ತಗೊಳಿ ಮತ್ತೊಂದು ಔಷಧ ಕಂಡುಹಿಡಿದರು : ಸ್ಪಟಿಕದ ನೀರು ಕುಡಿದರೆ ಕೊರೋನ ಬರಲ್ವಂತೆ! ಸತ್ಯ ಏನ್ ಗೊತ್ತಾ?
ಕರೋನಾ ವೈರಸ್ ನ ಎರಡನೇ ಅಲೆಯು ದೇಶದಲ್ಲಿ ಅಪಾಯಕಾರಿ ರೂಪವನ್ನು ಪಡೆದುಕೊಂಡಿದೆ. ಹೆಚ್ಚುತ್ತಿರುವ ಸೋಂಕಿನಿಂದಾಗಿ ಜನರಲ್ಲಿ ಭಯದ ವಾತಾವರಣ ಇದೆ. ದೇಶದ ಪ್ರತಿಯೊಂದು ರಾಜ್ಯದ ಪರಿಸ್ಥಿತಿ ಭೀಕರವಾಗಿ ಇದೆ. ಪ್ರತಿದಿನ ಲಕ್ಷಾಂತರ ಪಾಸಿಟಿವ್ ಪ್ರಕರಣಗಳು ಬರುತ್ತಿವೆ. ಕರೋನಾ ವೈರಸ್ ನಿಂದ ರಕ್ಷಿಸಿಕೊಳ್ಳಲು ಜನರು ವಿವಿಧ ಮನೆಮದ್ದುಗಳನ್ನು ಸಹ ಅಳವಡಿಸಿಕೊಳ್ಳುತ್ತಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವಿವಿಧ ರೀತಿಯ ಮನೆಮದ್ದುಗಳು ವೈರಲ್ ಆಗುತ್ತಿವೆ. ಅದರಂತೆ ಸ್ಪಟಿಕದ ನೀರನ್ನು ಸೇವಿಸುವುದರಿಂದ ಕರೋನಾ ಸೋಂಕನ್ನು ತಪ್ಪಿಸಬಹುದು ಎಂದು ಹೇಳುವ ವೀಡಿಯೊ ಈ ದಿನಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ ಏನಿದೆ ಅಂತ ನೋಡುವುದಾದರೆ…
ಸ್ಪಟಿಕದ ನೀರನ್ನು ಸೇವಿಸುವುದರಿಂದ ಕರೋನಾ ವೈರಸ್ ಸೋಂಕನ್ನು ತಡೆಯಬಹುದು ಮತ್ತು ಇದು ಸೋಂಕಿತ ವ್ಯಕ್ತಿಯನ್ನು ಆರೋಗ್ಯವಾಗಿಸುತ್ತದೆ ಎಂದು ಹೇಳಲಾಗುತ್ತಿದೆ. ವೈರಲ್ ವೀಡಿಯೊದಲ್ಲಿ ವ್ಯಕ್ತಿಯು ಆಹಾರವನ್ನು ತೆಗೆದುಕೊಂಡ ನಂತರ ಅರ್ಧ ಗ್ಲಾಸ್ ನೀರಿನಲ್ಲಿ ಸ್ಪಟಿಕವನ್ನು ಕರಗಿಸಿ ಆ ನೀರಿನಿಂದ ಮುಕ್ಕಳಿಸಿದರೆ ಕರೋನಾ ವೈರಸ್ ದೇಹವನ್ನು ಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾನೆ.
ವೈರಲ್ ಪೋಸ್ಟ್ ನಲ್ಲಿ, ಈ ಪ್ರಿಸ್ಕ್ರಿಪ್ಷನ್ ಅನ್ನು ಅಳವಡಿಸಿಕೊಳ್ಳುವ ಮೂಲಕ ಸೋಂಕಿತ ವ್ಯಕ್ತಿಯು ಸಹ ಆರೋಗ್ಯವಾಗಬಹುದು ಎಂದು ವ್ಯಕ್ತಿಯು ಹೇಳಿಕೊಳ್ಳುತ್ತಿದ್ದಾನೆ. ಆದರೆ ಫ್ಯಾಕ್ಟ್ ಚೆಕ್ ನಡೆಸಿದ ತನಿಖೆಯಲ್ಲಿ ಈ ವಿಡಿಯೋ ನಕಲಿ ಎಂದು ಸಾಬೀತಾಗಿದೆ. ಸ್ಪಟಿಕದ ನೀರಿನ ಬಗೆಗಿನ ಈ ಸುದ್ದಿ ಸಂಪೂರ್ಣ ಸುಳ್ಳು ಎನ್ನಲಾಗಿದೆ. ಸ್ಪಟಿಕ ನೀರನ್ನು ಗಾರ್ಗಲ್ ಮಾಡುವುದರಿಂದ ಕರೋನಾ ಸೋಂಕನ್ನು ನಿರ್ಮೂಲನೆ ಮಾಡಬಹುದು ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.

ಸ್ಪಟಿಕದ ನೀರನ್ನು ಸೇವಿಸುವುದರಿಂದ ಕೋವಿಡ್ 19 ಅನ್ನು ತಡೆಯಬಹುದು ಮತ್ತು ಸೋಂಕಿತ ವ್ಯಕ್ತಿಯನ್ನು ಆರೋಗ್ಯವಂತನನ್ನಾಗಿ ಮಾಡಬಹುದು ಎಂದು ವೀಡಿಯೊ ಹೇಳುತ್ತದೆ. ಆದರೆ ಇದು ಸಂಪೂರ್ಣ ಸುಳ್ಳು. ಸೋಂಕಿಗೆ ಒಳಗಾಗಿದ್ದರೆ ಸರಿಯಾದ ಚಿಕಿತ್ಸೆಗಾಗಿ ವೈದ್ಯರನ್ನು ಸಂಪರ್ಕಿಸಲು ಮರೆಯದಿರಿ.
ಸ್ಪಟಿಕದ ನೀರಿನ ಸೇವನೆಯಿಂದ ಕರೋನಾ ಸೋಂಕನ್ನು ಹೋಗಲಾಡಿಸುವ ಬಗ್ಗೆ ಯಾವುದೇ ಆರೋಗ್ಯ ತಜ್ಞರು ದೃಢೀಕರಿಸಿಲ್ಲ. ಕೋವಿಡ್-19 ನಿಂದ ನಮ್ಮನ್ನು ರಕ್ಷಿಸಿಕೊಳ್ಳುವಾಗ ನಾವು ನಕಲಿ ಸುದ್ದಿಗಳಿಂದ ಸುರಕ್ಷಿತವಾಗಿರಬೇಕು. ಕರೋನಾ ವೈರಸ್ಗೆ ಸಂಬಂಧಿಸಿದ ಯಾವುದೇ ಸುದ್ದಿಯನ್ನು ನೀವು ನಂಬುವ ಮೊದಲು ಅದನ್ನು ಕೂಲಂಕಷವಾಗಿ ಪರಿಸೀಲಿಸಬೇಕು.
-Team Infotrend