Video: ಹುಲಿಗಳ ಮುಂದೆ ಬಂದು ನಿಂತ ಬೇಟೆ ನಾಯಿ; ಮುಂದೆ ನಡೆದ ಸನ್ನಿವೇಶ ಅಬ್ಬಾ ಸಖತ್ ಇಂಟರೆಸ್ಟಿಂಗ್ ಆಯ್ತು!

ಎಂದಾದರೂ ಒಂದು ಬೇ ಟೆ ನಾಯಿಯು ಹುಲಿಯು ಮುಂದೆ ಬಂದಿರುವುದನ್ನು ನೀವು ನೋಡಿರುವಿರಾ? ಅಥವಾ ಅಂತಹುದೊಂದು ಸನ್ನಿವೇಶವನ್ನು ಊಹೆ ಮಾಡಿರುಕೊಂಡಿರುವಿರಾ? ಆದರೆ ಕಾಡಿನಲ್ಲಿ ಯಾವಾಗ ಏನು ಬೇಕಾದರೂ ನಡೆಯಬಹುದು. ಅರಣ್ಯದಲ್ಲಿ ವನ್ಯ ಜೀವಿಗಳ ಜೀವನವೇ ಒಂದು ದೊಡ್ಡ ಸವಾಲು, ಅವು ಯಾವಾಗ, ಎಲ್ಲಿ ಹಾಗೂ ಹೇಗೆ ಅ ಪಾ ಯಕ್ಕೆ ಸಿಲುಕಬಹುದು ಎನ್ನುವುದನ್ನು ಯಾರಿಂದಲೂ ಕೂಡಾ ಊಹೆ ಮಾಡಲೂ ಸಾಧ್ಯವಿರುವುದಿಲ್ಲ ಎನ್ನಬಹುದು. ಹುಲಿ ಸಾಮಾನ್ಯವಾಗಿಯೇ ಗಾತ್ರದಲ್ಲಿ ಬೇಟೆ ನಾಯಿಗಿಂತ ಎರಡು ಮೂರು ಪಟ್ಟು ದೊಡ್ಡದಾಗಿರುತ್ತದೆ ಮತ್ತು ಅದನ್ನು ಎದುರಿಸುವ ಸಾಮಾರ್ಥ್ಯವನ್ನು ಕೂಡಾ ಪಡೆದಿರುತ್ತದೆ ಎಂಬುದು ಕೂಡಾ ನಮಗೆಲ್ಲಾ ತಿಳಿದೇ ಇದೆ.

ಆದರೆ ಕಾಡಿನ ನಿಯಮಗಳು ಯಾವಾಗ ಹೇಗೆ ಬದಲಾಗಬಹುದು ಎಂಬುದನ್ನು ಕೂಡಾ ನಾವು ಊಹೆ ಮಾಡುವುದು ಅಸಾಧ್ಯ. ಏಕೆಂದರೆ ಗಾತ್ರದಲ್ಲಿ ಬೇಟೆ ನಾಯಿಗಿಂತ ದೊಡ್ಡದಾಗಿರುವ, ಬೇರೆ ಪ್ರಾಣಿಗಳ ಎದೆಯಲ್ಲಿ ನಡುಕ ಹುಟ್ಟಿಸುವ ಸಾಮರ್ಥ್ಯವನ್ನು ಕೂಡಾ ಹೊಂದಿರುವ ಸಿಂಹ ಕೂಡಾ ಎಲ್ಲರ ಊಹೆಗಳನ್ನು ಅಥವಾ ನಿರೀಕ್ಷೆಗಳನ್ನು ತಲೆ ಕೆಳಗೆ ಮಾಡಿ ಒಂದು ಸಣ್ಣ ಪ್ರಾಣಿಯನ್ನು ನೋಡಿ ಭಯದಿಂದ ಓಡಿ ಹೋಗಬಹುದು. ಮನುಷ್ಯರಿಗೆ ಕಾಡಿನ ಜಗತ್ತಿನ ಪರಿಚಯ ಹೆಚ್ಚಾಗಿಲ್ಲ, ಕಾಡಿನ ನಿಯಮಗಳ ಪರಿಚಯವೂ ಇಲ್ಲ, ಅಲ್ಲಿ ಪ್ರಾಣಿಗಳ ನಡುವೆ ನಡೆಯುವ ಆಟಗಳ ಸ್ವರೂಪ ಕೂಡಾ ಹೇಗಿರುತ್ತದೆ ಎಂಬುದನ್ನು ತಿಳಿಯಬೇಕಾದರೆ ಸಾಕಷ್ಟು ಅಧ್ಯಯನ ಕೂಡಾ ನಡೆಸಬೇಕು.

ಈಗ ಅಂತಹುದೇ ಒಂದು ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಒಂದು ಬೇಟೆ ನಾಯಿ ಏಕ ಕಾಲದಲ್ಲಿ ಎರಡು ಹುಲಿಗಳ ಕಡೆ ನೋಡುತ್ತಲೇ ಬೊಗಳುತ್ತಾ ಅವುಗಳನ್ನು ಬೆದರಿಸುವ ಅಥವಾ ತನ್ನ ಭ ಯ ವನ್ನು ವ್ಯಕ್ತಪಡಿಸುತ್ತಿದೆಯೋ ಒಟ್ಟಾರೆ ವೀಡಿಯೋ ಮಾತ್ರ ಭರ್ಜರಿ ವೈರಲ್ ಆಗಿದೆ.
ವೈಲ್ಡ್ ಲೈನ್ ಇಂಡಿಯಾ ಇಂತಹುದೊಂದು ವಿಶೇಷವಾದ ವೀಡಿಯೊವನ್ನು ಹಂಚಿಕೊಂಡಿದ್ದು, ಈ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು ತಾಡೋಬಾ ಅಂಧಾರಿ ರಾಷ್ಟ್ರೀಯ ಉದ್ಯಾನ ಎನ್ನಲಾಗಿದೆ. ಈ ಘಟನೆಯಲ್ಲಿ ಎರಡು ಹುಲಿಗಳು ಬೇ ಟೆ ನಾಯಿಯನ್ನು ನೋಡುತ್ತಾ ಘರ್ಜನೆ ಮಾಡಿದೆ.

ಈ ಎರಡರಲ್ಲಿ ಒಂದು ಹುಲಿಯ ಹೆಸರು ಸೋನಮ್ ಎಂದು ಕರೆಯಲಾಗಿದೆ. ಇನ್ನು ಈ ವೀಡಿಯೋವನ್ನು ಬರ್ಷಾ ಚೌಧರಿ ಅವರು ರೆಕಾರ್ಡ್ ಮಾಡಿದ್ದಾರೆ. ವೀಡಿಯೋದಲ್ಲಿ ನೋಡಿದಾಗ ಎರಡು ಹುಲಿಗಳು ಕೂಡಾ ನಾಯಿಯ ಕಡೆ ದುರು ದುರು ನೋಡುತ್ತಾ ಇವೆ‌. ಆದರೆ ನಾಯಿಯೋ ಅವುಗಳನ್ನು ಈ ಕಡೆ ಬರಬೇಡಿ ಎಂದು ವಾರ್ನಿಂಗ್ ನೀಡುವ ಹಾಗೆ ಅವುಗಳ ಕಡೆ ನೋಡುತ್ತಾ ಬೊಗಳುತ್ತಾ ಸಾಗಿದ್ದು, ವೀಡಿಯೋ ಮಾಡುತ್ತಿರುವವರ ಧ್ವನಿ ಕೂಡಾ ಈ ವೀಡಿಯೋದಲ್ಲಿ ಕೇಳಿಸುತ್ತಿರುವುದನ್ನು ನಾವು ಗಮನಿಸಬಹುದಾಗಿದೆ.

ವಿಡಿಯೋ ನೋಡಿ.

ಇದೊಂದು ಹಳೆಯ ವೀಡಿಯೋ ಆಗಿದೆ. ಆದರೆ ಅದು ಈಗ ಮತ್ತೊಂದು ಬಾರಿ ಈ ವೀಡಿಯೋ ವೈರಲ್ ಆಗಿದೆ. ಇಲ್ಲಿ ನೋಡಿದಾಗ ತಿಳಿಯುವುದು ಏನೆಂದರೆ ಪ್ರಾಣಿಗಳು ಅನಾವಶ್ಯಕವಾಗಿ ಒಂದನ್ನೊಂದು ಕೊ ಲ್ಲ ಲು ಮುಂದಾಗುವುದಿಲ್ಲ ಎನ್ನುವಂತೆ ಇದೆ. ಅಲ್ಲದೇ ಅದೇ ಸಮಯದಲ್ಲಿ ಪ್ರಾಣಿಗಳು ತಮ್ಮ ಸ್ಥಳಕ್ಕೆ ಆಗಂತುಕರ ಆಗಮನವನ್ನು ಕೂಡಾ ಸಹಿಸುವುದಿಲ್ಲ ಎನ್ನುವಂತೆ ನಾಯಿಯು ಹುಲಿಗಳನ್ನು ಎದುರಿಸುತ್ತಿರುವುದು ಕಂಡಿದೆ. ವೀಡಿಯೋ ನೋಡಿದವರು ಕೂಡಾ ಹುಲಿಗಳ ವರ್ತನೆ ಹಾಗೂ ನಾಯಿಯ ವರ್ತನೆ ಎರಡನ್ನೂ ಕೂಡಾ ಮೆಚ್ಚಿ ಟ್ವೀಟ್ ಗಳನ್ನು ಮಾಡಿದ್ದಾರೆ.