Viral Video: ಹಾವು ಕಪ್ಪೆಯನ್ನು ನುಂಗುವುದು ಸಾಮಾನ್ಯ, ಆದರೆ ಇಲ್ಲೊಂದು ಕಪ್ಪೆಯೇ ಹಾವನ್ನು ನುಂಗಲು ಮುಂದಾಗಿದೆ!
ನಮ್ಮ ಪ್ರಕೃತಿಯಲ್ಲಿ ಒಂದು ಜೀವಿಯು ತನ್ನ ಬದುಕಿಗಾಗಿ ಮತ್ತೊಂದು ಜೀವಿಯನ್ನು ಅವಲಂಬಿಸಿರುವುದು ಎಲ್ಲರಿಗೂ ಕೂಡಾ ತಿಳಿದಿದೆ. ಇಲ್ಲಿ ಒಂದು ರೀತಿಯ ಉಳಿವಿಗಾಗಿ ಹೋರಾಟ ಸದಾ ನಡದೇ ಇರುತ್ತದೆ. ಅಂದರೆ ಡಾರ್ವಿನ್ ನ ವಿಕಾಸ ವಾದದ ಹಾಗೆ ಬಲವಂತರೂ ಬದುಕಿದರೆ, ದುರ್ಬಲರು ಕಾಲದಲ್ಲಿ ಕಣ್ಮರೆಯಾಗುವರು. ಇನ್ನು ಜೀವಿಗಳು ಬದುಕಿರಬೇಕು ಎಂದರೆ ಆಹಾರದ ಅಗತ್ಯವಿದೆ. ಅದಕ್ಕಾಗಿ ಕೂಡಾ ಒಂದು ಜೀವಿಯು ಇನ್ನೊಂದು ಜೀವಿಯ ಮೇಲೆ ಅವಲಂಬಿಸಿದ್ದು ನಾವು ಕೂಡಾ ಶಾಲಾ ದಿನಗಳಲ್ಲಿ ಇದನ್ನೇ ವಿಜ್ಞಾನ ವಿಷಯದಲ್ಲಿ ಆಹಾರ ಸರಪಳಿ ಎಂಬುದಾಗಿ ಓದಿರುವುದು ಕೂಡಾ ನಮಗೆ ಇನ್ನೂ ನೆನಪಿದೆ.
ಆಹಾರ ಸರಪಳಿ ಎಂದಾಗ ಒಂದು ವೃತ್ತಾಕಾರದ ಚಿತ್ರದಲ್ಲಿ ಹೇಗೆ ಯಾವ ಜೀವಿ ಇನ್ನೊಂದು ಜೀವಿಯ ಮೇಲೆ ಅವಲಂಬಿತವಾಗಿದೆ ಎಂಬುದನ್ನು ಅದು ವಿವರಿಸುವುದನ್ನು ನಾವು ನೋಡಿದ್ದೇವೆ. ಅಂದರೆ ಮಿಡತೆಯನ್ನು ಕಪ್ಪೆ, ಕಪ್ಪೆಯನ್ನು ಹಾವು, ಹಾವನ್ನು ಹದ್ದು ಹೀಗೆ ಒಂದು ಇನ್ನೊಂದನ್ನು ತಿಂದು ಜೀವಿಸುತ್ತವೆ ಎಂಬುದನ್ನು ನಾವು ಆ ಚಿತ್ರದಿಂದ ತಿಳಿಯುತ್ತೇವೆ. ಅಲ್ಲದೇ ಕೆಲವೊಮ್ಮೆ ಹಾವುಗಳು ಕಪ್ಪೆ ಯನ್ನು ನುಂಗುವುದನ್ನು, ಕೆಲವೊಮ್ಮೆ ನುಂಗಿ ಅದನ್ನು ಒಳಗೆ ಎಳೆದುಕೊಳ್ಳಲಾಗದೆ ಹಾವು ಹೊರಳಾಟ ಮಾಡುವುದನ್ನು ನಾವು ನೋಡಿರುತ್ತೇವೆ. ನೋಡದೇ ಇದ್ದರೂ ಹಾವು ಕಪ್ಪೆಯನ್ನು ನುಂಗುತ್ತದೆ ಎಂದು ಎಲ್ಲರೂ ಒಪ್ಪುತ್ತಾರೆ.
ಆದರೆ ಸೋಶಿಯಲ್ ಮೀಡಿಯಾದಲ್ಲಿ ನಮ್ಮ ಆಹಾರ ಸರಪಣಿಯ ಚಿತ್ರವನ್ನು ಕೂಡಾ ತಪ್ಪು ಎನ್ನುವ ಹಾಗೆ ಹಾಗೂ ನಮ್ಮ ಆಲೋಚನೆಗಳನ್ನು ತಲೆ ಕೆಳಗೆ ಮಾಡುವ ವೀಡಿಯೋ ಒಂದು ವೈರಲ್ ಆಗಿದ್ದು ಈ ವೀಡಿಯೋ ನೋಡಿದವರೂ ಕೂಡಾ ಓ ಮೈ ಗಾಡ್ ಏನಿದು ವಿಪರೀತ? ಹೀಗೂ ಆಗುವುದುಂಟೆ? ಎಂದು ಆಶ್ಚರ್ಯ ಹಾಗೂ ಶಾ ಕ್ ಕೂಡಾ ಆಗುವುದು ಖಂಡಿತ ಎಂದು ನಾವು ಹೇಳಬಹುದಾಗಿದೆ. ಹಾಗಾದರೆ ಈ ವೀಡಿಯೋದಲ್ಲಿ ಅಂತಹ ವಿಚಿತ್ರ ಅಥವಾ ವಿಪರೀತ ಎನಿಸುವುದು ಏನಿದೆ ಎನ್ನುವ ಪ್ರಶ್ನೆ ನಿಮಗೆ ಈಗಾಗಲೇ ಬಂದಿರಬಹುದು ಅಲ್ಲವೇ ಬನ್ನಿ ಏನೆಂದು ನಾವು ತಿಳಿಯೋಣ.
ವೈರಲ್ ಆಗಿರುವ ವಿಡಿಯೋ ದಲ್ಲಿ ಒಂದು ಹಾವು ಮತ್ತು ಒಂದು ಕಪ್ಪೆ ಇದೆ. ಬಹುಶಃ ಹಾವು ಕಪ್ಪೆಯನ್ನು ಹಿಡಿದಿರಬಹುದು ಎಂದು ನೀವು ಊಹಿಸಿಕೊಂಡರೆ ನಿಮ್ಮ ಊಹೆಗೆ ಅಲ್ಲೇ ಬ್ರೇಕ್ ಹಾಕಿ ಬಿಡಿ. ಏಕೆಂದರೆ ಈ ವೀಡಿಯೊ ಆ ಆಲೋಚನೆ ಅಥವಾ ಊಹೆಗೆ ಸಂಪೂರ್ಣವಾಗಿ ವಿ ರು ದ್ಧವಾಗಿದೆ. ಏಕೆಂದರೆ ಇಲ್ಲಿ ಹಾವು ಕಪ್ಪೆಯನ್ನು ನುಂಗುತ್ತಿಲ್ಲ. ಬದಲಿಗೆ ಕಪ್ಪೆಯೇ ಹಾವನ್ನು ನುಂಗುತ್ತಿದೆ. ಏನಿದು ನಿಜಾನಾ? ಇದು ಸುಳ್ಳು ಎನ್ನಬೇಡಿ. ಏಕೆಂದರೆ ವೀಡಿಯೋದಲ್ಲಿ ಕಪ್ಪೆ ಹಾವನ್ನು ನುಂಗುತ್ತಿರುವುದು ಬಹಳ ಸ್ಪಷ್ಟವಾಗಿ ಕಾಣುತ್ತಿದೆ ಹಾಗೂ ಇದು ನಿಜವಾದ ದೃಶ್ಯ ಕೂಡಾ ಆಗಿದೆ.
ಹಾವನ್ನು ಕಪ್ಪೆ ನುಂಗುವ ಈ ವೀಡಿಯೋವನ್ನು ಈಗಾಗಲೇ 31 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಣೆ ಮಾಡಿದ್ದು, 21 ಸಾವಿರ ಜನರು ಲೈಕ್ ಮಾಡಿದ್ದರೆ ಸುಮಾರು 14 ಸಾವಿರಕ್ಕಿಂತ ಅಧಿಕ ಜನರು ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಹುತೇಕ ಎಲ್ಲರೂ ಕೂಡಾ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ಒಬ್ಬರು ಈಗ ಹಾವಿಗೆ ಜೀವಂತವಾಗಿ ಇತರೆ ಜೀವಿಗಳನ್ನು ನುಂಗಿದಾಗ ಅವುಗಳ ಅನುಭವ ಏನೆಂದು ಗೊತ್ತಾಗಿರುತ್ತೆ ಎಂದಿದ್ದಾರೆ. ಇನ್ನೊಬ್ಬರು ಹಾವು ತುಂಬಿದ ಕಪ್ಪೆಗಳ ಅಪ್ಪ ಇರಬೇಕು ಇದು, ಅದಕ್ಕೆ ಬಲಿಯಾದ ಕಪ್ಪೆಗಳ ಸೇಡನ್ನು ತಾನು ತೀರಿಸಿಕೊಂಡಿದೆ ಎಂದಿದ್ದಾರೆ.