Video; ಬಾನೆತ್ತರದ 6 ಬಾರಿಸಿ ಪಾಕ್ ವಿರುದ್ಧ ಗೆಲುವು ತಂದು ಕೊಟ್ಟ ಹಾರ್ದಿಕ್ ಗೆ TV ಯಲ್ಲಿ ಮುತ್ತಿಕ್ಕಿದ ಅಫ್ಗಾನ್ ಅಭಿಮಾನಿ…
ಪ್ರಸ್ತುತ ಏಷಿಯಾ ಕಪ್ ಕ್ರಿಕೆಟ್ ಪಂದ್ಯದಲ್ಲಿ ಬದ್ಧ ವೈರಿಗಳಾದ ಭಾರತ ಮತ್ತು ಪಾಕ್ ಕಳೆದ ರವಿವಾರ ಎದುರು ಬದುರಾಗಿದ್ದವು. ಪ್ರಸ್ತುತ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಪಾಕಿಸ್ತಾನಕ್ಕೆ ಬ್ಯಾಟಿಂಗ್ ನೀಡಿತ್ತು. ಈ ಪಂದ್ಯದಲ್ಲಿ ಪಾಕ್ ಭಾರತಕ್ಕೆ 147 ರನ್ ಗಳ ಗುರಿ ನೀಡಿತು.
ನಂತರ ಭಾರತ ಬ್ಯಾಟ್ ಮಾಡಲು ಇಳಿದಾಗ ಭಾರತ ಸಹಜವಾಗಿ ಗೆಲ್ಲುವ ಪಂದ್ಯ ಕೊಂಚ ಕೊಂಚ ಕಠಿಣ ಮಾಡಿಕೊಳ್ಳುವತ್ತ ದಾಪುಗಾಲು ಹಾಕುತ್ತಿತ್ತು. ಆದರೆ ವಿರಾಟ್, ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ಅವರು ಒಳ್ಳೆಯ ಆಟ ಪ್ರದರ್ಶಿಸುವಲ್ಲಿ ಯಶಸ್ವಿಯಾದರು. ಇಷ್ಟಾದರೂ ಕೊನೆಯ ಘಳಿಗೆಯಲ್ಲಿ ಜಡೇಜಾ ಅವರು ಔಟ್ ಆದಾಗ ಭಾರತ ಸ್ವಲ್ಪ ಇಕ್ಕಟ್ಟಿಗೆ ಸಿಲುಕಿತ್ತು. ಆದರೆ ಹಾರ್ದಿಕ್ ಪಾಂಡ್ಯ ಅವರು ಮಾತ್ರ ಹಾಗಾಗಲು ಬಿಡಲಿಲ್ಲ. ಮತ್ತು ಕೊನೆಯ ಓವರ್ ನಲ್ಲಿ 6 ಬಾರಿಸಿ ಭಾರತಕ್ಕೆ ರೋಚಕ ಗೆಲುವು ತಂದು ಕೊಟ್ಟರು. ಹಾರ್ದಿಕ್ ಅವರ ಈ ಅಮೋಘ ಆಟ ಭಾರತದ ಅಭಿಮಾನಿಗಳಿಗಂತೂ ತುಂಬಾ ಇಷ್ಟವಾಯಿತು. ಜೊತೆಗೆ ಅಫ್ಗಾನ್ ಅಭಿಮಾನಿಗಳಿಗೂ ತುಂಬಾ ಇಷ್ಟವಾಯಿತು ಎಂದು ಹೇಳಬಹುದು.
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಅಫ್ಗಾನ್ ಕ್ರಿಕೆಟ್ ರಸಿಕರ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಕ್ರಿಕೆಟ್ ರಸಿಕರು ಕೊನೆಯಲ್ಲಿ ಕುಳಿತು ಪ್ರಸ್ತುತ ಪಂದ್ಯವನ್ನು ವೀಕ್ಷಿಸುತ್ತಿದ್ದಾರೆ. ಈ ಮಧ್ಯೆ ಪಾಂಡ್ಯ ಅವರು 6 ಬಾರಿಸಿ ಭಾರತವನ್ನು ಗೆಲ್ಲಿಸಿ ಬಿಡುತ್ತಾರೆ. ಈ ಸಂಭ್ರಮವನ್ನು ಅಫ್ಗಾನ್ ಅಭಿಮಾನಿಯೊಬ್ಬ ತುಂಬಾ ಯುನೀಕ್ ಆಗಿ ಸೆಲೆಬ್ರೇಟ್ ಮಾಡಿದ್ದಾನೆ.
ನೋಡಿ ಈ ವಿಡಿಯೋ…
View this post on Instagram
ಅದ್ಹೆಗೆಂದರೆ ಈ ಅಭಿಮಾನಿ ಹಾರ್ದಿಕ್ ಪಾಂಡ್ಯ ಅವರಿಗೆ TV ಯಲ್ಲಿಯೇ ಮುತ್ತಿಕ್ಕಿದ್ದಾನೆ. ಮತ್ತು ಜೋಶ್ ನಲ್ಲಿ ಎದೆಗೆ ಬಡಿದುಕೊಂಡು ಚಿಯರ್ ಮಾಡಿದ್ದಾನೆ. ಈ ದೃಶ್ಯವು ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದ್ದು ಮಿಲಿಯನ್ ಮಿಲಿಯನ್ ಗಟ್ಟಲೆ ವೀಕ್ಷಣೆಯನ್ನು ಪಡೆದಿದೆ. ಹಾಗೂ ಅಷ್ಟೇ ಲೈಕ್ಸ್ ಗಳನ್ನೂ ಸಹ ಹೊಂದಿದೆ.