Viral Video: ತನ್ನನ್ನು ಹೊಡೆದ ವ್ಯಕ್ತಿಯಿಂದ ಸರಿಯಾಗಿ ಸೇಡು ತೀರಿಸಿಕೊಂಡ ಮೇಕೆ! ಜನರಂತಿದ್ದಾರೆ ‘ಮಾಡಿದ್ದುಣ್ಣೋ ಮಾರಾಯಾ!’

ಮೇಕೆ (Goat) ಒಂದು ತಮಾಷೆಯ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಅದನ್ನು ನೋಡಿ ನೀವು ಸಹ ಹೊಟ್ಟೆ ಹುಣ್ಣಾಗುವಂತೆ ನಗುವಿರಿ. ಪ್ರಾಣಿಗಳ ತಮಾಷೆಯ ವಿಡಿಯೋಗಳನ್ನು ಜನರು ತುಂಬಾ ಇಷ್ಟ ಪಡುತ್ತಿದ್ದಾರೆ. ಈ ವಿಡಿಯೋದಲ್ಲಿ ಆಡು ತನ್ನನ್ನು ಹೊಡೆದ ಮನುಷ್ಯನನ್ನು ಹೊಡೆದು ಪ್ರತೀಕಾರ ಹೇಗೆ ತೀರಿಸುಕೊಳ್ಳುತ್ತದೆ ನೋಡಿ. ಈ ಮೇಕೆ ಹಿಂದಿನಿಂದ ಬಂದು ವ್ಯಕ್ತಿಯ ಬೆನ್ನಿಗೆ ಜೋರಾಗಿ ಗುದ್ದುತ್ತದೆ. ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಇಂಡಿಯನ್ ಫಾರೆಸ್ಟ್ ಆಫೀಸರ್ ಸುಶಾಂತ್ ನಂದಾ ಅವರು ಶೇರ್ ಮಾಡಿದ್ದಾರೆ.

ವಿಡಿಯೋದಲ್ಲಿ ನೀವು ನೋಡಬಹುದು, ಮೇಕೆ ಎದ್ದು ನಿಂತು ವ್ಯಕ್ತಿಯ ಕಡೆಗೆ ನೋಡುತ್ತಿರುತ್ತದೆ, ಆಗ ವ್ಯಕ್ತಿ ಒಂದು ಪೈಪ್ ತಗೆದುಕೊಂಡು ಹೊಡೆಯಲು ಪ್ರಯತ್ನ ಮಾಡುತ್ತಾನೆ. ಅದು ಹಿಂದಕ್ಕೆ ಸರಿದು ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ. ತದನಂತರ ಕೋಪದಿಂದ ವ್ಯಕ್ತಿಯ ಹಿಂದುಗಡೆಯಿಂದ ಓಡಿ ಬಂದು ಆ ವ್ಯಕ್ತಿಗೆ ಜೋರಾಗಿ ಗುದ್ದುತ್ತದೆ. ಅದರ ಹೊಡೆತಕ್ಕೆ ಆತನು ಕೆಳಗಡೆ ಬೀಳುತ್ತಾನೆ ಆಗ ಮೇಕೆ ಮರಳಿ ಹೋಗುತ್ತದೆ.

ವಿಡಿಯೋ ನೋಡಿ

ಸುಶಾಂತ್ ನಂದಾ ಅವರು ಈ ವಿಡಿಯೋ ಶೇರ್ ಮಾಡುತ್ತಾ, ‘ಜೀವನವೇ ಒಂದು ಗೋಲಾಕಾರ ವಾಗಿದೆ ನಾವು ಏನು ಕೊಡುತ್ತವೆಯೋ ಅದೇ ನಮಗೆ ಮರಳಿ ಬರುತ್ತದೆ”ಎಂದು ಬರೆದಿದ್ದಾರೆ. ಈ ವಿಡಿಯೋವನ್ನು 19 ಜುಲೈ ರಂದು ಸಾಯಂಕಾಲ ಶೇರ್ ಮಾಡಿದ್ದರು, ಇದನ್ನು ಇದುವರೆಗೆ ಎಂಟು ಸಾವಿರಕ್ಕಿಂತ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ ಜೊತೆಗೆ 700 ಕ್ಕಿಂತ ಹೆಚ್ಚು ಲೈಕ್ಸ್ ಹಾಗೂ 200 ಕ್ಕಿಂತ ಹೆಚ್ಚು ರೀಟ್ವಿಟ್ ಮತ್ತು ಕಾಮೆಂಟ್ಸ್ ಗಳು ಬಂದಿವೆ.