Video: ಪುಟ್ಟ ಒಂದು ಬಾರಿಯಾದ್ರೂ ರಿಷಭ್ ಶೆಟ್ಟಿ ತರ “ಲುಂಗಿ” ಸ್ಟೈಲ್ ಹೊಡೆಯಲೇ ಬೇಕು ಎಂದು ತೊಟ್ಟಿದ್ದಾನೆ ಪಣ! ಏನಾಗುತ್ತೆ ನೋಡಿ

ಚಿಕ್ಕ ಮಕ್ಕಳ ಆಟ ದೇವರಿಗೂ ತಿಲಿಯಲ್ಲವಂತೆ! ಹೌದು ಈ ಮಕ್ಕಳ ಆಟ ಅಷ್ಟೊಂದು ವಿಶೇಷತೆಯಿಂದ ಕೂಡಿರುತ್ತದೆ. ಅದರಲ್ಲೂ ಈ ಮಕ್ಕಳು ಹೆಚ್ಚಾಗಿ ದೊಡ್ಡವರನ್ನು ಅನುಕರಣಿಸುವದರಲ್ಲಿ ತುಂಬಾ ಎಕ್ಸಪರ್ಟ್ ಆಗಿರುತ್ತಾರೆ. ಪುಟ್ಟನ ಇಲ್ಲಿಯ ವಿಡಿಯೋ ಸ್ವಲ್ಪ ಇದೆ ರೀತಿಯದಾಗಿದೆ.

ಸದ್ಯ ಎಲ್ಲೆಡೆ ಕನ್ನಡ ಚಿತ್ರ ಕಾಂತಾರ ಸಖತ್ ಧೂಳ್ ಎಬ್ಬಿಸಿದೆ. ಬಹುಶಃ ಈ ಹುಡುಗನ ಮೇಲೆ ರಿಷಭ್ ಅವರ ಲುಂಗಿ ಸ್ಟೈಲ್ ಪರಿಣಾಮ ತುಂಬಾನೇ ಆಗಿದೆ ಎಂದು ಕಂಡು ಬರುತ್ತಿದೆ. ಕಾರಣ ಈ ಪುಟ್ಟ ಹುಡುಗ ಲುಂಗಿ ತೊಟ್ಟುಕೊಂಡಿದ್ದಾನೆ. ಅದನ್ನು ಡಿವೈನ್ ಸ್ಟಾರ್ ರಿಷಭ್ ತರ ಮೆಲೇರಿಸಿ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ, ಆದರೆ ಅದು ಆತನಿಗೆ ಆಗುತ್ತಿಲ್ಲ. ಆದರೂ ಪುಟ್ಟ ತನ್ನ ಪ್ರಯತ್ನ ಅಷ್ಟೊಂದು ಈಜಿಯಾಗಿ ಬಿಟ್ಟು ಕೊಡುತ್ತಿಲ್ಲ. ಒಂದು ರೀತಿಯಲ್ಲಿ ನೆವರ್ ಗೀವ್ ಅಪ್ ತರ. ಹುಡುಗ ಎಷ್ಟು ಪ್ರಯತ್ನ ಮಾಡಿದರೂ ಆತನಿಗೆ ಈ ಸ್ಟೈಲ್ ಮಾಡಲು ಆಗಿಲ್ಲ. ಕಟ್ಟ ಕಡೆಗೆ ಆತನ ಸಂಯಮ ಮೀರಿ ರಿಷಭ್ ಅಲ್ಲ ಮತ್ತಾರೂ ಅಲ್ಲ ತನ್ನದೇ ಒಂದು ಬೇರೆ ಸ್ಟೈಲ್ ಲ್ಲಿ ಲುಂಗಿಯನ್ನು ಮೇಲೇರಿಸಿಕೊಂಡು ಬಿಟ್ಟಿದ್ದಾನೆ.

ನೋಡಿ ಪುಟ್ಟನ ಲುಂಗಿಯ ಸಖತ್ ಸ್ಟೈಲ್…

ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ Insta.aahil ಈ ಹೆಸರಿನಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ 1 ಮಿಲಿಯನ್ ಗಳ ವರೆಗೆ ವೀಕ್ಷಣೆಯನ್ನು ಪಡೆದಿದೆ. ಹಾಗೂ ಸಾವಿರಾರು ಜನರು ಲೈಕ್ ಮಾಡಿದ್ದಾರೆ.