Video; ತಪ್ಪು ತನ್ನದೇ ಇದ್ದರೂ ಯುವಕನಿಗೆ ಗದರಿಸುವ ಯುವತಿಯ ಜೋಶ್ ನೋಡಿ; ಈ ಜಾಣತನ ಕ್ಯಾಮೆರಾದಲ್ಲಿ ಸೆರೆಯಾಗಬೇಕೆ?

ದಿನಂಪ್ರತಿ ತಲೆಕೆಟ್ಟು ಮಾತನಾಡುವ ಜನರ ಅನೇಕ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ನಮಗೆ ನೋಡಲು ಸಿಗುತ್ತವೆ. ಅಂಥ ವಿಡಿಯೋಗಳಲ್ಲಿ ತಪ್ಪು ತನ್ನದೇ ಇದ್ದರೂ ಎದುರಿನವರ ಮೇಲೆ ಏರಿ ಹೋಗುವ ಜನರನ್ನು ತುಂಬಾ ನೋಡುತ್ತೇವೆ. ಸದ್ಯ ಇದೇ ರೀತಿಯ ಯುವತಿಯ ಒಂದು ವಿಡಿಯೋ ಇಲ್ಲಿ ನಿಮಗಾಗಿ ತಂದಿದ್ದೇವೆ, ನೋಡಿ ಈ ತಮಾಷೆ…

ಪ್ರಸ್ತುತ ವಿಡಿಯೋದಲ್ಲಿ ಒಬ್ಬ ಬೈಕ್ ಸವಾರ ತನ್ನಷ್ಟಕ್ಕೆ ತಾನು ರೋಡ್ ಸೈಡ್ ನಿಂತಿದ್ದಾನೆ. ಅಷ್ಟರಲ್ಲಿ ಯುವತಿಯೊಬ್ಬಳು ಹಿಂದಿನಿಂದ ಬಂದು ಆತನಿಗೆ ನೇರವಾಗಿ ಢಿಕ್ಕಿ ಹೊಡೆಯುತ್ತಾಳೆ. ಇಲ್ಲಿಯ ವಿಡಿಯೋದಲ್ಲಿ ತಪ್ಪು ಸ್ಪಷ್ಟವಾಗಿ ಮತ್ತು ಸಂಪೂರ್ಣವಾಗಿ ಯುವತಿಯದೇ ಎಂದು ಕಂಡು ಬರುತ್ತಿದೆ. ಆದರೂ ಆಕೆ ಎದುರಿನವನ ಮೇಲೆ ಹಾರಿಹಾಯುತ್ತಿರುವ ದೃಶ್ಯ ನೋಡಿ ತಲೆ ಚಚ್ಚಿ ಕೊಳ್ಳಬೇಕೆನಿಸುತ್ತದೆ. ಈ ಸಂದರ್ಭದಲ್ಲಿ ಆಕೆ ಯುವಕನಿಗೆ ” ಕುರುಡನಾಗಿದ್ದೆಯಾ? ನಿನಗೆ ಸ್ವಲ್ಪವೂ ಕಾಣಿಸುವದಿಲ್ಲವೆ? ಹೇಗೆ ನಡೆಸುತ್ತಿರುವೆ ಬೈಕ್” ಎಂದು ಸಿಟ್ಟಿನಲ್ಲಿ ರುಬಾಬು ತೋರಿಸುತ್ತಾಳೆ. ಇಂಥ ಜನರಿಗೆ ಏನು ಮಾಡಬೇಕು ನೀವೇ ಹೇಳಿ ಮಿತ್ರರೇ?

ವೀಡಿಯೋ ನೋಡಿ

 

View this post on Instagram

 

A post shared by MEMER Boy (@memerboy012)

ಪ್ರಸ್ತುತ ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ abhi_yadav_739890 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ 1.3 ಮಿಲಿಯನ್ ಲೈಕ್ಸ್ ಹಾಗೂ ಸುಮಾರು ಮಿಲಿಯನ್ ಗಟ್ಟಲೆ ವೀಕ್ಷಣೆಯನ್ನು ಪಡೆದಿದೆ.