VIDEO : ಆ ಮಹಾಸಾಗರದ ಮೇಲೆ ವಿಮಾನಗಳು ಹಾರುವುದಿಲ್ಲ, ಯಾಕೆ?
ವಿಮಾನಗಳು ಯಾವಾಗಲೂ ಮನುಷ್ಯನನ್ನು ವಿಸ್ಮಯಕ್ಕೆ ದೂಡುತ್ತವೆ. ಆಕಾಶದಲ್ಲಿ ಹಾರುವ ಅಲ್ಯೂಮಿನಿಯಂ ಹಕ್ಕಿಗೆ ಸಂಬಂಧಿಸಿದ ಅನೇಕ ಅದ್ಭುತ ವಿಷಯಗಳಿವೆ. ಮೊದಲು ವಿಮಾನ ಕಂಡುಹಿಡಿದಾಗ ನಿಜಕ್ಕೂ ಮನುಷ್ಯ ಆಕಾಶದಲ್ಲಿ ಹಕ್ಕಿಯ ಹಾಗೆ ಹಾರಾಡುತ್ತಾನಾ ಎಂಬ ಸಂಶಯ ಮೂಡಿದ್ದು ಸುಳ್ಳಲ್ಲ. ಬರಬರುತ್ತಾ ಆಧುನಿಕ ಜಗತ್ತು ಎಷ್ಟು ಮುಂದುವರೆಯಿತೆಂದರೆ, ಗಾಳಿಯ ವೇಗವನ್ನೇ ಮೀರಿಸುವ ಸೂಪರ್ ಸಾನಿಕ್ ವಿಮಾನಳು ಕೂಡ ಹಾರತೊಡಗಿದವು
ದೇಶ -ವಿದೇಶ ಹಾಗೂ ಖಂಡದಿಂದ ಖಂಡಗಳನ್ನು ನಿರಾಯಾಸವಾಗಿ ಕ್ರಮಿಸಿಬಿಡುವ ವಿಮಾನಗಳು ನಿಜಕ್ಕೂ ಮಾನವನ ಒಂದು ಅದ್ಭುತ ಸಂಶೋಧನೆ. ನೂರಾರು – ಸಾವಿರಾರು ಕಿ.ಮೀ ಗಳಷ್ಟು ದೂರವನ್ನು ವಿಮಾನಗಳು ಕೆಲವೇ ಗಂಟೆಗಳಲ್ಲಿ ಕ್ರಮಿಸಿಬಿಡುತ್ತವೆ. ಇವು ಆಧುನಿಕ ಜಗತ್ತಿನ ವೇಗಕ್ಕೆ ಬೇಕೇಬೇಕಾದ ಅತಿ ಮುಖ್ಯ ಸಾರಿಗೆಯಾಗಿ ಮಾರ್ಪಟ್ಟಿತು.
ಹಕ್ಕಿಯ ಹಾಗೆ ಸ್ವಚ್ಚಂದವಾಗಿ ಆಕಾಶದಲ್ಲಿ ವಿಮಾನಗಳು ಹಾರಾಡುತ್ತವೇನೋ ನಿಜ, ಆದರೆ, ವಿಶ್ವದ ಮೂಲೆ ಮೂಲೆಗಳಲ್ಲಿ ಎಲ್ಲ ಕಡೆ ಹಾರುವ ವಿಮಾನಗಳು ಕೆಲವು ಕಡೆ ಮಾತ್ರ ಹಾರಲಾರವು. ಕೆಲವು ಕಡೆ ಆಯಾ ದೇಶದ ಆಡಳಿತ ಹಾರಲು ಬಿಡದಿದ್ದರೆ, ಇನ್ನು ಕೆಲವು ಕಡೆ ನಿಸರ್ಗವೇ ಅವುಗಳನ್ನು ಹಾರದಂತೆ ಮಾಡುತ್ತದೆ.

ಕೆಲವು ದೇಶಗಳು ತಮಗೆ ಆಗಿಬರದ ದೇಶಗಳ ವಿಮಾನಗಳು ತಮ್ಮ ದೇಶದ ನೆತ್ತಿಯ ಹಾರಲು ಅನುಮತಿ ಕೊಡುವುದಿಲ್ಲ. ಉದಾಹರಣೆಗೆ : ಭಾರತದ ವಿಮಾನಗಳನ್ನು ಪಾಕಿಸ್ತಾನವು ತನ್ನ ವಾಯುಪ್ರದೇಶದಲ್ಲಿ ಹಾರಲು ಅನುಮತಿಸುವುದಿಲ್ಲ. ಹಾಗೆಯೇ ಅಮೇರಿಕಾ ಮತ್ತು ಜಪಾನಿನ ವಿಮಾನಗಳನ್ನು ಉತ್ತರ ಕೋರಿಯಾ ತನ್ನ ಸರಹದ್ದಿನೊಳಗೆ ಬಿಟ್ಟುಕೊಳ್ಳುವುದಿಲ್ಲ.
ಅವುಗಳಿಂದ ತನ್ನ ದೇಶಕ್ಕೆ ಅಪಾಯ ಒದಗಬಹುದು ಎಂಬುದು ಅವುಗಳ ಭಯ. ಇನ್ನು ಹಲವು ರಾಷ್ಟ್ರಗಳ ಅಧ್ಯಕ್ಷರು ಮತ್ತು ಪ್ರಧಾನಿಗಳ ನಿವಾಸದ ಮೇಲೆ ಕೂಡ ವಿಮಾನಗಳು ಹಾರಲು ನಿಷೇಧವಿರುತ್ತದೆ. ಇನ್ನು ನಿಸರ್ಗದತ್ತವಾಗಿ ಕೂಡ ಕೆಲವು ಕಡೆ ವಿಮಾನ ಹಾರಲಾರವು, ಉದಾಹರಣೆಗೆ ಮೌಂಟ್ ಎವರೆಸ್ಟ್ ಮೇಲಿಂದ ವಿಮಾನ ಹಾರಲು ಪರದಾಡುತ್ತವೆ.

ಮೌಂಟ್ ಎವರೆಸ್ಟ್ ಎತ್ತರ ಅವುಗಳಿಗೆ ನುಂಗಲಾರದ ತುತ್ತು, ಅದೇ ರೀತಿ ಟಿಬೇಟ್ ಮೇಲಿಂದ ಕೂಡ ವಿಮಾಗಳು ಹಾರಲಾರವು, ಅದಕ್ಕೂ ಕೂಡ ನೈಸರ್ಗಿಕ ಕಾರಣವೇ ಇದೆ. ಇದೇ ರೀತಿ ಬರ್ಮುಡಾ ಟ್ರಯಾಂಗಲ್, ಡೆವಿಲ್ಸ್ ಟ್ರಯಾಂಗಲ್ ಮೇಲೆ ಕೂಡ ವಿಮಾನ ಹಾರಲಾರವು. ಹಾಗೆಯೇ ವಿಮಾಗಳು ಆ ಒಂದು ಸಾಗರದ ಮೇಲೆ ಹಾರಲು ಇಷ್ಟಪಡುವುದಿಲ್ಲ ಅಥವಾ ಅವು ಅಲ್ಲಿ ಹಾರಲಾರವು, ಆ ಮಹಾಸಾಗರವೇ ಪೆಸಿಫಿಕ್ ಮಹಾಸಾಗರ.
ಹಾಗಂದ ಮಾತ್ರಕ್ಕೆ ಅಲ್ಲೇನೋ ಘಟಿಸಬಾರದ ಘಟನೆಗಳು ಘಟಿಸುತ್ತವೆ ಅಂತಾನೋ ಅಥವಾ ದೇವ್ವ ಭೂತದ ಕಾಟಾನೋ ಅಥವಾ ಏಲಿಯನ್ಸ್ ಕಾಟಾನೋ ಅಂತಲ್ಲ. ಪೆಸಿಫಿಕ್ ಮಹಾಸಾಗರದ ಮೇಲೆ ಹಾರಾಟ ಮಾಡದಿರಲು ನಿರ್ದಿಷ್ಟ ಕಾರಣವಿದೆ. ಎತ್ತರದ ಪ್ರದೇಶದ ಮೇಲೆ ಹಾರಲು ಭಯ, ಓಕೆ. ಆದರೆ ಸಾಗರದ ಮೇಲೆ ಹಾರಲು ಭಯ ಯಾಕೆ? ವಿಮಾನಗಳು ಆ ಶಾರ್ಟ್ ಕಟ್ ದಾರಿ ಬಿಟ್ಟು ಸುತ್ತಿ ಬಳಸಿ ಹೋಗುವುದೇಕೆ?
ಇತ್ಯಾದಿ ಮಾಹಿತಿಯನ್ನು ಈ ಮೇಲಿನ ವಿಡಿಯೊದಲ್ಲಿ ನೀವು ನೋಡಬಹುದು. ಕನ್ನಡ ಯೂಟ್ಯೂಬ್ ಚಾನೆಲ್ ಮಿಡಿಯಾ ಮಾಸ್ಟರ್ ನವರ ಈ ವಿಡಿಯೊದಲ್ಲಿ ಆ ಬಗ್ಗೆ ಅಚ್ಚುಕಟ್ಟಾದ ವಿವರ ನೀಡಲಾಗಿದೆ. ಆಸಕ್ತರು ನೋಡಿ…
-Team Infotrend