ಅನುಶ್ರೀ ಆಸ್ತಿಯ ವಿಷಯ ಕೆದಕಿದ ಪ್ರಶಾಂತ್ ಸಂಬರ್ಗಿ: ಕೋಟಿ ಕೋಟಿ ಬೆಲೆ ಬಾಳುವ ಮನೆಗಳು ಬಂದಿದ್ದು ಎಲ್ಲಿಂದ??
ಸ್ಯಾಂಡಲ್ವುಡ್ ನ ಡ್ರ ಗ್ಸ್ ಪ್ರಕರಣದ ಘಾಟು ಇಂದು ಮತ್ತೆ ಮುನ್ನೆಲೆಗೆ ಬಂದಿದೆ. ಹೌದು ಇಂದು ಬೆಳಿಗ್ಗೆಯಷ್ಟೇ ಮಾದ್ಯಮಗಳು ಸಿಸಿಬಿ ಸಲ್ಲಿಸಿದೆ ಎನ್ನಲಾದ ಚಾರ್ಜ್ ಶೀಟ್ ನ ಮಾಹಿತಿಗಳನ್ನು ಬಹಿರಂಗ ಮಾಡುವ ಮೂಲಕ, ಕನ್ನಡ ಕಿರುತೆರೆಯ ಲೋಕದ ಸ್ಟಾರ್ ಆ್ಯಂಕರ್ ಅನುಶ್ರೀ ಅವರ ಹೆಸರು ಮತ್ತೊಮ್ಮೆ ಮುನ್ನೆಲೆಗೆ ಬರುವ ಮೂಲಕ ದೊಡ್ಡ ಸಂಚಲನವನ್ನು ಸೃಷ್ಟಿಸಿದೆ. ಹೌದು ಮಾದ್ಯಮಗಳು ಬಹಿರಂಗ ಪಡಿಸಿದ ಮಾಹಿತಿ ಗಳಲ್ಲಿ ಅನುಶ್ರೀ ಅವರು ಡ್ರ ಗ್ಸ್ ಬಳಸುತ್ತಿದ್ದರು, ಸಾಗಣೆ ಮಾಡುತ್ತಿದ್ದರು, ಅವರಿಗೆ ಅದು ಎಲ್ಲಿ ಸಿಗುವುದು ಎನ್ನುವ ಮಾಹಿತಿಗಳು ಗೊತ್ತಿತ್ತು ಎಂದು ಆ ರೋ ಪಿ ಗಳಲ್ಲಿ ಒಬ್ಬನಾದ ಕಿಶೋರ್ ಶೆಟ್ಟಿ ಹೇಳಿಕೆ ನೀಡಿರುವ ವಿಚಾರಗಳನ್ನು ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಲಾಗಿದೆ ಎನ್ನುವ ಸುದ್ದಿಗಳನ್ನು ಮಾಡಿದ್ದವು.

ಅನುಶ್ರೀ ಅವರ ಹೆಸರು ಮಾದ್ಯಮಗಳಲ್ಲಿ ಸದ್ದು ಮಾಡಿದ ಕೂಡಲೇ ಈ ಹಿಂದೆಯೂ ಈ ಪ್ರಕರಣದ ವಿಚಾರವಾಗಿ ಹೇಳಿಕೆಗಳನ್ನು ನೀಡಿ ಸಂಚಲನ ಹುಟ್ಟು ಹಾಕಿದ್ದ, ಸಾಮಾಜಿಕ ಕಾರ್ಯಕರ್ತ, ಬಿಗ್ ಬಾಸ್ ಖ್ಯಾತಿಯ ಪ್ರಶಾಂತ್ ಸಂಬರ್ಗಿ ಅವರು ಸುದ್ದಿಗೋಷ್ಠಿಯೊಂದನ್ನು ನಡೆಸಿ ಸಾಕಷ್ಟು ವಿಚಾರಗಳನ್ನು ಮಾತನಾಡುತ್ತಾ, ಅನುಶ್ರೀ ಅವರ ಆಸ್ತಿಯ ವಿಚಾರವನ್ನು ಕೆದಕಿದ್ದಾರೆ. ಹೌದು ಪ್ರಶಾಂತ್ ಸಂಬರ್ಗಿ ಅನುಶ್ರೀ ಜೈಲಿಗೆ ಹೋಗೋದು ಗ್ಯಾರಂಟಿ, ಶೀಘ್ರದಲ್ಲೇ ಆಡಿಯೋ ಒಂದನ್ನು ಬಿಡುಗಡೆ ಮಾಡೋದಾಗಿ ಹೇಳುತ್ತಾ, ತಾನು ಈ ಹಿಂದೆ ಅನುಶ್ರೀ ಗೆ ಸಹಾಯ ಮಾಡುತ್ತಿರುವ ಶುಗರ್ ಡಾಡಿ ವಿಷಯವನ್ನು ಸಹಾ ಪ್ರಸ್ತಾಪಿಸಿದ್ದಾರೆ.

ಪ್ರಶಾಂತ್ ಸಂಬರ್ಗಿ ಮಾತನಾಡುತ್ತಾ ಅನುಶ್ರೀ ಅವರು ಮಂಗಳೂರಿನಲ್ಲಿ 12 ಕೋಟಿಯ ಮನೆಯನ್ನು ನಿರ್ಮಾಣ ಮಾಡಿಸಿದ್ದಾರೆ. ಬೆಂಗಳೂರಿನಲ್ಲಿ ನಾಲ್ಕು ಕೋಟಿಯ ಮನೆಯಿದೆ. ಇದೆಲ್ಲಾ ಅವರಿಗೆ ಟಿವಿ ಸಂಪಾದನೆಯಿಂದಲೇ ಬಂದಿದ್ದರೆ ಒಳ್ಳೆಯದು, ಇದು ಇನ್ನೂ ಅನೇಕರಿಗೆ ಸ್ಪೂರ್ತಿ ಆಗುತ್ತದೆ ಎಂದಿದ್ದರು. ಅಲ್ಲದೇ ಅನುಶ್ರೀ ಅವರು ಕೆಲವು ದಿನಗಳ ಹಿಂದೆ ನನ್ನನ್ನು ಸ್ತ್ರೀ ವಿರೋಧಿ ಎಂದು ಬಿಂಬಿಸುವ ಪ್ರಯತ್ನವನ್ನು ಮಾಡಿದ್ದರು ಎಂದು ಹೇಳಿದ್ದಾರೆ. ಅವರು ಕಾನೂನು ಬಾಹಿರ ಚಟುವಟಿಕೆ ಮಾಡಿದ್ದಾರೆ ಎಂದು ಪ್ರಶಾಂತ್ ಸಂಬರ್ಗಿ ಅಸಮಾಧಾನ ಹೊರ ಹಾಕಿದ್ದಾರೆ.