Video; Spice Jet ಗಗನಸಖಿ ರೆಡ್-ಬ್ಲಾಕ್ ಒನ್ ಪೀಸ್ ನಲ್ಲಿ ಮಾಡಿದ ಪುಟ್ಟ ಮೋಹಕ ಡ್ಯಾನ್ಸ್ ಆಯಿತು ವೈರಲ್…
ಡಾನ್ಸ್ ಅಂದರೆ ಒಬ್ಬೊಬ್ಬರ ಮೈಯಲ್ಲಿ ಏನೋ ಒಂಥರ ಎನರ್ಜಿ, ವಿದ್ಯುತ್ ಸಂಚಾರವಾದಂತೆ ಆಗುತ್ತದೆ. ಅಷ್ಟೊಂದು ಕುಣಿಯುವದೆಂದರೆ ಇಷ್ಟಪಡುತ್ತಾರೆ. ಕೆಲವರು ಮಾಡುವ ಡಾನ್ಸ್ ಕೆಲವೇ ಕ್ಷಣಗಳದ್ದು ಇದ್ದರೂ ಅಲ್ಲಿಯ ಮೂವ್ ಮೆಂಟ್ಸ್ ಗಳು ತುಂಬಾ ಮುಖ್ಯವಾಗಿರುತ್ತವೆ. ಸ್ಪೈಸ್ ಜೆಟ್ ನ ಗಗನಸಖಿಯೊಬ್ಬಳು ಇದೇ ರೀತಿ ಮಾಡಿದ ಒಂದು ಪುಟ್ಟ ಹಾಗೂ ಮೋಹಕ ನೃತ್ಯ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕಾಣಲು ಸಿಗುತ್ತಿದೆ.
ತಮ್ಮ ವಿವಿಧ ಡಾನ್ಸ್ ಗಳಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ಧಿಯನ್ನು ಪಡೆದ ಉಮಾ ಹೆಸರಿನ ಏರ್ ಹೋಸ್ಟೆಸ್ ಈಗ ಮತ್ತೊಂದು ಸುಂದರವಾದ ಕುಣಿತವನ್ನು ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಅಕೌಂಟ್ ನಿಂದ ಶೇರ್ ಮಾಡಿದ್ದಾಳೆ. ಮನೆಯ ಬಾಲ್ಕನಿಯ ಹತ್ತಿರ ಈ ಏರ್ ಹೋಸ್ಟೆಸ್ ಕೆಲವೇ ಕ್ಷಣಗಳ ಆದರೆ ಮನಸ್ಸು ಸೂರೆಗೊಳ್ಳುವ ಸುಂದರವಾದ ಕುಣಿತವನ್ನು ಪ್ರದರ್ಶಿಸಿದ್ದಾಳೆ. ಆಕೆ ಮಾಡುತ್ತಿರುವ ಕುಣಿತಕ್ಕೆ ಮೈಮೇಲಿನ ರೆಡ್ ಬ್ಲಾಕ್ ಕಾಂಬಿನೇಷನ್ ನ ಒನ್ ಪೀಸ್ ಡ್ರೆಸ್ ತುಂಬಾ ಎದ್ದು ಬೀಳುವಂತೆ ಸಹಾಯಕವಾಗಿದೆ. ಬಾಲ್ಕನಿಯಿಂದ ಹೊಮ್ಮಿ ಬರುತ್ತಿರುವ ಬೆಳಕು ಗಗನಸುಂದರಿಗೆ ಮತ್ತಷ್ಟು ಗ್ಲೋ ನೀಡಿದೆ. ಈ ನೃತ್ಯ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗಿದೆ.
ವಿಡಿಯೋ ನೋಡಿ
View this post on Instagram
ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ ನ yamtha.uma ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವೀಡಿಯೋವನ್ನು ಇಲ್ಲಿಯವರೆಗೆ ಸುಮಾರು ಲಕ್ಷ ಜನರು ವೀಕ್ಷಿಸಿದ್ದು ಸಾವಿರಾರು ಮಂದಿ ಈ ಕುಣಿತಕ್ಕೆ ತಮ್ಮ ಮೆಚ್ಚುಗೆಯನ್ನು ವ್ಯಕ್ತ ಮಾಡಿದ್ದಾರೆ.