Video; ಪರಿಶ್ರಮವಿಲ್ಲದೆ ಬ್ರಷ್ ಮಾಡುತ್ತಿರುವ ಈ ಭೂಪನ ಹೊಸ ಐಡಿಯಾ ಆಯ್ತು ವೈರಲ್..!
ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಸಾವಿರಾರು ವಿಶೇಷ ವಿಡಿಯೋಗಳು ನೋಡಲು ಸಿಗುತ್ತವೆ. ಈ ವಿಡಿಯೋಗಳಲ್ಲಿ ತಮಾಷೆಯ ವಿಡಿಯೋಗಳು ಜಾಸ್ತಿ ಇರುತ್ತವೆ. ಸದ್ಯ ಇಂತದ್ದೇ ತಮಾಷೆಯ ವಿಡಿಯೋ ಒಂದು ಜನರಿಗೆ ಮನರಂಜನೆ ನೀಡುತ್ತಿದೆ. ಈ ವಿಡಿಯೋದಲ್ಲಿ ಹಲ್ಲುಗಳನ್ನು ಉಜ್ಜಿಕೊಳ್ಳುವ ಹೊಸ ರೀತಿಯ ಐಡಿಯಾ ನೋಡಿದ ಮೇಲೆ ನೀವೂ ಬಿದ್ದು ಬಿದ್ದು ನಗುತ್ತೀರಿ.
ಪ್ರಸ್ತುತ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತುಂಬಾ ಖತರ್ನಾಕ್ ಆಗಿ ತನ್ನ ಹಲ್ಲುಗಳನ್ನು ಉಜ್ಜಿಕೊಳ್ಳುತ್ತಿದ್ದಾನೆ. ಹಲ್ಲುಗಳನ್ನು ಹುಚ್ಚಿಕೊಳ್ಳುವ ಸಂದರ್ಭದಲ್ಲಿ ಆತನ ಕೈಯಲ್ಲಿರುವ ಸಾಧನ ನೋಡಿದಾಗ ನೋಡುಗರಿಗೆ ನಗು ತಡೆಯಲಾಗುತ್ತಿಲ್ಲ. ವ್ಯಕ್ತಿಯು ಗನ್ ಮೇಲೆ ಹಲ್ಲುಜ್ಜುವ ಬ್ರಷ್ ಸೆಟ್ ಮಾಡಿ ಮೇಲಿಂದ ಮೇಲೆ ಟ್ರಿಗರ್ ಪ್ರೆಸ್ ಮಾಡುತ್ತಿದ್ದಾನೆ. ಟ್ರಿಗರ್ ಪ್ರೆಸ್ ಮಾಡುತ್ತಾ ಬಾಯಲ್ಲಿರುವ ಎಲ್ಲಾ ಹಲ್ಲುಗಳನ್ನು ಉಜ್ಜಿಕೊಳ್ಳುತ್ತಿದ್ದಾನೆ. ಒಮ್ಮೆ ಹಿಂದೆ, ಒಮ್ಮೆ ಮುಂದೆ, ಆಮೇಲೆ ಬದಿಗೆ ಮೇಲೆ ಕೆಳಗೆ ಹೀಗೆ ಎಲ್ಲ ಪ್ರಕಾರಗಳಲ್ಲಿ ತನ್ನ ಹಲ್ಲುಗಳನ್ನು ಉಜ್ಜಿಕೊಳ್ಳುತ್ತಿದ್ದಾನೆ. ಈ ಸೀನ್ ನೋಡಲು ತುಂಬಾ ತಮಾಷೆಯದ್ದಾಗಿದೆ. ವಿಡಿಯೋದಲ್ಲಿ ಗನ್ನಿನ ಶಬ್ದ ಸ್ಪಷ್ಟವಾಗಿ ಕೇಳಿ ಬರುತ್ತಿದೆ.
ವಿಡಿಯೋ ನೋಡಿ
https://twitter.com/AwardsDarwin_/status/1556732390147604480?t=kl0gtPSnVexJZ4zi9gLTbg&s=19
ಈ ತಮಾಷೆಯ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಆದ ಟ್ವಿಟರ್ ನಲ್ಲಿ The Darwin Awards ಹೆಸರಿನ ಐಡಿ ಇಂದ ಶೇರ್ ಮಾಡಲಾಗಿದೆ. 15 ಸೆಕೆಂಡುಗಳ ಈ ವಿಡಿಯೋವನ್ನು ಇಲ್ಲಿಯವರೆಗೆ ಲಕ್ಷಾವಧಿ ಜನರು ನೋಡುವುದರ ಜೊತೆಗೆ ಸಾವಿರಾರು ಜನರು ಲೈಕ್ ಮಾಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಅನೇಕ ರೀತಿಯ ತಮಾಷೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.