ವಿಟಾಮಿನ್ ಸಿ ಎಷ್ಟು ಮುಖ್ಯ? ಅದರ ಕೊರತೆಯಾದರೆ ಯಾವೆಲ್ಲ ಲಕ್ಷಣಗಳು ಕಾಣಿಸುತ್ತವೆ? ಅದಕ್ಕೆ ಪರಿಹಾರ ಏನು? ಓದಿ…

ಮಾನವನ ದೇಹ ಎಂದರೆ ಸಾಕಷ್ಟು ಅಂಗಾಂಗಳಿಂದ ಕೂಡಿದ ಒಂದು ಸಮೂಹ, ಆ ಸಮೂಹಕ್ಕೆಲ್ಲ ಆಹಾರದ ಅವಶ್ಯಕತೆ ಇದ್ದೆ ಇರುತ್ತದೆ. ಅದರಲ್ಲೂ ಪೌಷ್ಟಿಕ ಆಹಾರದ ಅವಶ್ಯಕತೆ ಇರುತ್ತದೆ. ನಾವು ಪ್ರೊಟೀನ್ಸ್, ವಿಟಮಿನ್ಸ್, ಲಿಪಿಡ್ಸ್, ಕಾರ್ಬೋಹೈಡ್ರೇಟ್ಸ್, ಲವಣಾಂಶಗಳು ಇನ್ನೂ ಅನೇಕ ಮುಖ್ಯ ಅಂಶಗಳನ್ನೊಳಗೊಂಡ ಸಮತೋಲಿತ ಆಹಾರ ಸೇವನೆ ಮಾಡುವುದು ಅನಿವಾರ್ಯ.

ಅದರಲ್ಲೂ ವಿಟಮಿನ್ಸ್ ಅವಶ್ಯವಾಗಿ ಬೇಕೇ ಬೇಕು, ಏಕೆಂದರೆ ಇವುಗಳೇ ಸೇವಿಸಿದ ಆಹಾರವನ್ನು ಎನರ್ಜಿಯಾಗಿ ಪರಿವರ್ತಿಸುತ್ತವೆ, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ ಹಾಗೂ ಜೀವಕೋಶಗಳ ರಿಪೇರಿ ಮಾಡುತ್ತವೆ. ಇನ್ನೂ ಇವುಗಳ ಕೊರತೆಯಿಂದ ದೇಹದ ಬೆಳವಣಿಗೆ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ.

ಇಂಥ ವಿಟಾಮಿನ್ ಗಳಲ್ಲಿ ಸಿ ವಿಟಮಿನ್ ಕೂಡ ಮಹತ್ವ ಪಡೆದಿದೆ. ಅದರ ಕೊರತೆಯಿಂದ ಏನೆಲ್ಲಾ ಸಮಸ್ಯೆ ಆಗಬಹುದು ಹಾಗೂ ಅದಕ್ಕೆ ಪರಿಹಾರ ಹೇಗೆಲ್ಲ ಪಡೆಯಬಹುದು ಎಂಬ ವಿವರಣೆ ಈ ಲೇಖನದಲ್ಲಿದೆ ಓದಿ…

ಸಿ ವಿಟಮಿನ್ ಇದು ಮಾನವನ ದೇಹಕ್ಕೆ ಅತ್ಯವಶ್ಯವಾಗಿ ಬೇಕಾಗುತ್ತದೆ, ಆದರೆ ಇದರ ವಿಶೇಷತೆ ಎಂದರೆ ಇದು ಮಾನವನ ದೇಹದಲ್ಲಿ ಉತ್ಪತ್ತಿ ಆಗುವುದಿಲ್ಲ. ಹಾಗೇಯೇ ಆಹಾರದ ಮೂಲಕ ದೇಹಕ್ಕೆ ನೀಡಿದರೂ ಅದು ಅಲ್ಲಿಯೇ ಸ್ಟಾಕ್ ಉಳಿಯುವುದಿಲ್ಲ. ಹೀಗಾಗಿ ಪ್ರತಿ ದಿನದ ಆಹಾರದಲ್ಲಿ ಈ ವಿಟಮಿನ್ ಸಿ ಯನ್ನು ನಾವು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ.

ಇನ್ನೂ ಇದು ಒಂದು ದಿನಕ್ಕೆ ಪ್ರತಿಯೊಬ್ಬ ಪುರುಷನ ದೇಹಕ್ಕೆ 90 ಗ್ರಾಂ ಹಾಗೂ ಮಹಿಳೆಯರ ದೇಹಕ್ಕೆ 75 ಗ್ರಾಂ ಅವಶ್ಯಕತೆ ಇದೆ. ಯಾರಲ್ಲಿ ವಿಟಮಿನ್ ಸಿ ಕೊರತೆ ಇರುತ್ತದೆ ಎಂದು ನೋಡುವುದಾದರೆ…
*ಸಮಯಕ್ಕೆ ಸರಿಯಾಗಿ ಸರಿಯಾದ ಊಟ ಮಾಡಲಾರದ ವ್ಯಕ್ತಿಗಳಲ್ಲಿ
*ಕಿಡ್ನಿ ಸಂಬಂಧಿತ ರೋಗಿಗಳಲ್ಲಿ
*ಬಹಳಷ್ಟು ಧೂಮಪಾನ & ಮಧ್ಯಪಾನ ಮಾಡುವವರಲ್ಲಿ
ಸಿ ವಿಟಮಿನ್ ಕೊರತೆ ಬಹಳಷ್ಟು ಇರುತ್ತದೆ. ಇದರ ಕೊರತೆ ಬಹಳ ಇದ್ದರೆ ಈ ಕೆಳಗಿನ ಕೆಲವೊಂದು ಲಕ್ಷಣಗಳು ಕಾಣುತ್ತವೆ…

ಗಾಯ ನಿಧಾನವಾಗಿ ಮಾಯವಾಗುವುದು : ಗಾಯವಾದಾಗ ಅದು ಬೇಗನೆ ವಾಸಿಯಾಗದೆ ಇದ್ದರೆ ಅದು ಸಿ ವಿಟಮಿನ್ ಕೊರತೆಯ ಲಕ್ಷಣ. ರಕ್ತ ಹಾಗೂ ಅಂಗಾಂಶಗಳಲ್ಲಿ ಸಿ ವಿಟಮಿನ್ ಕೊರತೆ ಬಹಳಷ್ಟು ಇರುತ್ತದೆ. ಚರ್ಮದ ರಿಪೇರಿ ಮಾಡಲು ಕೋಲಾಜೇನ್ ಬಯೋ ಸಿಂಥೆಸಿಸ್ ಅವಶ್ಯಕತೆ ಇದೆ.

ಈ ಸಿಂಥೆಸಿಸ್ ಆಗಲೂ ವಿಟಮಿನ್ ಸಿ ಯು ಕೋ ಫ್ಯಾಕ್ಟರ್ ಆಗಿ ಕೆಲಸ ಮಾಡುತ್ತದೆ, ಸಿ ವಿಟಮಿನ್ ಕೊರತೆಯಿಂದ ಅದು ಚರ್ಮದ ಜೀವಕೋಶಗಳನ್ನು ಬೇಗನೆ ರಿಪೇರಿ ಮಾಡದ ಕಾರಣ ಹೊಸ ಚರ್ಮ ಬೆಳೆಯದೆ ಗಾಯ ಬೇಗ ವಾಸಿಯಾಗುವುದಿಲ್ಲ.

ಇಷ್ಟೇ ಅಲ್ಲದೇ ವಿಟಮಿನ್ ಸಿ ಬಿಳಿರಕ್ತ ಕಣಗಳಿಗೆ ಅವಶ್ಯವಾಗಿ ಬೇಕು, ಅವುಗಳು ರೋಗದ ವಿರುದ್ಧ ಹೋರಾಡುತ್ತವೆ ಎಂಬ ವಿಷಯ ನಿಮಗೆಲ್ಲ ಗೊತ್ತೇ ಇದೆ, ವಿಟಮಿನ್ ಸಿ ಕೊರತೆಯಿಂದ ಅವುಗಳ ಹೋರಾಟ ಕೂಡ ಕಡಿಮೆಯಾಗಿ ಗಾಯ ಬೇಗನೆ ವಾಸಿಯಾಗುವುದಿಲ್ಲ ಮತ್ತು ಇತರೆ ಕಾಯಿಲೆಗಳ ವಿರುದ್ಧ ಕೂಡ ದೇಹ ಹೋರಾಡಲು ಶಕ್ತವಾಘುವುದಿಲ್ಲ.

ವಸಡು ಹಾಗೂ ಮುಗಿನಿಂದ ರಕ್ತ ಬರುವುದು :
ವಿಟಮಿನ್ ಸಿ ರಕ್ತ ನಾಳಗಳನ್ನು ಕೂಡ ಸ್ವಾಸ್ತ್ಯವಾಗಿಟ್ಟುಕೊಳ್ಳುತ್ತದೆ. ಹಲ್ಲು ಹಾಗೂ ವಸಡುಗಳ ಸ್ವಾಸ್ತ್ಯಕ್ಕಾಗಿ ಕೋಲಾಜೆನ್ ಅವಶ್ಯಕತೆ ಇದೆ. ಒಂದು ವರದಿಯ ಪ್ರಕಾರ ವಸಡಿನಲ್ಲಿ ರಕ್ತ ಬರುವ ವ್ಯಕ್ತಿಗಳು ಬಿಡದೆ ಎರಡು ವಾರ ದ್ರಾಕ್ಷಿಯನ್ನು ತಿಂದರೆ ವಸಡಿನಲ್ಲಿ ರಕ್ತ ಬರುವುದು ನಿಲ್ಲುತ್ತದೆ. ಇದೆ ರೀತಿ ಮೂಗಿನಲ್ಲಿ ರಕ್ತ ಬರುವುದು ಕೂಡ ವಿಟಮಿನ್ ಸಿ ಯ ಲಕ್ಷಣವೇ ಆಗಿದೆ.

ತೂಕ ಹೆಚ್ಚಾಗುವುದು :
ಬೊಜ್ಜು ಬರುವುದಕ್ಕೂ ಕೂಡ ಸಿ ವಿಟಮಿನ್ ಕೊರತೆ ಕಾರಣವಾಗಿದೆ, ಏಕೆಂದರೆ ಸೇವಿಸಿದ ಆಹಾರ ಎನರ್ಜಿಯಾಗಿ ಬದಲಾಗದೆ ಹಾಗೆಯೇ ಬೊಜ್ಜಿನ ರೂಪದಲ್ಲಿ ಸಂಗ್ರಹವಾಗಿರುತ್ತದೆ.

ಒಣಗಿದ ಹಾಗೂ ಸುಕ್ಕುಗಟ್ಟಿದ ಚರ್ಮ :
ವಿಟಮಿನ್ ಸಿ ಕೊರತೆಯಿಂದ ಮುಖ ಹಾಗೂ ದೇಹದ ಚರ್ಮ ಸುಕ್ಕುಗಟ್ಟಿ ಒಣಗಿದಂತಾಗುತ್ತದೆ. ವಿಟಮಿನ್ ಸಿ ಯನ್ನು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳುತ್ತಿದ್ದರೆ ಅವರ ಚರ್ಮ ಕಾಂತಿಯುತವಾಗಿರುತ್ತದೆ.

ಆಯಾಸ ಮತ್ತು ಕಿರಿಕಿರಿ :
ಸಿ ವಿಟಮಿನ್ ಕೊರತೆಯಿಂದ ಆಯಾಸ ಮತ್ತು ಕಿರಿಕಿರಿಯುಂಟಾಗುತ್ತದೆ, ಇದರ ಬಗ್ಗೆ ಅಧ್ಯಯನ ನಡೆಸಲಾಯಿತು. ಒಟ್ಟು 150 ಜನರ ಮೇಲೆ ಅಧ್ಯಯನ ನಡೆಸಿದಾಗ ಅವರಲ್ಲಿ ವಿಟಮಿನ್ ಸಿ ಕೊರತೆಯಿಂದ ಆಯಾಸ ಮತ್ತು ಕಿರಿಕಿರಿ ಅನುಭವಿಸುತ್ತಿರುವವರೇ ಹೆಚ್ಚು. ಅವರಿಗೆ ಅಲ್ಲಿಯೇ ವಿಟಮಿನ್ ಸಿ ಕೊಟ್ಟ ತಕ್ಷಣ ಕೇವಲ ಒಂದೆರಡು ಘಂಟೆಯಲ್ಲಿ ಆಯಾಸ ಕಡಿಮೆಯಾಯಿತು.

ಇಮ್ಮ್ಯೂನಿಟಿ ಕಡಿಮೆಯಾಗುವುದು :
ವಿಟಮಿನ್ ಸಿ ಕೊರತೆಯಿಂದ ಪದೇ ಪದೇ ರೋಗ ರುಜಿನ ಬರುವುದುಂಟು. ಬಂದ ರೋಗಗಳು ಬೇಗನೆ ವಾಸಿಯಾಗುವುದಿಲ್ಲ. ಅಷ್ಟೇ ಅಲ್ಲದೇ ವಿಟಮಿನ್ ಸಿ ಗೆ ಬ್ಲಾಡರ್ ಹಾಗೂ ನ್ಯೂಮೋನೀಯ ದಂತಹ ರೋಗಗಳಿಂದ ರಕ್ಷಿಸುವ ಶಕ್ತಿ ಸಹ ಇದೆ. ಕೆಲವು ತೆರನಾದ ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ಇದು ರಕ್ಷಿಸುತ್ತದೆ.

ಕಣ್ಣು ಮಂಜಾಗುವುದು :
ವಯಸ್ಸಾದಂತೆ ಕಣ್ಣುಗಳು ಮಂಜಾಗುತ್ತಿದ್ದರೆ, ಸಿ ವಿಟಮಿನ್ ಕೊರತೆಯಿಂದ ಇನ್ನಷ್ಟು ಬೇಗನೆ ಕಣ್ಣು ಮಂಜಾಗುತ್ತವೆ. ಊಟದಲ್ಲಿ ವಿಟಮಿನ್ ಸಿ ತೆಗೆದುಕೊಳ್ಳುವದರಿಂದ ಇದನ್ನು ತಪ್ಪಿಸಬಹುದು.

ಸ್ಕರ್ವಿ :
ವಿಟಮಿನ್ ಸಿ ಕೊರತೆಯಿಂದ ಸ್ಕರ್ವಿ ರೋಗ ಕೂಡ ಬರಬಹುದಾಗಿದೆ. ಇದಷ್ಟೇ ಅಲ್ಲದೇ ಜಾಯಿಂಟ್ ಪೇನ್, ಕೂದಲು ಉದುರುವಿಕೆ, ರೋಗಿಗಳಲ್ಲಿ ದೌರ್ಬಲ್ಯ, ಸಡಿಲವಾದ ಹಲ್ಲುಗಳು, ಸಡಿಲವಾದ ಉಗುರುಗಳು ಇತ್ಯಾದಿ ಲಕ್ಷಣಗಳು ಕಂಡುಬರುತ್ತವೆ.

ವಿಟಮಿನ್ ಸಿ ಇರುವ ಆಹಾರ ಪದಾರ್ಥಗಳು :
ಇಷ್ಟೆಲ್ಲ ಮಹತ್ವ ಇರುವ ವಿಟಾಮಿನ್ ಸಿ ನಮಗೆ ಎಲ್ಲಿ ದೊರೆಯುತ್ತದೆ ಎಂದು ನೋಡುವುದಾದರೆ… ಕಿತ್ತಳೆ ಹಣ್ಣು, ನಿಂಬೆ ಹಣ್ಣು, ನೆಲ್ಲಿ ಕಾಯಿ, ಪಾಲಕ್ ಸೊಪ್ಪು, ಕೋಸುಗಡ್ಡೆ ಹಾಗೂ ಕಿವಿ ಫ್ರೂಟ್ ಇತ್ಯಾದಿ ಹುಳಿ ಅಂಶ ಹೊಂದಿರುವ ಹಣ್ಣುಗಳು ಸಿ ವಿಟಮಿನ್ ಅನ್ನು ಹೇರಳವಾಗಿ ಹೊಂದಿರುತ್ತವೆ.

ಸಿ ವಿಟಾಮಿನ್ ಔಷಧಿ ತಗೆದುಕೊಳ್ಳುವ ಬದಲು, ಆಹಾರದಲ್ಲೇ ಮೇಲೆ ತಿಳಿಸಿದ ಹಣ್ಣು ತರಕಾರಿ ನಿಯಮಿತವಾಗಿ ಬಳಸುತ್ತಾ ಹೋದರೆ ಸಾಕು, ನಮಗೆ ಪ್ರತಿದಿನ ಅವಶ್ಯವಿರುವ ಸಿ ವಿಟಾಮಿನ್ ಅನ್ನು ಅವು ಒದಗಿಸುತ್ತವೆ. ತುಂಬಾ ಜನ ಹಣ್ಣು ತರಕಾರಿ ತಿನ್ನಲು ಹಿಂದೇಟು ಹಾಕುತ್ತಾರೆ, ಅಂಥವರು ಆಸ್ಪತ್ರೆಗೆ ಅಲೆದಾಡಬೇಕಾಗಬಹುದು.
-ಮಂಜುನಾಥ್