Video; ಅಯ್ಯೋ ಶಿವಾ, ಪ್ರೀತಿಯಲ್ಲಿ ಏನೇನು ಮಾಡಬೇಕಾಗುತ್ತೆ? ಪ್ರೇಯಸಿಯ ತಲೆಯಲ್ಲಿಯ ಹೇನು ತೆಗೆಯಬೇಕಾ?

ಸೋಶಿಯಲ್ ಮೀಡಿಯಾದ ಜಗತ್ತಿನಲ್ಲಿ ಪ್ರೇಮಿಗಳ ವಿಡಿಯೋ ಒಂದು ಭರ್ಜರಿಯಾಗಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡುಗರಿಗೆ ತುಂಬಾ ತಮಾಷೆಯಾಗಿ ಕಂಡು ಬರುತ್ತಿದೆ. ಕಾರಣ ವಿಡಿಯೋದಲ್ಲಿ ಕಂಡು ಬರುವ ದೃಶ್ಯವೇ ಹಾಗಿದೆ. ಈ ವಿಡಿಯೋದಲ್ಲಿಯ ದೃಶ್ಯವು ಸುಂದರವಾದ ನದಿಯ ದಡದಲ್ಲಿ ಕುಳಿತ ಪ್ರೇಮಿಗಳದ್ದಾಗಿದೆ. ಆದರೆ ಇಂಥ ಸುಮಧುರವಾದ ಘಳಿಗೆಯಲ್ಲಿ ಪ್ರೇಮಿಗಳು ಏಕಾಂತದಲ್ಲಿ ಕುಳಿತು ಮಾಡುತ್ತಿರುವ ಕೆಲಸವನ್ನು ನೋಡಿದರೆ ಯೂಸರ್ಸ್ಗಳಿಗೆ ನಗು ತಡೆಯುವುದು ಅಸಾಧ್ಯವಾಗುತ್ತಿದೆ. ಈ ತಮಾಷೆಯ ವಿಡಿಯೋ ಕೆಲವೇ ಗಂಟೆಗಳಲ್ಲಿ ಲಕ್ಷಾವಧಿ ವೀಕ್ಷಣೆಯನ್ನು ಪಡೆದಿದೆ. ಸದ್ಯಕ್ಕೆ ಈ ವಿಡಿಯೋಗೆ ಇಲ್ಲಿಯವರೆಗೆ ಎರಡು ಲಕ್ಷಕ್ಕೂ ಮೇಲ್ಪಟ್ಟು ಲೈಕ್ಸ್ ಗಳು ಬಂದಿದೆ. ಅಂತದ್ದೇನು ಅಡಗಿದೆ ಈ ವಿಡಿಯೋದಲ್ಲಿ ಅಂತೀರಾ ಬನ್ನಿ ನೋಡೋಣ ಗೊತ್ತಾಗುತ್ತದೆ.

ನದಿಯ ದಡ ಎಂದರೆ ಪ್ರೇಮಿಗಳಿಗೆ ಮೊದಲಿನಿಂದಲೂ ಸ್ವರ್ಗಸಮಾನಸ್ಥಳವಿದ್ದಂತೆ. ಇಂತಹ ನಿಸರ್ಗದ ಮಡಿಲಲ್ಲಿ ಪ್ರೇಮಿಗಳು ಕುಳಿತು ಮುಕ್ತವಾಗಿ ತಮ್ಮ ವಿಚಾರಗಳನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳಲು ಇಷ್ಟಪಡುತ್ತಾರೆ. ಆದರಿಲ್ಲಿ ನೋಡಿದರೆ ನಿಮಗೆ ಬೇರೆಯೇ ದೃಷ್ಯ ಕಾಣಿಸಲಿದೆ. ಇಬ್ಬರೂ ಪ್ರೇಮಿಗಳು ನದಿಯ ದಡದಲ್ಲಿರುವ ಮೆಟ್ಟಿಲುಗಳ ಮೇಲೆ ಕುಳಿತಿದ್ದಾರೆ. ಒಂದು ಮೆಟ್ಟಿಲು ಮೇಲೆ ಪ್ರೇಯಸಿ ಕುಳಿತರೆ ಆಕೆಯ ಹಿಂದೆ ಒಂದು ಮೆಟ್ಟಿಲು ಮೇಲೆ ಪ್ರಿಯಕರ ಕುಳಿತಿದ್ದಾನೆ. ಈ ಸಂದರ್ಭದಲ್ಲಿ ಪ್ರಿಯಕರ ತನ್ನ ಪ್ರೇಯಸಿಯ ತಲೆಯಲ್ಲಿರುವ ಹೇನುಗಳನ್ನು ಆರಿಸಿ ತೆಗೆಯುತ್ತಿದ್ದಾನೆ. ಈ ಎಲ್ಲ ದೃಶ್ಯವನ್ನು ಯಾವನೋ ಒಬ್ಬ ರಸ್ತೆಯಿಂದ ಹೋಗುವ ವ್ಯಕ್ತಿಯು ತನ್ನ ಮೊಬೈಲ್ ನಲ್ಲಿ ಶೂಟ್ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾನೆ.

ವಿಡಿಯೋ ನೋಡಿ

 

View this post on Instagram

 

A post shared by memes comedy (@ghantaa)

ಪ್ರಿಯಕರ ಪ್ರೇಯಸಿಯ ತಲೆಯಲ್ಲಿಂದ ತೆಗೆಯುತ್ತಿರುವ ಹೇನಿನ ದೃಶ್ಯದ ಈ ತಮಾಷೆಯ ವಿಡಿಯೋವನ್ನು ಇನ್ಸ್ಟಾಗ್ರಾಮ್ ನ ghantaa ಹೆಸರಿನ ಪೇಜ್ ನಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗಿ ತರತರದ ಕಮೆಂಟ್ಗಳನ್ನು ಮಾಡುತ್ತಿದ್ದಾರೆ.