Video: ತನ್ನನ್ನು ಬೇ#ಟೆಯಾಡಲು ಬಂದ ಹೈನಾಗೆ, ಸರಿಯಾಗಿ ಪಾಠ ಕಲಿಸಿದ ಕತ್ತೆ! ವಿಚಿತ್ರ ವಿಡಿಯೋ ನೋಡಿ…!!
ಸಾಮಾನ್ಯವಾಗಿ ಎಲ್ಲಕ್ಕಿಂತ ಹೆಚ್ಚು ಕಷ್ಟ ಪಡುವ ಪ್ರಾಣಿ ಎಂದರೆ ಅದು ಕತ್ತೆ. ಕತ್ತೆಯಂತೆ ಕೆಲಸ ಮಾಡು ಅಂತ ಸುಮ್ಮನೆ ಹೇಳುವದಿಲ್ಲ ಏಕೆಂದರೆ ಕತ್ತೆಯ ಮೇಲೆ ಎಷ್ಟೇ ಭಾರ ಹೊತ್ತರು ಸಹ ಅದು ತಗೆದುಕೊಂಡು ಹೋಗುತ್ತದೆ. ಅಲ್ಲದೆ ಯಾವುದೇ ಬೆಸರವಿಲ್ಲದೆ ದಿನಪೂರ್ತಿಯಾಗಿ ಕೆಲಸ ಮಾಡುವ ಏಕೈಕ ಪ್ರಾಣಿ ಕತ್ತೆಯಾಗಿದೆ. ಆದರೆ ಕತ್ತೆಯ ಬುದ್ದಿ ಮಾತ್ರ ಕೇಳಲೇ ಬಾರದು ಏಕೆಂದರೆ ಆ ಕತ್ತೆ ಕೆಲವೊಮ್ಮೆ ಏನು ಮಾಡುತ್ತದೆ ಅನ್ನೋದು ಅದಕ್ಕೆ ತಿಳಿದಿರುವದಿಲ್ಲ ಹೀಗಾಗಿ ಅದು ಮಾಡುವ ಕಾರ್ಯ ಸರಿಯಾಗಿ ಮಾಡುತ್ತದೆ ಅಂತಲೂ ಹೇಳೋಕೆ ಆಗಲ್ಲ. ಕತ್ತೆ ಯಂತ ಎಲ್ಲರನ್ನು ಆದ್ದರಿಂದಲೇ ಬೈಯುತ್ತಾರೆ.
ಕತ್ತೆ ಮಾಡುವ ವಿಚಿತ್ರ ಕಾರ್ಯ ಕೆಲವೊಮ್ಮೆ ತುಂಬಾ ಫೇಮಸ್ ಆಗುತ್ತದೆ. ಕತ್ತೆಯ ಎಲ್ಲಕ್ಕಿಂತ ದೊಡ್ಡ ಅಸ್ತ್ರ ಅದರ ಹಿಂದಿನ ಕಾಲುಗಳು ಅಂದರೆ ಕತ್ತೆಯು ಹಿಂದಿನಿಂದ ಲತ್ತೆ ಹೊಡೆಯುತ್ತದೆ. ಅದರ ಹೊಡೆತ ಎಷ್ಟೊಂದು ಸ್ಟ್ರಾಂಗ್ ಇರುತ್ತದೆ ಅಂದರೆ ಕೆಲವೊಮ್ಮೆ ಲತ್ತೆ ತಿಂದ ಪ್ರಾಣಿ ಅಥವಾ ಮನುಷ್ಯನ ಮೂಳೆ ಸಹ ಮುರಿದು ಹೋಗುತ್ತವೆ ಆದ್ದರಿಂದಲೆ ‘ ಕತ್ತೆಗೆ ಲತ್ತೆಯ ಪೆಟ್ಟು, ಜಾಣನಿಗೆ ಮಾತಿನ ಪೆಟ್ಟು’ ಎಂದು ಹೇಳುತ್ತಾರೆ.
ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವೀಡಿಯೋ ಕತ್ತೆ ಮತ್ತು ಹೈನಾ ನಡುವೆ ನಡೆದ ಘಟನೆಯ ವೀಡಿಯೋ ಇದಾಗಿದೆ. ನಮಗೆಲ್ಲ ಗೊತ್ತಿರುವ ಹಾಗೆ ಹೈನಾ ಇದೊಂದು ಭ#ಯಂಕರ ಪ್ರಾಣಿಯಾಗಿದೆ. ಇದು ಯಾವುದೇ ಪ್ರಾಣಿಯನ್ನು ಬೇ#ಟೆ ಮಾಡುತ್ತದೆ ಅದು ಸಿಂಹವೆ ಆಗಿರಲಿ ಅಥವಾ ಹುಲಿ, ಚಿರತೆಯೇ ಆಗಿರಲಿ ಅದನ್ನು ಯೋಚನೆ ಮಾಡದೆ ತನ್ನ ಗುಂಪನ್ನು ಕರೆದುಕೊಂಡು ಅವುಗಳ ಮೇಲೆ ದಾ#ಳಿ ಮಾಡುತ್ತವೆ. ಅದೇ ರೀತಿಯಾಗಿ ಒಂದು ಹೈನಾ ಕಾಡಿನ ಮದ್ಯ ಮನೆಯೊಂದರಲ್ಲಿ ಕತ್ತೆ ಇರುವದನ್ನು ಕಂಡು ಅದನ್ನು ಬೇಟೆಯಾಡಿ ತಿನ್ನಬೇಕು ಅನ್ನೋ ವಿಚಾರವನ್ನು ಇಟ್ಟುಕೊಂಡು ಕತ್ತೆಯ ಮೇಲೆ ಒಮ್ಮೆಲೇ ಅ#ಟ್ಯಾಕ್ ಮಾಡಿತು. ನಾವೆಲ್ಲ ಕತ್ತೆಗಳು ಲತ್ತೆ ಹೊಡೆಯುತ್ತವೆ ಅಂತ ಕೇಳಿದ್ದೇವೆ ಆದರೆ ಈ ಕತ್ತೆ ಮಾತ್ರ ಹೈನಾದಿಂದ ಬಚಾವ್ ಆಗಲು ಇದು ಬೇರೇನೇ ಉಪಾಯ ಮಾಡಿತು.
ಹೈನಾ ಹಿಂದಿನಿಂದ ಬಂದು ಕತ್ತೆಯ ಬಾಲವನ್ನು ಹಿಡಿದಾಗ ಈ ಕತ್ತೆ ಒಮ್ಮೆಲೇ ತಿರುಗಿ ಆ ಹೈನಾದ ಕುತ್ತಿಗೆಯ ಮೇಲೆ ತನ್ನ ದಪ್ಪವಾದ ಹಲ್ಲುಗಳಿಂದ ಜೋರಾಗಿ ಕಚ್ಚಿತು. ಅಷ್ಟಕ್ಕೇ ಬಿಡಲಿಲ್ಲ ಕತ್ತೆ ಜೋರಾಗಿ ಕಚ್ಚಿದ ಮೇಲೆ ಹಾಗೆ ಹೈನಾದ ಕುತ್ತಿಗೆಯನ್ನು ಜೋರಾಗಿ ಹಿಡಿದುಕೊಂಡು ಎಳೆಯಲು ಶುರು ಮಾಡಿತು. ಪಾಪ ಹೈನಾ ನೋವಿನಿಂದ ಚಿರಲು ಶುರು ಮಾಡಿತು ಆದರೆ ಎಷ್ಟೇ ಚೀರಿದರು ಕತ್ತೆ ಬಿಡಲೇ ಇಲ್ಲ. ತನ್ನನ್ನು ಹೀಗೂ ಬೇರೊಂದು ಪ್ರಾಣಿ ಕಚ್ಚುತ್ತೆ ಅಂತ ಹೈನಾ ಎಂದು ಊಹಿಸಲಕ್ಕಿರಲಿಲ್ಲ. ಕತ್ತೆಯ ಈ ವಿಚಿತ್ರ ಅವತಾರ ನೋಡಿ ಹೈನಾ ತನ್ನ ಪ್ರಾಣದ ಹಂಗನ್ನು ತೊರೆದು ಹೇಗಾದ್ರೂ ಮಾಡಿ ಕತ್ತೆಯ ದವಡೆಯಿಂದ ಬಿಡಿಸುಕೊಳ್ಳುವ ಪ್ರಯತ್ನ ಮಾಡುತ್ತಿತ್ತು. ಕೊನೆಗೆ ಹೈನಾ ಕತ್ತೆಯ ಹರಿತವಾದ ಹಲ್ಲುಗಳ ಮದ್ಯದಲ್ಲಿಯ ತನ್ನ ಕುತ್ತಿಗೆಯನ್ನು ಬಿಡಿಸಿಕೊಂಡು ತನ್ನ ಕಾಲಿಗೆ ಬುದ್ದಿ ಹೇಳಿತು.
ವಿಡಿಯೋ ನೋಡಿ
ಪ್ರಸ್ತುತ ವೀಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಈ ವೀಡಿಯೋವನ್ನು ಇದುವರೆಗೆ ಒಂದು ಮಿಲಿಯನ್ ಕ್ಕಿಂತ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ ಅಲ್ಲದೆ ಲೈಕ್ಸ್ ಸಹ ಮಾಡಿದ್ದಾರೆ.