VIDEO; ವಿಷಸರ್ಪವನ್ನೇ ಕ್ಯಾರೆ ಎನ್ನದೆ ಬೇಟೆಯಾಡುವ ಗರುಡನಿಗೆ “ತಿರುಗುಬಾಣ” ವಾದ ಪುಟ್ಟ ಬೇಟೆ.! ಫಜೀತಿಯ ದೃಶ್ಯ ನೋಡಿ.

ಅತಿಯಾದ ಆತ್ಮವಿಶ್ವಾಸವು ಕೆಲವೊಮ್ಮೆ ಶಕ್ತಿಯುತ ಜೀವಿಗಳಿಗೂ ಮಣ್ಣುಮುಕ್ಕಿಸುತ್ತದೆ. ಇದರ ತಾಜಾ ಉದಾಹರಣೆ ಈಗ ಇಲ್ಲಿಯ ವೈಲ್ಡ್ ಲೈಫ್ ವಿಡಿಯೋದಲ್ಲಿ ನೋಡಿದಾಗ ಗೊತ್ತಾಗುತ್ತದೆ.

ದೊಡ್ಡ ದೊಡ್ಡ ವಿಷ ಸರ್ಪಗಳನ್ನು ಭಯವಿಲ್ಲದೆ ಬೇಟೆಯಾಡುವ ಗರುಡನಿಗೆ ಒಂದು ಪುಟ್ಟ ಜೀವಿ ಸಖತ್ ಫಜೀತಿ ಮಾಡಿದೆ. ಹಾವುಗಳನ್ನು ಅಷ್ಟೇ ಅಲ್ಲ ಮೇಕೆ ಮತ್ತು ನರಿಗಳಂತಹ ಪ್ರಾಣಿಗಳನ್ನು ತನ್ನ ಗಟ್ಟಿಯಾದ ಕಾಲುಗುರುಗಳಲ್ಲಿ ಹಿಡಿದು ಮೇಲೆತ್ತಿ ನೆಲಕ್ಕೆ ಅಪ್ಪಳಿಸಿ ನಂತರ ಅದರ ಹೊಟ್ಟೆಯನ್ನು ಸೀಳಿ ತನ್ನ ಹೊಟ್ಟೆಯನ್ನು ತುಂಬಿಕೊಳ್ಳುವ ಗರುಡ ಈ ವಿಡಿಯೋದಲ್ಲಿ ತೀರ ಅಸಹಾಯಕನಂತೆ ಕಂಡುಬರುತ್ತಿದೆ.

ವಿಡಿಯೋದಲ್ಲಿ ಕಂಡು ಬರುವ ದೃಶ್ಯದಂತೆ ಗರುಡ ಒಂದು ಏಡಿಯ ಬೇಟೆಯಾಡಲು ಪ್ರಯತ್ನಿಸಿದೆ. ಈ ಬೇಟೆ ಗರುಡ ಹಕ್ಕಿಗೆ ತಿರುಗುಬಾಣವಾಗಿ ಪರಿಣಮಿಸಿದೆ. ನೀರಿನಲ್ಲಿರುವ ಬಂಡೆಯ ಮೇಲೆ ಕುಳಿತು ಏಡಿಯ ಬೇಟೆಯಾಡುವ ಪ್ಲಾನ್ ಗರುಡ ಹಕ್ಕಿಗೆ ದುಬಾರಿಯಾಗಿ ಪರಿಣಮಿಸಿದೆ. ಇಲ್ಲಿ ಏಡಿಯು ನೇರ ಗರುಡರಾಜನ ಮುಖದ ಮೇಲೆ ಅಟ್ಯಾಕ್ ಮಾಡಿದೆ. ಹೀಗಾಗಿ ಗರುಡ ಪಕ್ಷಿಯು ಒಮ್ಮೆಲೆ ತಬ್ಬಿಬ್ಬಾಗಿದೆ. ಈ ಏಡಿಯಿಂದ ತನ್ನನ್ನು ಯಾವ ರೀತಿ ಬಚಾವ್ ಮಾಡಿಕೊಳ್ಳಬೇಕೆಂದು ತಿಳಿಯದೆ ಹುಚ್ಚನಂತೆ ಒಂದೇ ಸವನೆ ಅಲ್ಲಿಯೇ ಬಡಿದಾಡಿದೆ. ಗರುಡ ಈ ಸಂದರ್ಭದಲ್ಲಿ ನೀರಿನ ಮೊರೆ ಹೋಗಿದೆ. ಆಗ ಏಡಿ ತನ್ನ ಪ್ರಾಣ ಉಳಿಸಿಕೊಳ್ಳಲು ನೀರಿನಲ್ಲಿ ಇಳಿದಿದೆ. ಆಗ ಮಾತ್ರ ಗರುಡ ಪಕ್ಷಿಗೆ ಹೋದ ಜೀವ ಬಂದಂತಾಗಿದೆ.

ನೋಡಿ ಈ ವಿಡಿಯೋ…

ಪ್ರಸ್ತುತ ವಿಡಿಯೋ ಟ್ವಿಟರ್ ನಲ್ಲಿ IFS ಆಫೀಸರ್ ಆದ ಡಾಕ್ಟರ್ ಸಾಮ್ರಾಟ್ ಗೌಡ ಅವರು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋಗೆ “ರಾಂಗ್ ಚಾಯ್ಸ್” ಎಂದು ಕ್ಯಾಪ್ಶನ್ ಬೇರೆ ಕೊಟ್ಟಿದ್ದಾರೆ.