VIDEO: ಗರಬಾ ಆಡುವಾಗ 21 ವರ್ಷದ ಯುವಕನೊಂದಿಗೆ ನಡೆದದ್ದು …….ಅಲ್ಲಿದ್ದವರೆಲ್ಲರೂ ಕಣ್ಣೀರು ಹಾಕಿದರು!!😢😢😢
ಕಳೆದ ಕೆಲವು ದಿವಸಗಳ ಹಿಂದೆ ದಸರಾ ಹಬ್ಬ ಇಡೀ ದೇಶದ ತುಂಬೆಲ್ಲ ಅತೀ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು. ನವರಾತ್ರಿ ಬಂದರೆ ಸಾಕು ಎಲ್ಲೆಡೆಗೂ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ ಏಕೆಂದರೆ ಈ ಹಬ್ಬ ಒಂಬತ್ತು ದಿವಾಸಗಳವರೆಗೆ ನಿರಂತರವಾಗಿ ನಡೆಯುವ ಹಬ್ಬವಾಗಿದೆ. ನಮ್ಮ ನಾಡಿನಲ್ಲಿ ಈ ಹಬ್ಬದ ಆಚರಣೆಯ ಪರಿಯನ್ನು ವರ್ಣಿಸಲು ಸಾಲದು. ನಮ್ಮ ನಾಡಿನ ಹೊರತಾಗಿ ಇಡೀ ದೇಶದಲ್ಲಿಯೂ ಸಹ ಇದನ್ನು ಅವರವರ ಸಂಸ್ಕೃತಿಗೆ ತಕ್ಕಂತೆ ಆಚರಣೆ ಮಾಡುವರು.
ನವರಾತ್ರಿ ಹಬ್ಬದ ಒಂಬತ್ತು ದಿವಸಗಳವರೆಗೆ ನಡೆಯುವ ಏಕೈಕ ಕಾರ್ಯಕ್ರಮ ವೆಂದರೆ ಗರಬಾ ಆಡುವದು. ಅಂದರೆ ಪ್ರತಿಯೊಂದು ಸ್ಥಳದಲ್ಲಿ ಗರಬಾ ಹಾಗೂ ದಾಂಡಿಯಾ ಕಾರ್ಯಕ್ರಮದ ನಿಯೋಜನೆ ಮಾಡುತ್ತಾರೆ. ಕಳೆದ ಎರಡು ವರ್ಷಗಳಲ್ಲಿ ಕರೊನಾ ದಿಂದಾಗಿ ಈ ಹಬ್ಬವನ್ನು ಆಚರಣೆ ಮಾಡಲು ಅನುಮತಿ ಇರಲಿಲ್ಲ. ಆದರೆ ಈ ವರ್ಷ ಮಾತ್ರ ಚಾಮುಂಡೇಶ್ವರಿ ಕೃಪೆಯಿಂದ ಕರೊನಾ ಮಾಯವಾಗಿ ಎಲ್ಲೆಡೆಗೂ ಈ ಹಬ್ಬವನ್ನು ಆಚರಿಸಲು ಯಾವುದೇ ನಿರ್ಬಂಧ ಹಾಕಲಿಲ್ಲ. ಹೀಗಾಗಿ ಈ ವರ್ಷ ಈ ಹಬ್ಬ ಎಲ್ಲೆಡಗೂ ಅತೀ ಉತ್ಸಾಹದಿಂದ ಆಚರಣೆ ಮಾಡಲಾಗಿದೆ.
ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ಒಂದು ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವೀಡಿಯೋ ನೋಡಿದರೆ ನೀವು ಸಹ ದುಃಖ ಪಡುವಿರಿ. ಏಕೆಂದರೆ ಹಬ್ಬದಂದು ಇಂತಹ ಘಟನೆ ನಡೆದರೆ ಯಾರಿಗೆ ದುಃಖ ಬರೋದಿಲ್ಲ ಎಂಬುದು ನೀವೇ ಹೇಳಿ. ಘಟನೆ ನಡೆದದ್ದು ಏನೆಂದರೆ ರಾತ್ರಿಯ ಸಮಯದಲ್ಲಿ ಗರಬಾ ಆಡುವಾಗ ಒಬ್ಬ ಯುವಕನ ಸ್ಥಳದಲ್ಲಿಯೇ ಮೃ#ತ್ಯುವಾಗಿದೆ.
ಗುಜರಾತನ ಆನಂದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ವೀರೇಂದ್ರ ಸಿಂಹ ರಮೇಶ್ ಭಾಯಿ ಎಂಬ 21 ವರ್ಷದ ಯುವಕ ರಾತ್ರಿಯ ಸಮಯದಲ್ಲಿ ಗರಬಾ ಆಡುತ್ತಿರುತ್ತಾನೆ. ಗರಬಾ ಆಡುವಾಗ ಎಲ್ಲರೂ ಸಹ ತಾಲ, ಲಯ ಹಿಡಿದು ಅತೀ ಉತ್ಸಾಹದಿಂದ ಗರಬಾ ಆಡುತ್ತಿರುತ್ತಾರೆ. ಈತನು ಸಹ ಎಲ್ಲರೊಂದಿಗೆ ಅತೀ ಉತ್ಸಾಹದಿಂದ ಅಡುತ್ತಿರುತ್ತಾನೆ. ಆಡುತ್ತಿದ್ದ ಹಾಗೆಯೇ ಈತ ಒಮ್ಮೆಲೇ ನೆಲಕ್ಕೆ ಬೀಳುತ್ತಾನೆ. ಇದನ್ನುಕಂಡು ಅಲ್ಲಿದ್ದ ಎಲ್ಲ ಜನರು ಈತನನ್ನು ಮೇಲಕ್ಕೆ ಎಬ್ಬಿಸಲು ಪ್ರಯತ್ನ ಮಾಡುತ್ತಾರೆ. ಆದರೆ ಎಷ್ಟೇ ಪ್ರಯತ್ನ ಮಾಡಿದರು ಸಹ ಯುವಕ ಮೇಲೇ ಏಳಲೇ ಇಲ್ಲ.
ತದನಂತರ ಆತನನ್ನು ಸಮೀಪದಲ್ಲಿದ್ದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಗೆ ಕರೆದೊಯ್ಯುವದು ತುಂಬಾನೇ ಲೇಟ್ ಆಗಿತ್ತು. ಹೀಗಾಗಿ ಆತನ ಪ್ರಾ#ಣಪಕ್ಷಿ ರಸ್ತೆಯ ಮಧ್ಯದಲ್ಲಿಯೇ ಹಾರಿಹೋಗಿತ್ತು. ಹೃದಯಬಡಿತ ಸಹ ನಿಂತು ಹೋಯಿತು. ಇದನ್ನು ಕಂಡು ಅಲ್ಲಿದ್ದ ಜನರು ಬಹಳಷ್ಟು ದುಃಖ ಪಟ್ಟರು. ಈ ಘಟನೆಯ ಸಂಪೂರ್ಣ ವೀಡಿಯೋವನ್ನು ಅಲ್ಲಿದ್ದ ಒಬ್ಬ ವ್ಯಕ್ತಿ ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾನೆ.
ವಿಡಿಯೋ ನೋಡಿ
Anand :
गरबा खेलते खेलते एक शख्स की मौत।
तारापुर में आती शिवशक्ति सोसायटी में गरबा आयोजित किया गया था।
युवक को अस्पताल ले जाया गया लेकिन तब तक देरी हो चुकी थी।
वजह दिल का दौरा पड़ने से मौत बताई जा रही है। pic.twitter.com/GlUA1irveA
— Janak Dave (@dave_janak) October 2, 2022
ಪ್ರಸ್ತುತ ವೀಡಿಯೋ ವನ್ನು ಟ್ವಿಟ್ಟರ್ ನಲ್ಲಿ Janak Dave ಎಂಬ ವ್ಯಕ್ತಿ ತಮ್ಮ ಟ್ವಿಟ್ಟರ್ ಹ್ಯಾಂಡಲ್ ಮುಖಾಂತರ ಶೇರ್ ಮಾಡಿದ್ದಾರೆ. ಅಲ್ಲದೆ ಶೇರ್ ಮಾಡುವಾಗ ಸಂಪೂರ್ಣ ಘಟನೆಯ ವಿವರಣೆಯನ್ನು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಗೆಳೆಯರೇ ನಮ್ಮ ಜೀವನ ವೆಂಬುದು ನೀರಿನ ಮೇಲಿನ ಗುಳ್ಳಿಯ ಹಾಗೆ ಇದೆ. ಅದು ಯಾವಾಗ ಬೇಕಾದರೂ ಒಡೆಯಬಹುದು. ನಮ್ಮ ಜೀವನ ಸಹ ನಮಗೆ ಯಾವಾಗ ಏನಾಗುತ್ತದೆ ಅಂತ ಹೇಳಲು ಸಾಧ್ಯವಿಲ್ಲ. ಹಾಗಾಗಿ ಇರುವಷ್ಟು ದಿನ ಸುಖ ಸಂತೋಷದಿಂದ ಹಾಗೂ ಒಬ್ಬರಿಗೊಬ್ಬರು ಸಹಾಯ ಮಾಡುತ್ತ ಅವರೊಂದಿಗೆ ಖುಷಿಯಿಂದ ಇರುವದರಲ್ಲಿಯೇ ಸ್ವರ್ಗ ವಿದೆ.