Video; ಟ್ರಾಫಿಕ್ ಜಾಮ್ ನಂತಹ ಜಟಿಲ ಸಮಸ್ಯೆ ಕ್ಷಣದಲ್ಲಿ ಮಂಗ ಮಾಯ! ನೋಡಿ ಈ ನಾಯಿಯ ಕರ್ತವ್ಯ ದಕ್ಷತೆ…

ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಎಷ್ಟೇ ಅಗಲವಾದ ರೋಡ್ ಗಳನ್ನು ಮಾಡಿದರೂ ಟ್ರಾಫಿಕ್ ಜಾಮ್ ನಂತಹ ಜಟಿಲ ಸಮಸ್ಯೆಗಳಿಂದ ಖಾಯಂ ಆಗಿ ಪರಿಹಾರ ಸಿಗುತ್ತಿಲ್ಲ. ಅದರಲ್ಲೂ ನಮ್ಮ ರಾಜಧಾನಿ ಬೆಂಗಳೂರು ಹೆಸರು ತೆಗೆದರೆ ಸಾಕು ಕಣ್ಣುಮುಂದೆ ಮೊದಲು ಟ್ರಾಫಿಕ್ ಜಾಮ್ ಬಂದು ನಿಲ್ಲುವುದು. ಸದ್ಯ ಇಲ್ಲಿ ನೋಡಲಿರುವ ಒಂದು ವಿಡಿಯೋ ತುಂಬಾ ವಿಶೇಷವಿದೆ. ಇಲ್ಲಿಯ ವಿಡಿಯೋದಲ್ಲಿಯ ದೃಶ್ಯ ಟ್ರಾಫಿಕ್ ಜಾಮ್ ಗೆ ಹೋಲಿಸಲಾಗಿದೆ. ಬನ್ನಿ ಏನಿದೆ ವಿಶೇಷ ನೋಡೋಣ…

ಪ್ರಸ್ತುತ ವಿಡಿಯೋದಲ್ಲಿ ಕಂಡು ಬರುವ ಉಣ್ಣೆಗುರಿಗಳು ತುಂಬಾ ಇಕ್ಕಟ್ಟಾದ ದಾರಿಯಿಂದ ತಮ್ಮ ಶೆಡ್ ಗೆ ಹೋಗಲು ಪ್ರಯತ್ನಿಸುತ್ತಿವೆ. ಎಲ್ಲ ಉಣ್ಣೆಗುರಿಗಳು ಏಕಕಾಲಕ್ಕೆ ಜಮಾಯಿಸಿರುವದರಿಂದ ಶೆಡ್ ಗೆ ಹೋಗಲು ತುಂಬಾ ಸಮಸ್ಯೆ ಎದುರಾಗಿದೆ. ಒಂದು ರೀತಿಯಲ್ಲಿ ಟ್ರಾಫಿಕ್ ಜಾಮ್ ನಂತಹ ಸಮಸ್ಯೆ ಎದುರಾಗಿದೆ ಎನ್ನಬಹುದು. ಆಗ ಅಲ್ಲಿ ನಾಯಿಯೊಂದು ಹಿಂದಿನಿಂದ ಒಮ್ಮೆಲೆ ಪ್ರತ್ಯಕ್ಷವಾಗುತ್ತದೆ. ಅದು ಬಂದದ್ದೇ ತಡ ಉಣ್ಣೆಗುರಿಗಳ ಮೇಲಿಂದ ಜಿಗಿಯುತ್ತಾ ಹಾಯ್ದು ಹೋಗಿ ಕ್ಷಣದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಯಿಂದ ಮುಕ್ತ ಮಾಡುತ್ತದೆ. ಎಲ್ಲ ಉಣ್ಣೆಗುರಿಗಳು ತಮ್ಮ ಶೆಡ್ ಗೆ ತುಂಬಾ ಈಜಿಯಾಗಿ ಹೋಗಲು ಶುರು ಮಾಡುತ್ತವೆ. ಅಂಥ ಯಾವ ಕೆಲಸ ಹೇಗೆ ಈ ನಾಯಿ ಅದ್ಹೇಗೆ ಮಾಡಿದೆ ನೋಡಿ ಈ ವಿಡಿಯೋದಲ್ಲಿ…

ನೋಡಿ ವಿಡಿಯೋ….

https://twitter.com/HeckinGoodDogs/status/1590637941512351746?s=20&t=NH4opTnbaeRT2zlZksFMbg

ಪ್ರಸ್ತುತ ಈ ತಮಾಷೆಯ ಹಾಗೂ ನಾಯಿಯ ಕರಾಮತ್ತಿನ ಸಖತ್ ವಿಡಿಯೋ ಟ್ವಿಟರ್ ನಲ್ಲಿ Heckin Good Dogs ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಈ ವೀಡಿಯೋವನ್ನು ಇಲ್ಲಿಯವರೆಗೆ 2.6 ಮಿಲಿಯನ್ ನೆಟ್ಟಿಗರು ನೋಡಿದ್ದಾರೆ. ಕುರಿಗಳ ಜೊತೆಗೆ ನಾಯಿಯನ್ನು ಸಾಕುವ ಹಿಂದಿನ ಕಾರಣ ಇದೂ ಸಹ ಒಂದು ಇರಬೇಕು ಎಂದು ಕೆಲವರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.