Video: ಸ್ಮಾರ್ಟ್ ಆಗಿ ಕೆಲಸ ಮಾಡೋದು ಅಂದ್ರೆ ಇದು! ವಿಡಿಯೋ ನೋಡಿದ್ಮೇಲೆ ನೀವು ಸಹ ವಾ, ಶಭಾಷ್! ಎನ್ನುವಿರಿ..!

ಚಿಕ್ಕಂದಿನಿಂದಲೂ ನಾವು ಹಿರಿಯರ ಬಾಯಿಯಿಂದ ದುಡಿಯಿರಿ, ಕಷ್ಟ ಪಡಿ ಅಂದರೇನೆ ಭವಿಷ್ಯದಲ್ಲಿ ನಿಮಗೆ ಸುಖ ಸಿಗುತ್ತೆ ಎನ್ನೋ ಮಾತುಗಳನ್ನು ಕೇಳುತ್ತಾ ಬಂದಿದ್ದೇವೆ. ಕಷ್ಟವಿಲ್ಲದೆ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಈ ಮಾತು ಏನೋ ನಿಜ. ಆದರೆ ಇಂದಿನ ಕಾಲ ತುಂಬಾ ಬದಲಾಗಿದೆ. ಇಂದಿನ ಕಾಲದಲ್ಲಿ ಕಷ್ಟದ ಜೊತೆಗೆ ಯಾರು ಹೊಸ ಹೊಸ ಐಡಿಯಾ ಅಥವಾ ಸ್ಮಾರ್ಟ್ ಮೈಂಡ್ ನಿಂದ ಯಾರು ಕೆಲಸ ಮಾಡುತ್ತಾರೆ ಅವರಿಗೆ ಯಶಸ್ಸು ಜಾಸ್ತಿ ಸಿಗುತ್ತದೆ. ಈಗ ಇದೇ ವಿಷಯಕ್ಕೆ ಸಂಬಂಧಿಸಿದ ವಿಡಿಯೋ ಒಂದು ಇಂಟರ್ನೆಟ್ ವೇಗವಾಗಿ ವೈರಲ್ ಆಗುತ್ತಿದೆ. ಬನ್ನಿ ಈ ವಿಶೇಷವಾದ ವಿಡಿಯೋವನ್ನು ನೋಡೋಣ.

ಈ ವಿಡಿಯೋದಲ್ಲಿ ವ್ಯಕ್ತಿಯು ತನ್ನ ಪರಿಶ್ರಮದ ಕೆಲಸವನ್ನು ತನ್ನ ಸ್ಮಾರ್ಟ್ ಮೈಂಡ್ ನಿಂದ ತುಂಬಾ ಸಹಜ ಹಾಗೂ ಸರಳವನ್ನಾಗಿ ಮಾಡಿಕೊಂಡಿದ್ದಾನೆ. ಹೀಗಾಗಿ ನೇಟಿಜನ್ಸ್ ಗಳಿಗೆ ಈತನ ಕೆಲಸ ನೋಡಲು ತುಂಬಾ ಇಂಟರೆಸ್ಟ್ ಬರುತ್ತಿದೆ.

ನೋಡಿ ಈ ವಿಡಿಯೋ..

ಪ್ರಸ್ತುತ ವಿಡಿಯೋದಲ್ಲಿ ವ್ಯಕ್ತಿಯು ತುಂಬಾ ಉದ್ದವಾದ ಬಿದಿರುಗಳನ್ನು ಕಾಡಿನಿಂದ ಕಡಿದು ತರುತ್ತಿದ್ದಾನೆ. ಇಂಥ ಸಂದರ್ಭದಲ್ಲಿ ಎಲ್ಲ ಬಿದಿರುಗಳನ್ನು ಒಟ್ಟಿಗೆ ಎಳೆದೊಯ್ಯಲು ಒಬ್ಬನೇ ವ್ಯಕ್ತಿಗೆ ತುಂಬಾ ಕಷ್ಟವಾಗುತ್ತದೆ ಅಲ್ವೇ? ಹೀಗಾಗಿ ವ್ಯಕ್ತಿಯು ತನ್ನಷ್ಟಕ್ಕೆ ತಾನೇ ಒಂದು ಸ್ಮಾರ್ಟ್ ಐಡಿಯಾವನ್ನು ಶೋಧಿಸಿಕೊಂಡಿದ್ದಾನೆ. ಬಿದರಿನ ಉದ್ದವಾದ ತೊಲೆಗಳನ್ನು ಕಟ್ಟಿ ಶಕ್ತಿಯಿಂದ ಎಳೆದುಕೊಂಡು ಬೆಟ್ಟದ ಮೇಲಿನಿಂದ ಕೆಳಗಿನ ದಿಕ್ಕಿಗೆ ಜೋರಾಗಿ ನೂಕುತ್ತಿದ್ದಾನೆ. ಹೀಗಾಗಿ ಬಿಗರುಗಳು ಇಳಿಮುಖಕ್ಕೆ ತಾನಾಗಿಯೇ ಸುಲಭವಾಗಿ ಹಾಗೂ ಅಷ್ಟೇ ಸುಂದರವಾಗಿ ಹೋಗುತ್ತಿರುವುದು ವಿಡಿಯೋದಲ್ಲಿ ಕಾಣುತ್ತಿದೆ. ಇಲ್ಲಿ ವ್ಯಕ್ತಿಯ ಪರಿಶ್ರಮದ ಕೆಲಸವು ಸ್ಮಾರ್ಟ್ ವರ್ಕ್ ನಿಂದಾಗಿ ತುಂಬಾ ಸುಲಭವಾಗಿದೆ.

ವಿಡಿಯೋ ನೋಡಿ

ಈ ಸುಂದರವಾದ ವಿಡಿಯೋವನ್ನು ಸೋಶಿಯಲ್ ಮೀಡಿಯಾದ ಪ್ಲಾಟ್ಫಾರ್ಮ್ ಆದ ಟ್ವಿಟರ್ ನಲ್ಲಿ @EvoIution9 ಈ ಹೆಸರಿನಿಂದ ಶೇರ್ ಮಾಡಲಾಗಿದೆ. 20 ಸೆಕೆಂಡುಗಳ ಈ ವಿಡಿಯೋವನ್ನು ಇಲ್ಲಿಯವರೆಗೆ 5 ಲಕ್ಷಕ್ಕೂ ಮೀರಿ ವಿಕ್ಷಿಸಲಾಗಿದೆ. ಹಾಗೂ ಸಾವಿರಾರು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.