Video; ಶಿಖರ್ ಧವನ್ ಈ ಮೊದಲೇ ರಿಷಭ್ ಪಂತ್ ಗೆ ವೇಗದ ಬಗ್ಗೆ ಎಚ್ಚರಿಕೆ ನೀಡಿದ ಕ್ಲಿಪ್ ವೈರಲ್; ಅಷ್ಟಕ್ಕೂ ಹೇಳಿದ್ದೇನು?

ಭಾರತೀಯ ಕ್ರಿಕೆಟ್ ತಂಡದ ಆಟಗಾರ ರಿಷಬ್ ಪಂತ್ ಅವರ ಕಾರು ಆಕ್ಸಿಡೆಂಟ್ ಆದ ಸುದ್ದಿ ನಮಗೆಲ್ಲ ಗೊತ್ತೇ ಇದೆ. ರಿಷಬ್ ಅವರು ಈ ಅಪಘಾ#ತದಲ್ಲಿ ಸ್ವಲ್ಪದರಲ್ಲೇ ಜೀವಸಹಿತ ಬಚಾವ್ ಆಗಿದ್ದಾರೆ. ಇದಕ್ಕೆ ಕಾರಣ ಅಲ್ಲಿದ್ದ ಬಸ್ ಚಾಲಕ. ಒಂದು ವೇಳೆ ಸರಿಯಾದ ಸಮಯಕ್ಕೆ ಈ ಬಸ್ ಚಾಲಕ ಘಟನೆಯ ಸ್ಥಳಕ್ಕೆ ತಲುಪದೇ ಇದ್ದರೆ ಇಂದು ರಿಷಬ್ ಅವರ ಗತಿ ಏನಾಗುತ್ತಿತ್ತು ಎಂಬುದು ದೇವರೇ ಬಲ್ಲನು. ಏನೇ ಆಗಲಿ ದೇವರು ಈ ಬಸ್ ಚಾಲಕನ ರೂಪದಲ್ಲಿ ಬಂದು ರಿಷಬ್ ಅವರ ಪ್ರಾಣ ಉಳಿಸಿದ್ದಾನೆ. ಈ ಅನಾಹುತದಲ್ಲಿ ರಿಷಬ್ ಪಂತ್ ಅವರು ಅದ್ಭುತವಾಗಿ ಬದುಕುಳಿದಿದ್ದಾರೆ. ನಿಜಕ್ಕೂ ಅವರ ಅದೃಷ್ಟ ತುಂಬಾ ಚೆನ್ನಾಗಿತ್ತು. ಅವರು ಉಪಯೋಗಿಸುತ್ತಿದ್ದ ಮರ್ಸಿಡಿಸ್ ಕಾರು ಈ ಅಪಘಾತದಲ್ಲಿ ಸುಟ್ಟು ಬೂದಿಯಾಗಿದೆ. ಸದ್ಯ ಅವರ ಮತ್ತು ಶಿಖರ್ ಧವನ್ ರ ಒಂದು ಹಳೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಪ್ರಸಿದ್ಧ ಹಿಂದಿ ನ್ಯೂಸ್ ಚಾನೆಲ್ ಆಜ್ ತಕ್ ನ ಎಡಿಟರ್ ಶುಭಂಕರ್ ಮಿಶ್ರಾ ಅವರು ಶೇರ್ ಮಾಡಿದ್ದಾರೆ. ಅವರು ಶೇರ್ ಮಾಡಿದ ಈ ವಿಡಿಯೋದಲ್ಲಿ ಶಿಖರ ಧವನ್ ಮತ್ತು ರಿಷಬ್ ಪಂತ್ ಇಬ್ಬರು ಕುಳಿತು ಮಾತನಾಡುತ್ತಿದ್ದಾರೆ. ಇಬ್ಬರ ಮೈ ಮೇಲೆ ದೆಹಲಿ ಕ್ಯಾಪಿಟಲ್ಸ್ ತಂಡದ ಜರ್ಸಿ ಕಾಣುತ್ತಿದೆ. ಈ ಚರ್ಚೆಯಲ್ಲಿ ರಿಷಬ್ ಪಂತ್ ಅವರು ಶಿಖರ ಧವನ್ ಗೆ ನೀವು ನನಗೆ ಒಂದು ಅಡ್ವೈಸ್ (ಸಲಹೆ) ನೀಡಲು ಬಯಸಿದರೆ ಯಾವ ಸಲಹೆಯನ್ನು ನೀಡುತ್ತೀರಿ ಎಂದು ಕೇಳುತ್ತಾರೆ. ಅದಕ್ಕೆ ಉತ್ತರವಾಗಿ ಶಿಖರ್ ಧವನ್ ಒಂದು ಕ್ಷಣವೂ ತಡ ಮಾಡದೆ, ಕಾರನ್ನು ನಿಧಾನವಾಗಿ ಚಲಿಸಿ ಎಂದು ಹೇಳುತ್ತಾರೆ.

ನೋಡಿ ಈ ವಿಡಿಯೋ…

ಪ್ರಸ್ತುತ ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಪ್ರಸಿದ್ಧ ಹಿಂದಿ ನ್ಯೂಸ್ ಚಾನೆಲ್ ಆಜ್ ತಕ್ ನ ಎಡಿಟರ್ ಶುಭಂಕರ್ ಮಿಶ್ರಾ ಅವರು ಶೇರ್ ಮಾಡಿದ್ದಾರೆ. ಈ ವಿಡಿಯೋದ ಕ್ಯಾಪ್ಷನ್ನಲ್ಲಿ ‘ದೊಡ್ಡವರ ಮಾತು ಕೇಳಬೇಕು’ ಎಂದು ಬರೆದಿದ್ದಾರೆ.