Video; ಮನೆಯಲ್ಲಿ ಮಂಗಣ್ಣ ಮಾಡುತ್ತಿದ್ದಾನೆ ಬೀನ್ಸ್ ಕಟ್! ಮುಖದ ರಿಯಾಕ್ಷನ್ ನೋಡಿ ನೆಟ್ಟಿಗರೆಂದರು ಅಯ್ಯೋ ಪಾಪ! ಎಷ್ಟೊಂದು ಪರಿಶ್ರಮ?
ಸೋಶಿಯಲ್ ಮೀಡಿಯಾದಲ್ಲಿ ಒಮ್ಮೊಮ್ಮೆ ಕಂಡು ಬರುವ ಮಂಗಗಳ ವಿಡಿಯೋ ತುಂಬಾ ತಮಾಷೆಯಿಂದ ಕೂಡಿರುತ್ತವೆ. ಇದೇ ಕಾರಣದಿಂದಾಗಿ ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಥಟ್ಟನೆ ವೈರಲ್ ಆಗಿಬಿಡುತ್ತವೆ. ಮಂಗಗಳು ಮಾಡುವ ಪ್ರತಿಯೊಂದು ಕೆಲಸದಲ್ಲಿ ಹೆಚ್ಚು ಕಡಿಮೆ ತುಂಟತನವೇ ಕೂಡಿರುತ್ತವೆ. ಈ ಮಂಗಗಳು ಗಂಭೀರವಾಗಿ ಇರುವ ಸಂದರ್ಭ ತುಂಬಾ ಕಡಿಮೆ ಎಂದೇ ಹೇಳಬಹುದು. ಇವು ಎಷ್ಟೋ ಸಲ ಮನುಷ್ಯನ ಹಾಗೆ ವರ್ತಿಸುತ್ತವೆ. ಆಗ ಆ ವಿಡಿಯೋಗಳು ನೋಡಲು ತುಂಬಾ ತಮಾಷೆಯಾಗಿರುತ್ತವೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇದೇ ರೀತಿಯ ಒಂದು ವಿಡಿಯೋ ಭರದಿಂದ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮಂಗವು ತುಂಬಾ ಜವಾಬ್ದಾರಿಯಿಂದ ಒಂದು ಕೆಲಸ ಮಾಡುತ್ತಿದೆ. ಹೀಗಾಗಿ ಈ ವಿಡಿಯೋ ನೆಟ್ಟಿಗರಿಗೆ ತುಂಬಾ ಇಷ್ಟವಾಗುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ತಮಾಷೆಯ ವಿಡಿಯೋದಲ್ಲಿ ಮಂಗ ಒಂದು ಮನೆಯಲ್ಲಿ ಕುಳಿತು ಮನುಷ್ಯರ ಹಾಗೆ ಕೆಲಸವನ್ನು ಮಾಡುತ್ತಿದೆ. ಮಂಗನ ಮುಂದೆ ಒಂದು ಸ್ಟೀಲ್ ಬುಟ್ಟಿ ಇದೆ. ಅದರಲ್ಲಿ ಬೀನ್ಸ್ ಗಳು ತುಂಬಿವೆ. ಮಂಗವು ಒಂದರ ನಂತರ ಒಂದು ಬೀನ್ಸ್ ತೆಗೆದುಕೊಂಡು ಕೈಯಿಂದ ಕಟ್ ಮಾಡಿ ಮಾಡಿ ಮತ್ತೆ ಅದರಲ್ಲಿ ಒಗೆಯುತ್ತಿದೆ. ಈ ಕೆಲಸ ಮಾಡುವಾಗ ಅದರ ಮುಖದ ಮೇಲೆ ಕಂಡು ಬರುವ ಎಕ್ಸ್ ಪ್ರೇಶನ್ ಗಳು ನೋಡುಗರಿಗೆ ತುಂಬಾ ಮೆಚ್ಚುಗೆಯಾಗಿದೆ. ಈ ದೃಶ್ಯ ನೋಡಿದಾಗ ಮಂಗವು ತನ್ನ ಈ ಕೆಲಸ ಎಷ್ಟೊಂದು ನಿಷ್ಠೆ ಹಾಗೂ ಗಂಭೀರತೆಯಿಂದ ಮಾಡಿ ಮುಗಿಸುವ ಪ್ರಯತ್ನದಲ್ಲಿದೆ ಎಂದು ತಿಳಿದು ಬರುತ್ತದೆ. ಈ ಕೆಲಸ ಮಾಡುವಾಗ ಮಧ್ಯದಲ್ಲಿ ಅತ್ತ ಇತ್ತ ನೋಡುತ್ತದೆ ಮತ್ತೆ ತನ್ನ ಕೆಲಸದಲ್ಲಿ ಮುಳುಗುತ್ತದೆ. ಒಟ್ಟಿನಲ್ಲಿ ಮಂಗ ಈ ಕೆಲಸ ಮಾಡುವಾಗ ತುಂಬಾ ಗಂಭೀರವಾಗಿದೆ, ಹಾಗೂ ಸಾಕಷ್ಟು ಪರಿಶ್ರಮವನ್ನು ತೆಗೆದುಕೊಳ್ಳುತ್ತಿದೆ ಎಂಬಂತೆ ತಿಳಿದು ಬರುತ್ತಿದೆ.
ವಿಡಿಯೋ ನೋಡಿ
Facial expression every time is legendary…
— Tansu YEĞEN (@TansuYegen) June 26, 2022
ಈ ವಿಡಿಯೋ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಆದ ಟ್ವಿಟರ್ ನಲ್ಲಿ @TansuYegen ಹೆಸರಿನ ಅಕೌಂಟ್ನಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋವನ್ನು 5 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. ವಿಡಿಯೋ ನೋಡಿದ ನೇಟಿಜನ್ಸ್ ಗಳು ಹದ್ದು ಮೀರಿ ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ.