Video: “ವಿಜಯ್ ಮಾಮಾ ಹಾಯ್” ನಾನು ರಿಷಿ; ಸುನಕ್ ಅವರು ಭಾರತದಿಂದ ಕರೆದಿದ್ದು ಯಾರನ್ನು? ಯೂಸರ್ಸ್ ಆಶ್ಚರ್ಯ!

ಯುನೈಟೆಡ್ ಕಿಂಗ್ಡಮ್ ನ ನೂತನ ಪ್ರಧಾನಿ ರಿಷಿ ಸುನಕ್ ಸದ್ಯ ಭಾರತದೆಲ್ಲೆಡೆ ತುಂಬಾ ಸುದ್ದಿಯಲ್ಲಿದ್ದಾರೆ. ಅವರ ಪ್ರತಿಯೊಂದು ಚಟುವಟಿಕೆಗಳು ಭಾರತದಲ್ಲಿ ದೊಡ್ಡ ಸುದ್ದಿಯಾಗುತ್ತಿವೆ. ಅವರು ಎಷ್ಟೊಂದು “ಡೌನ್ ಟು ಅರ್ಥ” ವ್ಯಕ್ತಿಯಾಗಿದ್ದಾರೆ ಎಂಬ ಒಂದು ಉದಾಹರಣೆಯ ವಿಡಿಯೋ ಒಂದು ಸದ್ಯ ವೈರಲ್ ಆಗುತ್ತಿದೆ. ಪ್ರಸಿದ್ಧ ಶೇಫ್ ಸಂಜಯ್ ರೈನಾ ಅವರು ಯುನೈಟೆಡ್ ಕಿಂಗ್ಡಂನ ನೂತನ ಪ್ರಧಾನಿ ರಿಷಿ ಅವರ ಜೊತೆಗಿನ ವಿಡಿಯೋ ಒಂದನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ಸದ್ಯ ಇದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಪ್ರಧಾನಿ ರಿಷಿ ಅವರು ಸಂಜಯ್ ಮಾಮ ಅವರ ಜೊತೆಗೆ ಮಾತನಾಡುತ್ತಿರುವುದು ಕಂಡು ಬರುತ್ತಿದೆ.

ಈ ವಿಡಿಯೋದಲ್ಲಿ ಪ್ರಧಾನಿ ರಿಷಿ ಅವರು ಸಂಜಯ್ ಅವರಿಗೆ ಬ್ರಿಟನ್ನಿನ 10 ಡೌನಿಂಗ್ ಸ್ಟ್ರೀಟ್ ಗೆ ಬರಲು ಆಮಂತ್ರಣವನ್ನು ನೀಡಿದ್ದಾರೆ. 10 ಡೌನಿಂಗ್ ಸ್ಟ್ರೀಟ್ ನಲ್ಲಿ UK ಪ್ರಧಾನಮಂತ್ರಿಯವರ ನಿವಾಸವಿದೆ.

ಶೇಫ್ ಸಂಜಯ್ ರೈನಾ ಅವರು ರಿಷಿ ಸುನಕ್ ಜೊತೆಗಿನ ವಿಡಿಯೋವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿ, ಕ್ಯಾಪ್ಷನ್ ನಲ್ಲಿ “ವೀಸಾ ಆನ್ ಅರೈವಲ್ ಅಬ್ ಪಕ್ಕಾ” ಎಂದು ಬರೆದಿದ್ದಾರೆ.

ರಿಷಿ ವಿಜಯ್ ಮಾಮಾ ಅವರಿಗೆ ಏನು ಹೇಳಿದರು?

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಸಂಜಯ್ ಅವರು ವಿಜಯ ಮಾಮಗೆ ಕಾಲ್ ಮಾಡಿ, ನನ್ನ ಜೊತೆ ಒಬ್ಬರು ಇದ್ದಾರೆ ಅವರು ನಿನಗೆ ಹಲೋ ಹೇಳಲು ಇಚ್ಚಿಸುತ್ತಾರೆ, ಎಂದು ಹೇಳಿದ್ದಾರೆ. ಆಗ “ನಾನು ರಿಷಿ, ನೀವು ಹೇಗಿದ್ದೀರಿ? ನೀವು ನನ್ನನ್ನು ನೋಡಲು ಬರಬಹುದು, ನೀವು ಯಾವತ್ತೇ ಆಗಲಿ ಬಂದು ನಿಮ್ಮ ಅಳಿಯನನ್ನು ಭೇಟಿಯಾಗಬಹುದು, ಅಳಿಯ ನಿಮಗೆ “10 ಡೌನಿಂಗ್ ಸ್ಟ್ರೀಟ್” ಕರೆದುಕೊಂಡು ಬರುತ್ತಾನೆ ಎಂದು ರಿಷಿ ಹೇಳುತ್ತಾರೆ.

ಯೂಸರ್ಸ್ ಗಳು ಏನು ಹೇಳಿದ್ದಾರೆ…

ಬ್ರಿಟನ್ ಪ್ರಧಾನಿಯವರ ಈ ವಿಡಿಯೋ ನೋಡಿ ಯೂಜರ್ಸಗಳು ಬೇರೆ ಬೇರೆ ರೀತಿಯ ರಿಯಾಕ್ಷನ್ ನೀಡುತ್ತಿದ್ದಾರೆ. ಒಬ್ಬನು ಈ ವಿಜಯ್ ಮಾಮಾ ಯಾರಿದ್ದಾರೆ? ವಿಜಯ್ ಮಲ್ಯ ನಾ? ಎಂದು ಕೇಳಿದ್ದಾರೆ.

ಇನ್ನೊಬ್ಬ ಯೂಸರ್ ನಾವಿನ್ನು ವೀಸಾ ಇಲ್ಲದೇನೆ ಯುಕೆಗೆ ಹೋಗಬಹುದಾಗಿದೆ ಎಂದಿದ್ದಾನೆ. ಒಂದು ವೇಳೆ ಏರ್ಪೋರ್ಟ್ ನಲ್ಲಿ ಅಧಿಕಾರಿಗಳು ಅನುಮತಿ ನೀಡದೇ ಇದ್ದಾಗ ನೇರ ಬ್ರಿಟನ್ ಪ್ರಧಾನಿಗೆ ಫೋನ್ ಕಾಲ್ ಮಾಡಿ ಕೇಳಿ ಎಂದು ಹೇಳಬಹುದು. ಇನ್ನೊಬ್ಬ ಯೂಸರ್ ರಿಷಿ ಅಣ್ಣ, ವಿಜಯ್ ಮಾಮ ಬರುವಾಗ ಅವರ ಕೈಯಲ್ಲಿ ಕೊಹಿನೂರ್ ವಜ್ರವನ್ನು ಕಳುಹಿಸಿ ಕೊಡಿ ಪ್ಲೀಜ್, ಎಂದಿದ್ದಾನೆ.