Articles

ಗರ್ಲ್ ಫ್ರೆಂಡ್ ಜೊತೆಯಲ್ಲಿದ್ದಾಗಲೇ ಮುಜುಗರಕ್ಕೊಳಗಾದ ಯುವಕ! ಆ ದೃಶ್ಯದ ಈ ವಿಡಿಯೋ ನೋಡಿದಾಗಲೇ ಬರುವದು ಮಜಾ….!

ಎಷ್ಟೋ ಸಲ ಯುವಕ ಯುವತಿಯರು ಸುತ್ತಾಡಲು ಹೋಗುತ್ತಾರೆ. ಅದಕ್ಕೆ ಈಗಿನ ಭಾಷೆಯಲ್ಲಿ ಡೇಟ್ ಅಂತಲೂ ಹೇಳಬಹುದು. ಹೀಗೆ ಹೋದಾಗ ಕೆಲವು ಸಲ ಯುವಕ-ಯುವತಿಯರು ಪರಸ್ಪರ ಮುಜುಗರಕ್ಕೀಡಾದ ಪ್ರಸಂಗಗಳು ಸಂಭವಿಸುವುದುಂಟು. ಇಂಥ ಪ್ರಸಂಗಗಳು ಕ್ಯಾಮೆರಾ ಮುಂದೆ ನಡೆದಾಗ ಅವು ಕ್ಷಣಾರ್ಧದಲ್ಲಿ ವೈರಲ್ ಆಗಿ ಬಿಡುತ್ತವೆ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಯುವಕನೊಬ್ಬ ತನ್ನ ಗರ್ಲ್ ಫ್ರೆಂಡ್ ಮುಂದೆ ಮುಜುಗರಕ್ಕೀಡಾದ ವಿಡಿಯೋ ವೈರಲ್ ಆಗುತ್ತಿದೆ. ಪ್ರಸ್ತುತ ವಿಡಿಯೋದಲ್ಲಿ ಒಂದು ಕಪಲ್ ಹೋಟೆಲ್ ನಲ್ಲಿ ಕುಳಿತಿದೆ. ಉಪಹಾರದ ಸಲುವಾಗಿ ಆರ್ಡರ್ ಕೊಟ್ಟು ಸ್ವಲ್ಪ ರಿಲ್ಯಾಕ್ಸ್ ಆಗಲು ತಾನು ತೊಟ್ಟ ಜಾಕೆಟ್ ಅಥವಾ ಮೇಲಿನ T ಶರ್ಟ್ ತೆಗೆದಿದ್ದಾನೆ. ಎಡವಟ್ಟು ಆದದ್ದು ಅಲ್ಲಿಯೇ. ಆತ ತೊಟ್ಟುಕೊಂಡ ಮೇಲಿನ ಟಿ-ಶರ್ಟ್ ತೆಗೆಯುವಾಗ ಬಾಂಡ್ಲಿ ತಲೆ ಮೇಲೆ ಅಂಟಿಸಿಕೊಂಡ ವಿಗ್ ಯುವಕನಿಗೆ ಅರಿವಿಲ್ಲದಂತೆ ಸೆಟೆದು ನಿಂತಿದೆ. ಈ ದೃಶ್ಯವನ್ನು ಹಠಾತ್ತನೆ ಗರ್ಲ್ಫ್ರೆಂಡ್ ನೋಡಿದಾಗ ಆಕೆಗೆ ನಗು ತಡೆಯುವುದಾಗಿಲ್ಲ. ಆಕೆ ನಗುತ್ತಿರುವ ಕಾರಣ ತಿಳಿದು ಯುವಕನು ತುಂಬಾ ನಾಚಿಕೆಯಿಂದ ಮುಜುಗರ ಪಟ್ಟು ಮುಖ ಮುಚ್ಚಿ ಕೊಂಡಿದ್ದಾನೆ. ಗರ್ಲ್ ಫ್ರೆಂಡ್ ಮುಂದೆ ತನ್ನ ಫಜೀತಿ ಆಯ್ತಲ್ಲ ಎಂಬ ನೂನ್ಯತೆ ಆತನಿಗೆ ಕಾಡಿದೆ.

ನೋಡಿ ಈ ವಿಡಿಯೋ…

ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ discovery_engenharia ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋಗೆ ಇಲ್ಲಿಯವರೆಗೆ ಲಕ್ಷಾವಧಿ ಜನರು ನೋಡಿ ನಕ್ಕಿದ್ದಾರೆ ಮತ್ತು ಸುಮಾರು ಎರಡೂ ಲಕ್ಷಗಳ ಸಮೀಪ ಲೈಕ್ಸ್ ಸಹ ಮಾಡಿದ್ದಾರೆ.

Leave a Comment

Your email address will not be published. Required fields are marked *