಕರ್ನಲ್ ದಿವಾಕರನ್ ಪಿಲ್ಲೆ ಅವರು ಹುಲಿಯ ವಿಡಿಯೋವೊಂದನ್ನು ತಮ್ಮ ಟ್ವಿಟರ್ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ. ಈ ವಿಡಿಯೋ ಸದ್ಯ ತುಂಬಾ ವೇಗದಲ್ಲಿ ವೈರಲ್ ಆಗುತ್ತಿದೆ. ಅದಕ್ಕೆ ಕಾರಣ ವಿಡಿಯೋದಲ್ಲಿಯ ಹುಲಿಯು ತುಂಬಾ ಕೂಲಾಗಿ ಒಂದು ಕೆಲಸ ಮಾಡಿದೆ. ಹುಲಿ ಮಾಡಿದ ಈ ಕೆಲಸ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದೆ.

ಸಾಮಾನ್ಯವಾಗಿ ಹುಲಿಯೆಂದರೆ ವ್ಯಕ್ತಿಯು ಭಯಬೀತ ನಾಗುತ್ತಾನೆ. ಹುಲಿಯನ್ನು ಚಿತ್ರದಲ್ಲಿ, ವಿಡಿಯೋದಲ್ಲಿ ನೋಡುವಾಗ ಸಾಮಾನ್ಯವೆನಿಸುತ್ತದೆ. ಆದರೆ ಅದೇ ಹುಲಿಯು ಪ್ರತ್ಯಕ್ಷವಾಗಿ ಬಂದು ಮುಂದೆ ನಿಂತಾಗ ಏನಾಗುತ್ತದೆ ಎಂಬುದು ಬೇರೆ ಹೇಳಬೇಕಾಗಿಲ್ಲ.

ಇಂಥ ಹುಲಿಯೊಂದು ಜನವಸತಿ ಇರುವ ಕಾಡಿನಲ್ಲಿ ತಿರುಗಾಡುತ್ತ ಬಂದಿದೆ. ಅಲ್ಲಿ ಅದಕ್ಕೆ ನೀರಿನಿಂದ ತುಂಬಿದ ಟಬ್ ಕಾಣಿಸಿದಾಗ ಮೊದಲು ಸ್ವಲ್ಪ ಏನೋ ವಿಚಾರ ಮಾಡಿದೆ. ಆನಂತರ ಅದು ಅಲ್ಲಿಂದ ಹೋಗಬೇಕೆಂದು ಕೊಂಡರೂ ಅದರ ಕಾಲುಗಳು ಅಲ್ಲಿಂದ ಕಿತ್ತಿಲ್ಲ. ಕೊನೆಗೆ ಅದರ ಮನದಲ್ಲಿ ಏನು ಮಾಡಬೇಕಾಗಿದೆ ಅದನ್ನೇ ಮಾಡಿದೆ. ಅತ್ತಿತ್ತ ಎಲ್ಲ ಕಡೆಗೂ ನೋಡಿ ಯಾರು ಇಲ್ಲದ ಖಾತರಿ ಪಡಿಸಿಯಾದ ಮೇಲೆ ನಿಧಾನ ಟಬ್ ನ ನೀರಿನಲ್ಲಿ ಆರಾಮಾಗಿ ಇಳಿದು ಕೂಲ್ ಆಗಿ ಕುಳಿತು ಸ್ನಾನದ ಮಜಾವನ್ನು ತೆಗೆದುಕೊಂಡಿದೆ. ಇದನ್ನು ನೋಡಿದ ನೆಟ್ಟಿಗರು ಹುಲಿ ಬಹುಶಃ ಪಿಕ್ನಿಕ್ ಗೆ ಬಂದ ಹಾಗೆ ಕಾಣುತ್ತಿದೆ ಎನ್ನುತ್ತಿದ್ದಾರೆ. ಈ ವಿಡಿಯೋ ನಿಜವಾಗಿಯೂ ನೋಡಲು ತುಂಬಾ ಮಜವಾಗಿದೆ.

ವಿಡಿಯೋ ನೋಡಿ

ಈ ವಿಡಿಯೋವನ್ನು ಯಾರು ಶೂಟ್ ಮಾಡಿದ್ದಾರೆ? ಮತ್ತು ಯಾವ ಸ್ಥಳದಲ್ಲಿಯದಿದೆ ಎಂಬುದು ಗೊತ್ತಾಗಿಲ್ಲ. ಇಲ್ಲಿಯವರೆಗೆ ಈ ವಿಡಿಯೋವನ್ನು 51 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. 4 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ಮತ್ತು ಸುಮಾರು 7 ನೂರರವರೆಗೆ ರಿಟ್ವೀಟ್ ಗಳು ಬಂದಿವೆ.