Video: ಸುತ್ತ ಇದ್ದ ಹುಲ್ಲನ್ನು ಬಿಟ್ಟು ವಿದ್ಯುತ್ ಬೇಲಿ ಬಳಿ ಹುಲ್ಲು ಮೇಯಲು ಹೋದ ಮೇಕೆ: ಶಾಕ್ ತಿಂದು ಕಂಗಲಾಗಿದ್ದು ಹೀಗೆ!
ಕೆಲವು ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ಸಾಕಷ್ಟು ವೈರಲ್ ಆಗಿತ್ತು, ಆ ವಿಡಿಯೋದಲ್ಲಿ ನಾಯಿಯೊಂದು ವಿದ್ಯುತ್ ಹರಿಯುತ್ತಿದ್ದ ತಂತಿಯ ಮೇಲೆ ಮೂತ್ರ ವಿಸರ್ಜನೆ ಮಾಡಲು ಹೋಗಿ ಶಾ ಕ್ ಹೊ ಡೆ ಸಿ ಕೊಂಡು ಅರಚುತ್ತಾ ದೂರ ಓಡಿ ಬಂದು ನೋ ವಿ ನಿಂದ ಹಾಗೂ ಭ ಯ ದಿಂದ ಒದ್ದಾಡಿತ್ತು. ನಾಯಿಯ ಈ ವಿಡಿಯೋ ನೋಡಿ ಅನೇಕ ಮಂದಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದರು. ಮತ್ತೆ ಕೆಲವರು ಆ ನಾಯಿಯ ಪರಿಸ್ಥಿತಿ ನೋಡಿ ಅಯ್ಯೋ ಪಾಪ ಹೀಗಾಗಬಾರದಿತ್ತು ಎಂದುಕೊಂಡಿದ್ದರು. ಆ ಘಟನೆ ಇನ್ನು ಹಸಿರಾಗಿರುವಾಗಲೇ ಈಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಇಂತಹುದೇ ವಿಡಿಯೋ ಒಂದು ಗಮನ ಸೆಳೆಯುತ್ತಿದೆ. ಆದರೆ ಈ ಬಾರಿ ಅದರಲ್ಲಿ ನಾಯಿಯ ಬದಲು ಮತ್ತೊಂದು ಅಮಾಯಕ ಪ್ರಾಣಿ ವಿದ್ಯುತ್ ಶಾ ಕ್ ಹೊ ಡೆ ಸಿ ಕೊಂಡಿದೆ.
ಹಾಗಾದ್ರೆ ಈಬಾರಿ ವಿದ್ಯುತ್ ನಿಂದ ಶಾ ಕ್ ತಿಂದ ಪ್ರಾಣಿ ಯಾವುದು? ಅದಕ್ಕೇನಾದರೂ ತೊಂದರೆ ಆಯಿತಾ? ಎನ್ನುವ ಪ್ರಶ್ನೆ ನಿಮ್ಮನ್ನು ಕಾಡುವ ಮೊದಲೇ ಘಟನೆಯ ಬಗ್ಗೆ ನಾವು ತಿಳಿಸುತ್ತೇವೆ ಕೇಳಿ. ವೈರಲ್ ಆದ ಈ ವೀಡಿಯೋದಲ್ಲಿ ಮೈದಾನದಂತಹ ಪ್ರದೇಶದಲ್ಲಿ ಆ ಜಮೀನಿನ ವಿಸ್ತಾರಕ್ಕನುಗುಣವಾಗಿ ತಂತಿಯ ಬೇಲಿಯನ್ನು ಹಾಕಿಸಿದ್ದಾರೆ ಅದರ ಮಾಲೀಕರು ಅಥವಾ ಸರ್ಕಾರ. ಒಟ್ಟಾರೆ ಬೇಲಿ ಯಂತೂ ಆ ಜಮೀನನ್ನು ಸುತ್ತುವರೆದಿದೆ. ಅಲ್ಲದೇ ಯಾವುದೇ ಪ್ರಾಣಿಗಳು ಆ ಬೇಲಿಯನ್ನು ದಾಟಿ ಒಳಗೆ ಬರದೇ ಇರಲಿ ಎನ್ನುವ ಕಾರಣದಿಂದ ಬೇಲಿಗೆ ಹಾಕಲಾಗಿರುವ ತಂತಿಗಳ ಮೂಲಕ ವಿದ್ಯುತ್ತನ್ನು ಹರಿಯ ಬಿಡಲಾಗಿದೆ..
ಹೀಗೆ ಹಾಕಿರುವ ಬೇಲಿಯ ತಂತಿಗಳಲ್ಲಿ ವಿದ್ಯುತ್ ಹರಿಯುವ ವಿಷಯ ತಿಳಿಯದ ಅಮಾಯಕ ಮೇಕೆಯೊಂದು ತಾನು ಮೇಯುತ್ತಿರುವ ಜಾಗದಲ್ಲೇ ಕುಳಿತುಕೊಂಡು, ಆ ತಂತಿ ಬೇಲಿಯ ಹತ್ತಿರಕ್ಕೆ ಬಂದಿದೆ. ನಂತರ ಮೇಕೆ ಅದೇಕೋ ಅಲ್ಲಿರುವ ಹುಲ್ಲನ್ನೆಲ್ಲಾ ಬಿಟ್ಟು, ಆ ವಿದ್ಯುತ್ ಹರಿಯುತ್ತಿದ್ದ ತಂತಿಯ ಬಳಿ ಇದ್ದ ಹುಲ್ಲನ್ನು ತಿನ್ನಲು ಹಾತೊರೆದಿದೆ. ಹುಲ್ಲಿಗಾಗಿ ಆಸೆ ಪಟ್ಟು ತಂತಿಯ ಬಳಿಗೆ ಯಾವಾಗ ತನ್ನ ಮೂತಿಯನ್ನು ಇಟ್ಟಿತೋ, ದು ರಾ ದೃ ಷ್ಟ ವಶಾತ್ತು ಅದರ ಮೂತಿಗೆ ಆ ತಂತಿ ತಾಗಿದೊಡನೆ ಅದರಲ್ಲಿ ಹರಿಯುತ್ತಿದ್ದ ವಿದ್ಯುತ್ ಮೇಕೆಗೆ ಸರಿಯಾದ ಶಾ ಕ್ ಹೊ ಡೆ ತವನ್ನು ನೀಡಿದೆ. ಶಾ ಕ್ ತಗುಲಿದೊಡನೆ ಕಂಗಾಲಾದ ಮೇಕೆ ಕಿರುಚುತ್ತಾ ಅಲ್ಲಿಂದ ಎದ್ದೂ ಬಿದ್ದು, ಹಿಂದೆ ಮುಂದೆ ನೋಡದೇ ಓಟ ಕಿತ್ತಿದೆ.
ಭ ಯ ದಿಂದ ಓಡುತ್ತಿದ್ದ ಮೇಕೆ ತನ್ನ ಮುಂದೆ ಏನಿದೆ ಎಂಬುದನ್ನು ಗಮನಿಸದೆ ಅಲ್ಲಿದ್ದ ಕಂಬವೊಂದನ್ನು ತನ್ನನ್ನು ಕಟ್ಟಲು ಹಾಕಿದ್ದ ಹಗ್ಗದ ಸಮೇತ ಎಳೆದುಕೊಂಡು, ಅದನ್ನು ಬೀಳಿಸಿಕೊಂಡು ಮುಂದೆ ಓಡಿದೆ. ಆ ಕ್ಷಣದಲ್ಲಿ ಮೇಕೆಗೆ ಆಗಿದ್ದ ಭ ಯ ಹಾಗೂ ಆ ತಂ ಕ ವು ಅದರ ಓಟದಲ್ಲೇ ಗೊತ್ತಾಗಿ ಬಿಡುತ್ತದೆ. ಒಂದು ಕ್ಷಣ ಆ ಅಮಾಯಕ ಪ್ರಾಣಿಯ ಪರಿಸ್ಥಿತಿ ನೋಡಿದಾಗ ಅಯ್ಯೋ ಪಾಪ ಎನಿಸುವುದು ಕೂಡಾ ನಿಜವೇ ಆದರೂ ಎಲ್ಲಾ ಹುಲ್ಲು ಬಿಟ್ಟು ತಂತಿಯ ಬಳಿ ಏಕೆ ಹೋಗಬೇಕಿತ್ತು ಎಂದು ಅನಿಸುತ್ತದೆ. ಈ ವೀಡಿಯೋ ಯೂಟ್ಯೂಬ್ ನಲ್ಲಿ ಭರ್ಜರಿ ವೈರಲ್ ಆಗಿದ್ದು ಇದನ್ನು ಇದುವರೆಗೂ ಸುಮಾರು 79 ಲಕ್ಷ ಜನರು ನೋಡಿದ್ದಾರೆ. ವೀಡಿಯೋ ನೋಡಿದವರಲ್ಲಿ ಸಾವಿರಾರು ಜನ ಪ್ರತಿಕ್ರಿಯೆಗಳನ್ನು ಕೂಡಾ ನೀಡಿದ್ದಾರೆ.
ವಿಡಿಯೋ ನೋಡಿ
ಒಬ್ಬರು ಪ್ರತಿಕ್ರಿಯೆ ನೀಡುತ್ತಾ ಬಹುಶಃ ಶಾ ಕ್ ಹೊಡೆಯುವ ಅನುಮಾನ ಆ ಮೇಕೆಗೆ ಇತ್ತು ಎನಿಸುತ್ತದೆ, ಅದಕ್ಕೆ ಅದು ತಂತಿಯ ಬಳಿಗೆ ಬಹಳ ಎಚ್ಚರಿಕೆಯಿಂದ ಹೋಗಿದೆ ಗಮನಿಸಿ ಎಂದಿದ್ದಾರೆ. ಮತ್ತೊಬ್ಬರು ಆ ಮೇಕೆಯ ಪಾಡನ್ನು ನೋಡಿ ನಕ್ಕವರೆಲ್ಲರೂ ಕೂಡಾ ನ ರ ಕಕ್ಕೆ ಹೋಗುವಿರಿ ಎಂದು ಕೋ ಪ ದಿಂದ ರಿಪ್ಲೈ ನೀಡಿದ್ದಾರೆ. ಇನ್ನೊಬ್ಬರು ಹಾಸ್ಯ ಮಾಡುತ್ತಾ ನಾಯಿಯಂತೆ ಇದು ಕೂಡಾ ಮೂತ್ರ ವಿಸರ್ಜನೆ ಮಾಡಿದ್ದರೆ ಏನಾಗುತ್ತಿತ್ತೋ? ಎಂದಿದ್ದಾರೆ. ಹೀಗೆ ವೀಡಿಯೋ ನೋಡಿದ ಮಂದಿ ವೈವಿದ್ಯಮಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.