Video: 16 ವರ್ಷ ವಯಸ್ಸಿನಲ್ಲಿ ಸೋನು ನಿಗಮ್ ಹಾಡಿದ ಮಹಾಭಾರತದ ಟೈಟಲ್ ಸಾಂಗ್ 31 ವರ್ಷದ ನಂತರ ಈಗ ವೈರಲ್ ಆಗುತ್ತಿದೆ!
ಜಗತ್ತಿನ ತುಂಬೆಲ್ಲಾ ಇಂದು ಕೋರೊನಾ ವೈರಸ್ ತನ್ನ ಹಾಹಾಕಾರ ಎಬ್ಬಿಸಿದೆ. ಆದುದರಿಂದ ಅನೇಕ ದೇಶಗಳಲ್ಲಿ ಲಾಕ್ಡೌನ್ ನಂತಹ ಅನೇಕ ಉಪಕ್ರಮಗಳನ್ನು ಜಾರಿಯಲ್ಲಿ ತಂದಿದೆ. ಭಾರತದಲ್ಲಿಯೂ ಸಹ ಲಾಕ್ಡೌನ್ ಜಾರಿಯಲ್ಲಿ ಇದ್ದುದರಿಂದ ಅನೇಕ ಸೆಲೆಬ್ರಿಟಿಗಳು ತಮ್ಮ ಹಳೆಯ ನೆನೆಪುಗಳ ಮೆಲಕು ಹಾಕುತ್ತಿದ್ದಾರೆ ಅಂದರೆ ಹಳೆಯ ನೆನಪುಗಳು ತಾಜಾ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಆ ನೇನೆಪುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದರ ನಡುವೆ ನಮ್ಮ ದೇಶದ ಸುಪ್ರಸಿದ್ಧ ಗಾಯಕರಾದ ಸೋನು ನಿಗಮ ಸಹ ತಮ್ಮ ಒಂದು ಹಳೆಯ ವಿಡಿಯೋ ವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋ ಈಗ ತುಂಬಾ ವೈರಲ್ ಆಗುತ್ತಿದೆ ಅಲ್ಲದೆ ಫ್ಯಾನ್ಸ್ ಗಳಿಂದ ಒಳ್ಳೆಯ ಮೆಚ್ಚುಗೆ ಸಿಗುತ್ತಿದೆ.
ಈ ವಿಡಿಯೋ ಸುಮಾರು 31 ವರ್ಷಗಳ ಹಿಂದಿನದಿದೆ. ಅಂದರೆ ಈ ವಿಡಿಯೋದಲ್ಲಿ ಸೋನು ನಿಗಮ ಅವರು ತಮ್ಮ 16 ನೇ ವಯಸ್ಸಿನಲ್ಲಿ ಹಾಡಿರುವ ನೆನಪು ಇದೆ. ಈ ವಿಡಿಯೋ 1989 ರಲ್ಲಿ ರೆಕಾರ್ಡ್ ಮಾಡಲಾಗಿದೆ. ಸೋನು ನಿಗಮ ಅವರು ಆಧಾರಶೀಲ ಅವಾರ್ಡ್ ಫಂಕ್ಷನ್ ನಲ್ಲಿ ಮಹಾಭಾರತ ಸೀರಿಯಲ್ ದ ಟೈಟಲ್ ಸಾಂಗ್ ಹಾಡಿದ್ದಾರೆ.
ಈ ವಿಡಿಯೋ ಶೇರ್ ಮಾಡುತ್ತಾ ಸೋನು ನಿಗಮ ಹೀಗೆ ಬರೆದಿದ್ದಾರೆ, ‘ತಾಲಕಟೋರಾ ಇಂದೋರ್ ಸ್ಟೇಡಿಯಂನಲ್ಲಿ ಹಾಡಿರುವ ವಿಡಿಯೋ ಆಗಿದೆ. ಅಲ್ಲಿ ನಾನು ಮಹಾಭಾರತ ದ ಶೀರ್ಷಿಕೆ ಹಾಡನ್ನು ಹಾಡಿದ್ದೆ. ಅದನ್ನು ನಾನು ಇಂದು ನೆನೆಪಿಸುತ್ತ ಈ ವಿಡಿಯೋ ಶೇರ್ ಮಾಡಿದೆ. ಅಂದಿನ ಕಾಲದಲ್ಲಿ ನಮ್ಮ ಹತ್ತಿರ ಯೂಟ್ಯೂಬ್ ನಂತಹ ಯಾವುದೇ ಸ್ಟ್ರೀಮಿಂಗ್ ಪ್ಲೇಟ್ ಫಾರ್ಮ್ ಇದ್ದಿದಿಲ್ಲ”. ಎಂದು ಬರೆದಿದ್ದಾರೆ.