Video; ಮಳಿಗೆಯ ಟೆರೆಸ್ ಮೇಲೆ ಏರಿ ನಿಂತ ಗೂಳಿ; ಸಿಮೆಂಟ್ ಶೀಟ್ ಮೇಲೆ ಕಾಲಿಟ್ಟು ಇಳಿಯಲು ಯತ್ನಿಸಿದಾಗ 😳😳..!

ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳ ಅನೇಕ ಪ್ರಕಾರದ ವಿಡಿಯೋಗಳು ನೆಟ್ಟಿಗರಿಗೆ ಮನರಂಜನೆಯನ್ನು ನೀಡುತ್ತವೆ. ಕೆಲವೊಮ್ಮೆ ಇವೇ ಪ್ರಾಣಿಗಳು ತೀರ ಸಂಕಷ್ಟದಲ್ಲಿ ಸಿಲುಕಿರುವ ದೃಶ್ಯಗಳನ್ನು ನೋಡುತ್ತೇವೆ. ಅಂಥ ದೃಶ್ಯಗಳನ್ನು ನೋಡಿದಾಗ ಮನ ನಿಜಕ್ಕೂ ನೋಯುತ್ತದೆ.

ಸದ್ಯ ಇದೇ ರೀತಿಯ ಗೂಳಿಯ ವಿಡಿಯೋ ಒಂದು ಇಂಟರ್ನೆಟ್ ನಲ್ಲಿ ಕಂಡು ಬರುತ್ತಿದೆ. ಇಲ್ಲಿ ಗೂಳಿಯೊಂದು ರಸ್ತೆಯ ಬದಿಯಲ್ಲಿರುವ ಅಂಗಡಿಯ ಮಾಳಿಗೆಯ ಮೇಲೆ ಅದ್ಹೇಗೆ ಏರಿ ನಿಂತಿದೆ ಗೊತ್ತಿಲ್ಲ. ಪ್ರಸ್ತುತ ವ್ಯಕ್ತಿಯೊಬ್ಬ ಈ ದೃಶ್ಯವನ್ನು ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾನೆ. ಇದರ ಮುಂದಿನ ದೃಶ್ಯ ನೋಡುವುದಕ್ಕೂ ಬೇಡವೇನಿಸುತ್ತದೆ. ಕಾರಣ ಮೇಲೇರಿದ ಗೂಳಿ ಕೆಳಗೆ ಇಳಿಯುವ ಸಲುವಾಗಿ ಮೊದಲು ಒಂದು ಕಾಲನ್ನು ಅಂಗಡಿಯ ಮುಂದೆ ಹಾಕಿರುವ ಸಿಮೆಂಟ್ ಶೆಡ್ ಮೇಲೆ ಇಡುತ್ತದೆ. ಗೂಳಿ ಕಾಲಿಡುತ್ತಲೇ ಅದರ ಒಂದು ಕಾಲು ಹಠಾತ್ ಸಿಮೆಂಟ್ ಶೀಟ್ ಒಳಗೆ ಅಂದರೆ ಕೆಳಗೆ ಬರುತ್ತದೆ. ಆಗ ಬೆದರಿದ ಗೂಳಿ ತನ್ನೆಲ್ಲ ಶಕ್ತಿಯನ್ನು ಒಟ್ಟುಗೂಡಿಸಿ ಅಲ್ಲಿಂದ ಜಿಗಿಯಲು ಯತ್ನಿಸಿದಾಗ ಮಾತ್ರ ಪರಿಸ್ಥಿತಿ ಹದಗೆಡುತ್ತದೆ. ಗೂಳಿ ಸಿಮೆಂಟ್ ಶೆಡ್ ನೊಂದಿಗೆ ನೇರ ಭೂಮಿಗೆ ಇಳಿದು ಬಿಡುತ್ತದೆ. ಇಲ್ಲಿ ಗೂಳಿಯ ಹಾಗೂ ರಸ್ತೆಯ ಮೇಲೆ ಒಡಾಡುವರ ಅದೃಷ್ಟ ತುಂಬಾನೇ ಚೆನ್ನಾಗಿತ್ತು ಎಂದು ಹೇಳಬಹುದು. ಕಾರಣ ಇಲ್ಲಿ ಗೂಳಿಗೂ ಮತ್ತು ಕೆಳಗೆ ರಸ್ತೆ ಮೇಲೆ ನಡೆದಾಡುವ ಯಾರಿಗೂ ಯಾವುದೇ ರೀತಿಯ ಗಾಯವಾಗಿಲ್ಲ. ಒಟ್ಟಿನಲ್ಲಿ ಕೆಳಗೆ ಬಿದ್ದ ಗೂಳಿ ಮತ್ತೆ ತನ್ನಂತಾನೆ ಎದ್ದು ನಿಲ್ಲುವಲ್ಲಿ ಯಶಸ್ವಿಯಾಗಿದೆ.

ಪಾಪ ಈ ಮಾತುಬಾರದ ಪ್ರಾಣಿಯ ದೃಶ್ಯವನ್ನು ನೋಡಿದಾಗ ನಿಜಕ್ಕೂ ತುಂಬಾ ಕೆಡುಕೆನಿಸುತ್ತದೆ. ಯಾಕೆಂದರೆ ದೇಹದಿಂದ ತುಂಬಾ ಭಾರವಾದ ಈ ಪ್ರಾಣಿ ಏನೂ ತಿಳಿಯದೇ ಮುಂದಿನ ಹೆಜ್ಜೆ ಇಟ್ಟಿತ್ತು. ಆದರೆ ಅದು ತುಂಬಾ ದುಬಾರಿಯಾಗಿ ಬೀಳುವ ಸಾಧ್ಯತೆ ಇತ್ತು. ಆ ರಿತಿಯಾಗಿಲ್ಲ, ನಿಜಕ್ಕೂ ಒಳ್ಳೆಯ ರೀತಿ ಎಂಡ್ ಆಗಿದೆ.

ವೀಡಿಯೋ ನೋಡಿ

 

View this post on Instagram

 

A post shared by Sanjay Sharma (@sanjay.sharma02)