Video; ಇದು ಕಣ್ರೀ ಸ್ವಾಮಿ ನಿಷ್ಠೆ! ಒಡೆಯನಿಗೆ ಏಟು ಹಾಕುವವನನ್ನು ನೋಡಿ ಚಚ್ಚಿ ಹಾಕಲು ಓಡಿ ಬಂತು ರೈತನ ಮಿತ್ರ…
ಸ್ವಾಮಿ ನಿಷ್ಠೆಗೆ ಮನುಷ್ಯನನ್ನು ಬಿಟ್ಟು ಬೇರೆ ಪ್ರಾಣಿಗಳು ಯಾವತ್ತೂ ಶ್ರೇಷ್ಠವಾಗಿವೆ ಎಂದರೆ ತಪ್ಪಾಗುವುದಿಲ್ಲ. ಕಾರಣ ಒಮ್ಮೆ ತಮ್ಮ ಒಡೆಯನನ್ನು ನಂಬಿದರೆ ಈ ಪ್ರಾಣಿಗಳು ಎಂದಿಗೂ ತಮ್ಮ ಒಡೆಯನ ಕೈ ಎಂಥ ಪರಿಸ್ಥಿತಿಯಲ್ಲೂ ಕೈ ಬಿಡುವುದಿಲ್ಲ. ಉದಾಹರಣೆಗೆ ಈ ವೀಡಿಯೋವನ್ನೇ ನೋಡಿ. ಈ ವಿಡಿಯೋದಲ್ಲಿ ರೈತನ ಮಿತ್ರನಾದ ಎತ್ತು ತನ್ನ ಒಡೆಯನ ಮೇಲಿಟ್ಟಿದ್ದ ಪ್ರೀತಿಯನ್ನು ತೋರಿಸಿದೆ. ನೋಡಿ ಹೇಗೆ ಅಂತ?
ಪ್ರಸ್ತುತ ವಿಡಿಯೋದಲ್ಲಿ ಎತ್ತುಗಳ ಕಡೆಗೆ ಮುಖ ಮಾಡಿ ಒಬ್ಬ ಯುವಕ ನಿಂತಿದ್ದಾನೆ. ಆತನಿಗೆ ಹಿಂದಿನಿಂದ ಬಂದ ಇನ್ನೊಬ್ಬ ಯುವಕ ಹೊಡೆಯುತ್ತಿರುವ ಹಾಗೆ ಬರೀ ಆಕ್ಷನ್ ಮಾಡುತ್ತಾನೆ. ಎದುರಿಗೆ ಇದ್ದ ದನಗಳ ಗುಂಪಿನಿಂದ ಒಂದು ಎತ್ತು ತನ್ನ ಮಾಲೀಕನಿಗೆ ಯಾರೋ ಏಟು ಹಾಕುತ್ತಿದ್ದಾರೆ ಎಂದು ತಿಳಿದು ಏಟು ಹಾಕುವ ವ್ಯಕ್ತಿಗೆ ಮಟಾಷ್ ಮಾಡಲು ಓಡೋಡಿ ಬರುತ್ತದೆ ಎತ್ತು. ಈ ದೃಶ್ಯ ಮೂಕ ಪ್ರಾಣಿಗಳಲ್ಲಿ ತಮ್ಮ ಮಾಲೀಕನ ಪ್ರತಿ ಇರುವ ಪ್ರೀತಿ ಮತ್ತು ವಿಶೇಷವಾಗಿ ಕಾಳಜಿಯನ್ನು ಎತ್ತಿ ತೋರಿಸುತ್ತದೆ.
ವಿಡಿಯೋ ನೋಡಿ
View this post on Instagram
ಈ ಸುಂದರವಾದ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ ಭರ್ಜರಿಯಾಗಿ 55.7 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ. ಹಾಗೂ 2.7 ಮಿಲಿಯನ್ ಜನರು ಲೈಕ್ ಮಾಡಿದ್ದಾರೆ.