Video; ಮನುಷ್ಯರ ಜಗಳದಲ್ಲೇನು ಮಜಾ? ಸ್ವಲ್ಪ ಬಿಡುವು ಮಾಡಿಕೊಂಡು ಈ ಪುಟಾಣಿ ಆನೆಯ ಮತ್ತು ಹಕ್ಕಿಯ ಕದನ ನೋಡಿ..👌👌
ನಾವು ಎಷ್ಟೇ ಶಾಂತವಿರಲು ಪ್ರಯತ್ನ ಮಾಡಿದರು ಕೆಲವೊಮ್ಮೆ ಈ ಸಮಾಜ ಹಾಗೂ ಸಮಾಜದ ಘಟಕಗಳು ಕೆಲವರಿಗೆ ಶಾಂತತೆಯಿಂದ ಕುಳಿತುಕೊಳ್ಳಲು ಬಿಡುವುದಿಲ್ಲ. ಹೀಗಾಗಿ ಸಮಾಜದಲ್ಲಿ ಅಸ್ತಿತ್ವಕ್ಕಾಗಿ, ಅಹಂ ಗಾಗಿ ಜಗಳಗಳು ಆಗಾಗ ನಡೆದೇ ಹೋಗುತ್ತವೆ. ಈ ಜಗಳಗಳನ್ನು ಸ್ವಲ್ಪ ಬದಿಗಿಟ್ಟು ಕಾಡಿನ ಜಗತ್ತಿನಲ್ಲಿ ನಡೆದ ಒಂದು ರೋಚಕ ಜಗಳ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನೋಡಲು ಸಿಗುತ್ತಿದೆ. ಈ ಜಗಳ ನೋಡಿದಾಗ ನಗುತಡೆದುಕೊಳ್ಳುವದು ಕಷ್ಟವಾಗಬಹುದು.
ಪ್ರಸ್ತುತ ವಿಡಿಯೋದಲ್ಲಿ ನೀರಿನ ಹೊಂಡದ ಹತ್ತಿರ ಒಂದು ಪುಟ್ಟ ಮುದ್ದು ಆನೆ ನೀರು ಕುಡಿಯುತ್ತಿರುತ್ತದೆ. ಅದರ ಎದುರಿಗೆ ಸಮೀಪದಲ್ಲಿ ಒಂದು ಪಕ್ಷಿಯು ನಿಂತಿರುವುದು ಕಂಡುಬರುತ್ತದೆ. ಈ ಸಂದರ್ಭದಲ್ಲಿ ಪುಟ್ಟ ಆನೆ ತನ್ನಷ್ಟಕ್ಕೆ ತಾ ನೀರು ಕುಡಿದು ಹೋಗುವುದನ್ನು ಬಿಟ್ಟು ಅಲ್ಲಿಯೇ ನಿಂತ ಹಕ್ಕಿಯ ಮೇಲೆ ನೀರನ್ನು ಎರಚುತ್ತದೆ. ಯಾವಾಗಲೂ ಪುಟ್ಟ ಮುದ್ದು ಆನೆಗಳು ಏನಾದರೂ ಕಿತಾಪತಿ ಕೆಲಸ ಮಾಡುವುದರಲ್ಲಿ ಮುಂದಾಗಿರುತ್ತವೆ.
ಆದರೆ ಇಲ್ಲಿ ಹಕ್ಕಿಗೆ ಮಾತ್ರ ಆನೆಯ ಈ ಕೃತ್ಯ ಸ್ವಲ್ಪವೂ ಹಿಡಿಸಿಲ್ಲ. ಮತ್ತೇನು ರೋಷದಿಂದ ಹಕ್ಕಿಯು ಆನೆಯ ತಲೆಯ ಮೇಲೆ ಹೋಗಿ ಕುಳಿತು ಕುಕ್ಕಲು ಶುರು ಮಾಡಿದೆ. ಆನೆ ಇಲ್ಲಿ ತಾನೇ ಬಲಿಷ್ಠ ಮತ್ತು ಹಕ್ಕಿಗೆ ಕ್ಷುದ್ರ ಜೀವಿಯೆಂದು ಭಾವಿಸಿದೆ. ಹಕ್ಕಿಯು ಆನೆಯ ತಲೆಯ ಮೇಲೆ ಕುಳಿತು ಒಂದೇ ಸವನೆ ಆನೆಗೆ ತಾಪತ್ರಯ ನೀಡಲು ಶುರು ಮಾಡಿದೆ. ಕಂಗಾಲದ ಆನೆ ರೋಷದಿಂದ ಹಕ್ಕಿಯ ಮೇಲೆ ಸೇಡು ತೀರಿಸಿಕೊಳ್ಳಲು ಯರ್ರಾಬಿರ್ರಿ ಅಲ್ಲಿಯೇ ಸುತ್ತಾಡಿದೆ. ಆಗ ಹಕ್ಕಿಯು ತಲೆಯ ಮೇಲಿಂದ ಕೆಳಗಿಳಿದು ಮತ್ತೆ ನೀರಿನಲ್ಲಿ ನಿಲ್ಲುತ್ತದೆ. ಆನೆ ಮಾತ್ರ ತನ್ನ ಸೊಂಡಲಿನಿಂದ ಅದಕ್ಕೆ ಡಿಕ್ಕಿ ಹೊಡೆಯುತ್ತದೆ. ಹಕ್ಕಿಯು ಸ್ವಲ್ಪವೂ ಹೆದರದೆ ಆನೆಯ ಮೇಲೆ ಏರಿ ಹೋಗುತ್ತದೆ. ಈ ಸಂದರ್ಭದಲ್ಲಿ ಆನೆ ತನ್ನ ಸಂಯಮವನ್ನು ಕಳೆದುಕೊಂಡು ಕಾಲಿನಿಂದ ಹಕ್ಕಿಗೆ ಒದೆಯಲು ಶುರು ಮಾಡುತ್ತದೆ. ಒಟ್ಟಿನಲ್ಲಿ 34 ಸೆಕೆಂಡುಗಳ ಈ ವಿಡಿಯೋ ತುಂಬಾ ವಿಶೇಷವಾಗಿದೆ. ಇಲ್ಲಿ ಆನೆಮರಿಗೆ ತಾನು ಮಾಡಿದ ತಪ್ಪಿಗೆ ನಿಶ್ಚಿತವಾಗಿಯೂ ಪಶ್ಚಾತ್ತಾಪವಾಗಿದೆ ಎಂದೆನಿಸುತ್ತದೆ. ಈ ವಿಡಿಯೋ ನೋಡಿದಾಗ ನಿಜವಾಗಿಯೂ ನೋಡಿದವರಿಗೆ ಹಾಗೆಯೆ ಅನಿಸುತ್ತದೆ.
ವೀಡಿಯೋ ನೋಡಿ
It's all about courage….. pic.twitter.com/4gnj79qIRa
— Dr.Samrat Gowda IFS (@IfsSamrat) October 22, 2022
ಅರಣ್ಯದಲ್ಲಿಯ ಎರಡು ಜೀವಿಗಳ ಅಸ್ತಿತ್ವದ ಹೋರಾಟದ ಈ ಸುಂದರ ವಿಡಿಯೋವನ್ನು ಟ್ವಿಟರ್ ನಲ್ಲಿ IFS ಅಧಿಕಾರಿಯಾದ ಡಾಕ್ಟರ್ ಸಾಮ್ರಾಟ್ ಗೌಡ ಅವರು ಶೇರ್ ಮಾಡಿದ್ದಾರೆ. ವಿಡಿಯೋ ನೋಡಿದ ನೇಟಿಜನ್ಸ್ ಗಳು ಅನೇಕ ರೀತಿಯ ತಮಾಷೆಯ ಪ್ರತಿಕ್ರಿಯೆಗಳನ್ನು ನೋಂದಾಯಿಸುತ್ತಿದ್ದಾರೆ. ಒಬ್ಬನು ವಾವ್ ತುಂಬಾ ಸುಂದರವಾದ ಜಗಳ, ಆದರೆ ‘ಈ ಜಗಳ ಸ್ಟಾರ್ಟ್ ಮಾಡಿದ್ದು ಆನೆಮರಿ’ ಎಂದಿದ್ದಾನೆ. ಇನ್ನೊಬ್ಬ ‘ಈ ಜಗಳ ಬೇಬಿ ಎಲಿಫೆಂಟ್ ಮತ್ತು ತಿಳುವಳಿಕೆಯುಳ್ಳ ಹಕ್ಕಿಯ ಮಧ್ಯೆ ನಡೆದಿದೆ’ ಎಂದು ಪ್ರತಿಕ್ರಿಯೆ ನೀಡಿದ್ದಾನೆ.