Video: ನದಿಯನ್ನು ದಾಟಿದ 50 ಅಡಿ ಉದ್ದದ ಭಾರೀ ಅನಕೊಂಡ: ವೈರಲ್ ವೀಡಿಯೋದ ಅಸಲಿ ಕಥೆ ತಿಳಿದರೆ ಶಾಕ್ ಆಗೋದು ಖಂಡಿತ!
ಸೋಶಿಯಲ್ ಮೀಡಿಯಾಗಳಲ್ಲಿ ಇದ್ದಕ್ಕಿದ್ದಂತೆ ಕೆಲವು ವೀಡಿಯೋಗಳು ವೈರಲ್ ಆಗುವುದು ಮಾತ್ರವೇ ಅಲ್ಲದೇ ಅವರು ಒಂದು ರೀತಿಯ ಸಂಚಲನ ಬನ್ನು ಉಂಟು ಮಾಡುವುವು ಹಾಗೂ ಕೆಲವೊಮ್ಮೆ ಅವು ತೀ ವ್ರ ತರವಾದ ಚರ್ಚೆಗೆ ಕೂಡಾ ಕಾರಣವಾಗುವುದು. ಅಂತಹುದೇ ಒಂದು ವೀಡಿಯೋ ಪ್ರಸ್ತುತ ಕೂಡಾ ವೈರಲ್ ಆಗಿದ್ದು, ಅದರಲ್ಲಿ ಬ್ರೆಜಿಲ್ ನಲ್ಲಿ ಒಂದು 50 ಅಡಿಗಳ ಅನಕೊಂಡ ನದಿಯನ್ನು ದಾಟಿರುವ ವೀಡಿಯೋ ಇದು ಎಂದು ಹೇಳಲಾಯಿತು ವೀಡಿಯೋ ಇದಾಗಿದೆ. ಈ ವೀಡಿಯೋ ಇದೇ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾಗಳಲ್ಲಿ ಕಂಡಿರುವುದಲ್ಲ. ಇದೇ ವೀಡಿಯೋ ಎರಡು ವರ್ಷಗಳ ಹಿಂದೆ ಕೂಡಾ ವೈರಲ್ ಆಗಿ ಆಗಲೂ ಇದು ಸಾಕಷ್ಟು ಕುತೂಹಲವನ್ನು ಕೆರಳಿಸಿ, ಸಾಕಷ್ಟು ಪ್ರಶ್ನೆಯನ್ನು ಹುಟ್ಟು ಹಾಕಿತ್ತು.
ವೈರಲ್ ವೀಡಿಯೋ ಪ್ರಕಾರ ಬ್ರೆಜಿಲ್ ನ ಜಿಂಗು ನದಿಯನ್ನು ಈ ಭಾರೀ ಗಾತ್ರದ ಅನಕೊಂಡ ದಾಟಿ ಹೋಗಿದೆ ಎನ್ನಲಾಗಿದೆ. ಆದರೆ ಇದನ್ನು ನೋಡಿದ ಅನೇಕರ ಪ್ರಶ್ನೆ ಒಂದೇ ಆಗಿದ್ದು, ಅದು ನಿಜವಾಗಿಯೂ ಅನಕೊಂಡ ಹಾವೋ ಅಥವಾ ಬೇರೆ ಏನೋ ಎಂಬುದಾಗಿದೆ. ಇದೀಗ ಅಕ್ಟೋಬರ್ 30 ರಂದು ಮತ್ತೊಮ್ಮೆ ಟ್ವಿಟರ್ ನ ಬಳಕೆದಾರರೊಬ್ಬು ಇದೇ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಮತ್ತೊಮ್ಮೆ ವೈರಲ್ ಆಗುತ್ತಿದೆ. ಮೈಕ್ರೋ ಬ್ಲಾಗಿಂಗ್ ಸೈಟ್ ನಲ್ಲಿ ಈ ವೀಡಿಯೋವನ್ನು ಈಗಾಗಲೇ ಏಳು ಲಕ್ಷ ಬಾರಿ ವೀಕ್ಷಣೆ ಯನ್ನು ಮಾಡಲಾಗಿದ್ದು ಎಲ್ಲರಿಗೂ ರೋಚಕ ಅನುಭವ ನೀಡುತ್ತಿದೆ.
ವೀಡಿಯೋದಲ್ಲಿ ಒಂದು ದೊಡ್ಡ ಗಾತ್ರದ ಅಂದರೆ ಸುಮಾರು 50 ಅಡಿಗಳಗಿಂತಲೂ ಅಧಿಕ ಗಾತ್ರದ ಹಾವು ನದಿಯ ಒಂದು ಬದಿಯಿಂದ ಇನ್ನೊಂದು ಬದಿಗೆ ನೀರಿನಲ್ಲಿ ಹರಿದು ಹೋಗುತ್ತಿರುವುದನ್ನು ನೋಡಬಹುದಾಗಿದೆ ಆದರೆ ವಾಸ್ತವವಾಗಿ ಇದು ನಿಜವಲ್ಲ ಎನ್ನಲಾಗಿದೆ. ಫ್ಯಾಕ್ಟ್ ಚೆಕಿಂಗ್ ವೆಬ್ಸೈಟ್ ದಟ್ಸ್ ನಾನಸೆನ್ಸ್ ಪ್ರಕಾರ ಇಂತಹ ವೀಡಿಯೋ 2018 ರಿಂದ ಕೂಡಾ ಇದ್ದು ಆಗ ಸ್ಥಳದ ಹೆಸರನ್ನು ನಮೂದು ಮಾಡದೆ ಜೈಂಟ್ ಅನಕೊಂಡ ಕ್ರಾಸಿಂಗ್ ದಿ ರೋಡ್ (ರಸ್ತೆ ದಾಟುತ್ತಿರುವ ದೈ ತ್ಯ ಅನಕೊಂಡ)ಎನ್ನುವ ಶೀರ್ಷಕೆಯಡಿಯಲ್ಲಿ ಒಂದು ವೀಡಿಯೋ ವೈರಲ್ ಆಗಿತ್ತು. ಆ ವೀಡಿಯೋವನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಿದರೆ ಈಗ ವೈರಲ್ ಆಗಿರುವ ವೀಡಿಯೋದ ವಾಸ್ತವ ಬಯಲಿಗೆ ಬರುತ್ತದೆ.
ಈಗ 50 ಅಡಿಯ ಅನಕೊಂಡ ಎಂದು ತೋರಿಸಿರುವ ವೀಡಿಯೋ ವಾಸ್ತವವಾಗಿ 2018 ರಲ್ಲಿ ವೈರಲ್ ಆಗಿದ್ದ ಅದೇ ವೀಡಿಯೋವನ್ನು ಸ್ಟ್ರೆಚ್ ಮಾಡಲಾಗಿದೆ. ವೀಡಿಯೋದ ಡೈಮನ್ಷನ್ ಬದಲಿಸಿದ ನಂತರ ವಾಸ್ತವದಲ್ಲಿ ಹಾವು ಎಷ್ಟು ದೊಡ್ಡದಾಗಿದೆಯೇ ಅದಕ್ಕಿಂತ ತುಂಬಾ ವಿಶಾಲವಾಗಿ ಅದು ಕಾಣುವಂತೆ ವೀಡಿಯೋದಲ್ಲಿ ತೋರಿಸಲಾಗಿದೆ. ಇನ್ನೊಂದು ವೆಬ್ಸೈಟ್ ಕೂಡಾ ಇದನ್ನೇ ಒತ್ತಿ ಹೇಳಿದ್ದು ವಾಸ್ತವವಾಗಿ ಒಂದು ಸಾಮಾನ್ಯ ಅನಕೊಂಡ ರಸ್ತೆಯನ್ನು ದಾಟಿರುವ ವೀಡಿಯೋವನ್ನು ಆ ರೀತಿ ಎಡಿಟ್ ಮಾಡಲಾಗಿದೆಯಷ್ಟೇ, ಐವತ್ತು ಅಡಿಯ ಅನಕೊಂಡ ನದಿ ದಾಟಿದ ವೀಡಿಯೋ ಶುದ್ಧ ಸುಳ್ಳು ಎಂದು ಹೇಳಿದೆ. ಅಲ್ಲಿಗೆ ಈ ವೈರಲ್ ವೀಡಿಯೋದ ನಿಜಾಂಶ ಬಯಲಾಗಿದೆ.
ವಿಡಿಯೋ ನೋಡಿ
An anaconda measuring more than 50 feet found in the Xingu River, Brazil pic.twitter.com/FGDvyO76sn
— The Dark Side Of Nature (@Darksidevid) October 30, 2020
ಆದರೂ ಕೂಡಾ ಅನೇಕರಿಗೆ ಇನ್ನೂ ಕೂಡಾ ಈ ವೀಡಿಯೋ ನ ಕಲಿ ಎಂದು ತಿಳಿಯದೆ ಶೇರ್ ಮಾಡುತ್ತಾ ಸಾಗಿರುವುದು ಮಾತ್ರವೇ ಅಲ್ಲದೇ ಇದು ರಿಯಲ್ ವೀಡಿಯೋ ಎಂದೇ ಭ್ರಮಿಸಿದ್ದಾರೆ. ಆದರೆ ಫ್ಯಾಕ್ಟ್ ಚೆಕ್ ನಲ್ಲಿ ಇದು ಅಸಲಿ ವೀಡಿಯೋ ಅಲ್ಲ, ಅಂತಹ ಭಾರೀ ಗಾತ್ರದ ಹಾವು ನದಿಯನ್ನು ಕೂಡಾ ದಾಟಿಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ. ಆದರೆ ವೀಡಿಯೋ ಮಾತ್ರ ಭರ್ಜರಿ ವೈರಲ್ ಆಗುತ್ತಾ ಲಕ್ಷಾಂತರ ವೀಕ್ಷಣೆ, ಸಾವಿರಾರು ಪ್ರತಿಕ್ರಿಯೆ ಗಳನ್ನು ಪಡೆಯುತ್ತಿದೆ ಎನ್ನುವುದು ಕೂಡಾ ಸುಳ್ಳಲ್ಲ.