Video; ಕೆಸರಿನಿಂದ ತುಂಬಿದ ಹಳ್ಳದ ಜಿಗುಟು ರಸ್ತೆಯಲ್ಲಿ ಮಹೀಂದ್ರ ಜೀಪ್ ನಿಂದ ದಿನ್ನೆ ದಾಟಲೆತ್ನಿಸಿದ ಯುವತಿ! ಏನಾಗುತ್ತೆ? 😳

ಸೋಶಿಯಲ್ ಮೀಡಿಯಾದಲ್ಲಿ ಯುವತಿಯರು ವಾಹನ ನಡೆಸುವುದನ್ನು ತುಂಬಾ ತಮಾಷೆಯಾಗಿ ನೋಡುವದರ ಜೊತೆಗೆ ಟ್ರೋಲ್ ಗೆ ಗುರಿ ಮಾಡುತ್ತಾರೆ. ಪುರುಷರೇ ಇರಲಿ ಸ್ತ್ರೀಯರೇ ಇರಲಿ ತಪ್ಪು ಯಾರಿಂದಲೂ ಘಟಿಸಬಹುದು. ಆದರೆ ವಾಹನ ನಡೆಸುವ ವಿಚಾರಕ್ಕೆ ಬಂದಾಗ ಮಾತ್ರ ಹೆಚ್ಚಾಗಿ ಸ್ತ್ರೀಯರನ್ನೇ ತಮಾಷೆಗೆ ಗುರಿ ಮಾಡುತ್ತಾರೆ. ಸದ್ಯ ಇಲ್ಲಿ ನೋಡುವ ವಿಡಿಯೋ ಮೇಲಿನಂತೆ ವಿಚಾರ ಮಾಡುವವರ ಅಥವಾ ಯೋಚಿಸುವವರ ಕಪಾಳಕ್ಕೆ ಹೊಡೆಯುವ ಹಾಗಿದೆ ಎಂದರೆ ತಪ್ಪಲ್ಲ.

ಯಾಕೆಂದರೆ ಈ ವಿಡಿಯೋದಲ್ಲಿ ಕಂಡು ಬರುವ ಪ್ರಕಾರ, ಭಾರಿ ಮಳೆಯಿಂದಾಗಿ ಕೊಪ್ಪದ ರಸ್ತೆಯು ರಾಡಿ ಕೆಸರಿನಿಂದ ಅಥವಾ ಬೆಣ್ಣೆಯಂಥ ಕೆಸರಿನಿಂದ ತುಂಬಿಕೊಂಡಿದ್ದು ಕಂಡು ಬರುತ್ತದೆ. ಇಂಥಲ್ಲಿ ಯುವತಿಯೊಬ್ಬಳು ಮಹೀಂದ್ರ ಜೀಪ್ ನಲ್ಲಿ ದಿನ್ನೆಯನ್ನು ಹತ್ತಲು ಸನ್ನದ್ಧವಾಗಿ ನಿಂತಿದ್ದಾಳೆ. ಯುವತಿಗೆ ಎಲ್ಲರೂ ಮೇಲೇರಲು ಸ್ಫೂರ್ತಿ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಯುವತಿಯ ಮುಖದ ಮೇಲೆ ಯಾವುದೇ ರೀತಿಯ ಭಯ ಅಥವಾ ಟೆನ್ಶನ್ ಎಳ್ಳಷ್ಟೂ ಕಂಡು ಬರುತ್ತಿಲ್ಲ. ಕೆಲವೇ ಕ್ಷಣಗಳ ನಂತರ ಯುವತಿ ತುಂಬಾ ಕೂಲಾಗಿ ಅಂಥ ಕೆಸರಿನಿಂದ ತುಂಬಿದ ರಸ್ತೆಯಲ್ಲಿ ಜೀಪನ್ನು ತುಂಬಾ ಚೆನ್ನಾಗಿ ದಿನ್ನೆಯನ್ನು ಹತ್ತಿಸುವಲ್ಲಿ ಯಶಸ್ವಿವಾಗುತ್ತಾಳೆ.

ನೋಡಿ ಈ ವಿಡಿಯೋ…

 

View this post on Instagram

 

A post shared by Siddharth Prakash (@unicorn_carz)

ವಾಹನ ನಡೆಸುವ ವಿಚಾರದಲ್ಲಿ ಯುವತಿಯರನ್ನು ಕೀಳಾಗಿ ಕಾಣುವ ಮನಸ್ಥಿತಿಯನ್ನು ಹೊಂದಿದ ಜನರಿಗೆ ಮುಖದ ಮೇಲೆ ಹೊಡೆದ ಹಾಗೆ ಡ್ರೈವಿಂಗ್ ಮಾಡಿದ ಈ ಯುವತಿಯ ಸುಂದರ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ unicorn_carz ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಕ್ಯಾಪ್ಶನ್ ನಲ್ಲಿ ‘ಕೊಪ್ಪ ಆಫ್ ರೋಡ್ ಇವೆಂಟ್’ ಎಂದು ಬರೆಯಲಾಗಿದೆ. ಜೀಪ್ ನಡೆಸಿದ ಯುವತಿಯ ಹೆಸರು ಅನ್ವಿತಾ ಗೌಡ ಇದೆ.