Video; 65 ರ ಮುದುಕನ 25 ರ ಯುವತಿಯ ಜೊತೆ ಮದುವೆ. ನವವಧು ಕ್ಯಾಮೆರಾಗೆ ನೀಡಿದ ಪ್ರತಿಕ್ರಿಯೆ ಹೀಗಿತ್ತು…

ಭಾರತದಲ್ಲಿ ಎಲ್ಲೆಡೆಯೂ ಸದ್ಯ ಮದುವೆಯ ಸೀಸನ್ ಜೋರಾಗಿ ನಡೆಯುತ್ತಿದೆ. ದಿನನಿತ್ಯ ಲಕ್ಷಾವಧಿ ಜೋಡಿಗಳು ಮದುವೆಯ ಬಂಧನದಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಹೀಗಾಗಿ ಸೋಶಿಯಲ್ ಮೀಡಿಯಾ ಓಪನ್ ಮಾಡುತ್ತಲೇ ಮದುವೆಯ ಸಂಬಂಧದ ಅನೇಕ ವಿಡಿಯೋಗಳು ಫೋಟೋಗಳು ಮತ್ತು ಸುದ್ದಿಗಳು ಕಣ್ಣೆದುರು ಬರುತ್ತವೆ. ಹಾಗೂ ಮದುವೆಯಲ್ಲಿ ನಡೆದ ರೋಚಕ ಪ್ರಸಂಗಗಳ ಸುದ್ದಿಗಳು ವೈರಲ್ ಆಗೆ ಆಗುತ್ತಿವೆ. ಈಗ ಮದುವೆಯಲ್ಲಿ ನಡೆದ ಸ್ವಲ್ಪ ಬೇರೆಯಾದ ದೃಶ್ಯ ಸೋಶಿಯಲ್ ಮೀಡಿಯಾದ ಟ್ರೆಂಡಿಂಗ್ ನಲ್ಲಿದೆ. ಈ ವಿಡಿಯೋ ನೋಡಿದವರೆಲ್ಲರೂ ಹುಬ್ಬೇರಿಸುತ್ತಿದ್ದಾರೆ.

ಈ ವಿಡಿಯೋದಲ್ಲಿ ಕಂಡುಬರುವ ಮದುಮಗ ಏನಿಲ್ಲವೆಂದರೂ 60 ರಿಂದ 65 ವಯಸ್ಸಿನವರಾಗಿದ್ದರೆ ವಧು ಆತನ ವಯಸ್ಸಿನ ಅರ್ಧಕ್ಕಿಂತಲೂ ಕಡಿಮೆ ವಯಸ್ಸಿನವರಾಗಿದ್ದಾಳೆ. ಮದುಮಕ್ಕಳಿಬ್ಬರ ಈ ವಿಡಿಯೋ ನೋಡಿದ ನಂತರ ನೇಟಿಜನ್ಸ್ ಗಳಿಗೆ ತಮ್ಮ ಕಣ್ಣುಗಳ ಮೇಲೆ ವಿಶ್ವಾಸವೇ ಕೂಡುತ್ತಿಲ್ಲ.

ವಿಡಿಯೋದಲ್ಲಿ ಕಂಡುಬರುವ ಹಾಗೆ ವೃದ್ಧ ವ್ಯಕ್ತಿ ಮದುವೆಯ ಉಡುಪಿನಲ್ಲಿ ಕಂಡು ಬರುತ್ತಿದ್ದಾನೆ. ವಧು ಮಾತ್ರ ಆತನ ಬದಿಯಲ್ಲಿ ಸಪ್ಪೆ ಮೋರೆ ಹಾಕಿ ಕುಳಿತಿರುವ ದೃಶ್ಯ ಕಂಡು ಬರುತ್ತಿದೆ.

ವಿಡಿಯೋದಲ್ಲಿ ಮದುವೆಯ ವಿಧಿವಿಧಾನಗಳು ಮುಗಿಸಿದನಂತರ ಮದುಮಕ್ಕಳು ಸ್ಟೇಜ್ ಮೇಲೆ ಕುಳಿತಿರುವ ಹಾಗೆ ಕಂಡುಬರುತ್ತಿದೆ. ಇಬ್ಬರ ವಯಸ್ಸಿನಲ್ಲಿ ಸುಮಾರು ನಲವತ್ತು ವರ್ಷಗಳ ಅಂತರವಿರುವುದು ಗೋಚರಿಸುತ್ತಿದೆ.

ವಿಡಿಯೋ ಶೂಟ್ ಮಾಡುತ್ತಿರುವ ಕ್ಯಾಮೆರಾಮೆನ್ ಯಾವಾಗ ಈ ಜೋಡಿಯ ಕಡೆಗೆ ತನ್ನ ಕ್ಯಾಮೆರಾ ತಿರುಗಿಸುತ್ತಾನೆ, ಆಗ ನವವಧು ನಾಚಿಕೆಯಿಂದ ಕುಳಿತವಳು ಎದ್ದು ತನ್ನ ಮುಖವನ್ನು ಸೀರೆಯ ಸೆರಗಿನಿಂದ ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಾಳೆ. ನಂತರ ತನ್ನ ಮುಖದ ಮೇಲಿನ ಸೆರಗನ್ನು ಬದಿಗೆ ಸರಿಸಿ ನಗಲು ಯತ್ನಿಸಿದ್ದಾಳೆ.

ಸೋಶಿಯಲ್ ಮೀಡಿಯಾದಲ್ಲಿ ಈ ಅಪರೂಪದ ವಿಡಿಯೋ ವೈರಲ್ ಆಗುತ್ತಲೇ ನೇಟಿಜನ್ಸ್ ಗಳು ತಮ್ಮ ಪ್ರತಿಕ್ರಿಯೆಗಳ ಮಳೆಯನ್ನೇ ಹರಿಸುತ್ತಿದ್ದಾರೆ. ತಮ್ಮ ಕಮೆಂಟ್ಸ್ ಗಳಲ್ಲಿ ಅನೇಕ ಯುವಕರು, ಇಲ್ಲಿ ನಮಗೆ ನಮ್ಮ ವಯಸ್ಸಿನ ಹುಡುಗಿಯರು ಸಿಗುತ್ತಿಲ್ಲ ಈ ಮುದುಕ ಮಾತ್ರ ತನ್ನ ವಯಸ್ಸಿನ ಅರ್ಧಕ್ಕಿಂತಲೂ ಕಡಿಮೆ ಇರುವ ಹುಡುಗಿಯನ್ನು ಅದ್ಹೇಗೆ ಪಟಾಯಿಸಿದ್ದಾನೆ ಎಂದು ಪ್ರಶ್ನೆಗಳನ್ನು ಕೇಳುತ್ತಿದ್ದರೆ, ಇನ್ನು ಕೆಲವರು ಹಣಕ್ಕಾಗಿ ಈ ಮದುವೆ ನಡೆಯುತ್ತಿದೆ ಎಂದು ತಮ್ಮ ಪ್ರತಿಕ್ರಿಯೆ ವ್ಯಕ್ತ ಮಾಡಿದ್ದಾರೆ.

ವಿಡಿಯೋ ನೋಡಿ

 

View this post on Instagram

 

A post shared by Bhutni_ke (@bhutni_ke_memes)

ಪ್ರಸ್ತುತ ವಿಡಿಯೋ ನಿರ್ದಿಷ್ಟವಾಗಿ ಎಲ್ಲಿಯದು ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಆದರೆ ಈ ವಿಡಿಯೋ ಅನೇಕ ಯುವಕರ ಹೃದಯವನ್ನು ಮಾತ್ರ ನಾಟಿದೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ.