Video; 70 ಹಣ್ಣಾದ ಹರೆಯದಲ್ಲೂ 17 ರ ಚಿಗುರುವ ಹುಡುಗಿಯರಿಗೆ ನಾಚಿಸುವಂಥ ಸುಂದರ ಡಾನ್ಸ್ ಮಾಡಿದ ಅಜ್ಜಿ!
ಮನುಷ್ಯನಲ್ಲಿ ಕಲೆ ಇದ್ದರೆ ಅದನ್ನು ಮುಚ್ಚಿಡಲು ಸಾಧ್ಯವಿಲ್ಲ. ವ್ಯಕ್ತಿಯಲ್ಲಿ ಕಲೆ ಇದ್ದರೆ ಅದು ಹೇಗಾದರೂ ಮಾಡಿ ಸಮಾಜದ ಮುಂದೆ ಬಂದೇ ಬರುತ್ತದೆ. ಅದರಲ್ಲೂ ಸೋಷಿಯಲ್ ಮೀಡಿಯಾದ ಇಂದಿನ ಜಗತ್ತಿನಲ್ಲಿ ತಮ್ಮ ಕಲೆಗಳನ್ನು ಪ್ರದರ್ಶಿಸಲು ಅನೇಕ ಪ್ಲಾಟ್ಫಾರ್ಮ್ ಗಳು ಅಸ್ತಿತ್ವದಲ್ಲಿವೆ. ಹೀಗಾಗಿ ಎಲ್ಲ ವಯಸ್ಸಿನವರು ತಮ್ಮಲ್ಲಿರುವ ಕ್ರಿಯೇಟಿವಿಟಿ, ಕಲೆ ಮತ್ತು ಪರ್ಫಾರ್ಮನ್ಸ್ ಸೋಶಿಯಲ್ ಮೀಡಿಯಾಗಳ ಮುಖಾಂತರ ಜಗತ್ತಿನ ಮುಂದೆ ಪ್ರದರ್ಶಿಸಲು ಸಾಧ್ಯವಾಗಿದೆ. ಸದ್ಯ ಇಳಿವಯಸ್ಸಿನ ಸಣಕಲು ದೇಹದ ಅಜ್ಜಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅದ್ಭುತ ಹಾಗೂ ಭರ್ಜರಿಯಾದ ನೃತ್ಯದಿಂದ ಅಚ್ಚರಿಯನ್ನುಂಟು ಮಾಡಿದ್ದಾರೆ. ಅಜ್ಜಿ ಮಾಡಿದ ಈ ಡಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ನಿಜಕ್ಕೂ ಸುಂಟರಗಾಳಿಯಂತೆ ಸಂಚಲನ ಮೂಡಿಸಿದೆ.
1 ನಿಮಿಷ 24 ಸೆಕೆಂಡುಗಳ ಈ ವಿಡಿಯೋದಲ್ಲಿ ಅಜ್ಜಿಯು ಪಿಂಕ್ ಬಣ್ಣದ ಸೀರೆಯನ್ನು ತೊಟ್ಟು ತಾಳಬದ್ಧವಾಗಿ ನೃತ್ಯವನ್ನು ಸಾದರ ಪಡಿಸುತ್ತಿರುವದನ್ನು ನೋಡಿದರೆ ಅಜ್ಜಿ ಪ್ರೊಫೆಷನಲ್ ಡ್ಯಾನ್ಸರ್ ಇರುವ ಹಾಗೆ ಕಂಡುಬರುತ್ತದೆ. ಡಾನ್ಸ್ ಮಾಡುವಾಗ ಅವರ ಮುಖದ ಮೇಲೆ ಕಂಡುಬರುವ ಎಕ್ಸ್ಪ್ರೆಶನ್ ನಿಜಕ್ಕೂ ಪ್ರಶಂಸೆಗೆ ಪಾತ್ರವಾಗಿದೆ. ಕುಣಿತದ ಮಧ್ಯದಲ್ಲಿ ಭಾರತೀಯ ನೃತ್ಯಕಲೆಯಾದ ಭರತನಾಟ್ಯದ ಒಂದು ತುಣುಕು ತುಂಬಾ ಸುಂದರವಾಗಿ ಪ್ರದರ್ಶಿಸಿದ್ದಾರೆ. ಮ್ಯೂಸಿಕ್ ಗೆ ತಕ್ಕಂತೆ ತಮ್ಮ ಸ್ಟೇಪ್ ಗಳಲ್ಲಿ ತುಂಬಾ ಸರಿಯಾಗಿ ಮೂವ್ಮೆಂಟ್ ಮಾಡಿದ್ದಾರೆ. ಅಜ್ಜಿಯವರನ್ನು ನೋಡಿದರೆ ಅವರ ವಯಸ್ಸು ಸುಮಾರು 70 ಮೀರಿರಬಹುದೆಂದು ತಿಳಿದುಬರುತ್ತದೆ. ಈ ವಯಸ್ಸಿನಲ್ಲಿ ಅಜ್ಜಿಯು ಈ ರೀತಿಯ ಡ್ಯಾನ್ಸ್ ಮಾಡುತ್ತೀರಬೇಕಾದರೆ ನಿಜಕ್ಕೂ ಅಚ್ಚರಿಪಡುವಂತಹ ವಿಷಯವೇ. ಚಲನಚಿತ್ರದಲ್ಲಿ ನಟಿಸುವ ಹಳೆಯ ನಟಿಯರೇನಾದರೂ ಈ ಅಜ್ಜಿಯ ತರ ಡಾನ್ಸ್ ಮಾಡಬಹುದೇ? ಎಂಬ ಪ್ರಶ್ನೆ ಹುಟ್ಟುವುದು ಸಹಜ. ಅಜ್ಜಿಯ ಈ ತೂಫಾನ್ ಡ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ನೇಟಿಜನ್ಸ್ ಗಳಿಗೆ ಭರ್ಜರಿಯಾಗಿ ಇಷ್ಟವಾಗಿದೆ.
ವಿಡಿಯೋ ನೋಡಿ
ಅಜ್ಜಿ ಮಾಡಿದ ಈ ಸುಂದರವಾದ ಡ್ಯಾನ್ಸ್ ಯೂಟ್ಯೂಬ್ ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಯೂಟ್ಯೂಬ್ನಲ್ಲಿ ಇಲ್ಲಿಯವರೆಗೆ 8 ಲಕ್ಷಕ್ಕೂ ಮೇಲ್ಪಟ್ಟು ಜನರು ನೋಡಿದ್ದಾರೆ. ಹಾಗೂ ಸಾವಿರಾರು ಸಂಖ್ಯೆಯಲ್ಲಿ ಅಜ್ಜಿಯ ಈ ನೃತ್ಯಕ್ಕೆ ಲೈಕ್ ಗಳು ಬಂದಿವೆ.