ಇಂಡಿಯನ್ ವಾರೆನ್ ಬಫೆಟ್, ಬಿಗ್ ಬುಲ್, ರಾಕೇಶ್ ಜಂಜುನ್ ವಾಲಾ ತಮ್ಮ ಕುಟುಂಬಕ್ಕೆ ಬಿಟ್ಟು ಹೋದ ಸಂಪತ್ತು ಎಷ್ಟು?

ಭಾರತದ ಶೇರ್ ಮಾರ್ಕೆಟ್ ಜ್ಞಾನಿ ಮತ್ತು ದಿಗ್ಗಜ ಉದ್ಯಮಿ ರಾಕೇಶ್ ಜುಂಜುನ್ ವಾಲಾ ತಮ್ಮ 62ನೇ ವಯಸ್ಸಿನಲ್ಲಿ ಈ ಲೋಕವನ್ನು ತ್ಯಜಿಸಿ ಹೋದರು. ಅವರು ಮುಂಬೈಯ ಬ್ರಿಜ್ ಕ್ಯಾಂಡಿ ಹಾಸ್ಪಿಟಲ್ ನಲ್ಲಿ ಕೊನೆಯ ಉಸಿರು ಎಳೆದರು. ಅವರಿಗೆ ಗುರುತಿಸುವ ಜನರು ಅವರ ನಿಧನದ ವಾರ್ತೆಯನ್ನು ಕೇಳಿ ಆಶ್ಚರ್ಯವನ್ನು ವ್ಯಕ್ತ ಮಾಡಿದರು. ಇವರು ಶೇರ್ ಮಾರ್ಕೆಟ್ ನಲ್ಲಿ ಹಣ ಹೂಡಿಕೆ ಮಾಡಿ ಗಳಿಸಿದ ಸಂಪತ್ತು ಇಲ್ಲಿಯವರೆಗೆ ಎಲ್ಲ ದಾಖಲೆಗಳನ್ನು ಮುರಿದಿದೆ.

ರಾಕೇಶ್ ಅವರು ಕೇವಲ ಐದೇ 5 ಸಾವಿರ ರೂಪಾಯಿಗಳಿಂದ ಶೇರ್ ಮಾರ್ಕೆಟ್ ನಲ್ಲಿ ತಮ್ಮ ಹೂಡಿಕೆ ಪ್ರಾರಂಭಿಸಿದ್ದರು. ತದನಂತರ ರಾಕೇಶ್ ಅವರು ಸಾವಿರಾರು ಕೋಟಿ ರೂಪಾಯಿಗಳ ಮಾಲೀಕರಾಗಿ ಹೊರಹೊಮ್ಮಿದರು. ಶೇರ್ ಮಾರ್ಕೆಟ್ ನಲ್ಲಿ ಹಣ ಹೂಡಿಕೆ ಮಾಡಿದ ನಂತರ ರಾಕೇಶ್ ಅವರು ಏರ್ಲೈನ್ಸ್ ಕಂಪನಿಯ ಬ್ಯುಸಿನೆಸ್ ನಲ್ಲಿ ಇಳಿದರು. ಇವರು ಅನೇಕ ಏರ್ಲೈನ್ ಕಂಪನಿಗಳಲ್ಲಿ ಇನ್ವೆಸ್ಟ್ಮೆಂಟ್ ಮಾಡಿದ್ದಾರೆ.

ಆಕಾಸಾ ಏರ್ ಲೈನ್ಸ್ ತನ್ನ ಮೊದಲ ಫ್ಲೈಟ್ ಮುಂಬೈಯಿಂದ ಅಹಮದಾಬಾದ್ ಗೆ ಹಾರಿತ್ತು. ಇವರು ಅನೇಕ ರೂಟ್ಗಳಲ್ಲಿ ತಮ್ಮ ಸರ್ವಿಸ್ ನೀಡಿದ್ದಾರೆ. ಆಕಾಸಾ ಏರ್ ಲೈನ್ನಲ್ಲಿ ದೊಡ್ಡ ಹೂಡಿಕೆ ರಾಕೇಶ್ ಮತ್ತು ಅವರ ಪತ್ನಿಯಾದ ರೇಖಾ ಅವರದ್ದಾಗಿದೆ.

ರಾಕೇಶ್ ಜುಂಜುನ್ ವಾಲಾ ಅವರ ಮುಖ್ಯ ಗಳಿಕೆ ಶೇರ್ ಮಾರ್ಕೆಟ್ ನಿಂದ ಆಗಿದೆ. ಇವರ ನೆಟ್ ವರ್ಥ ಸುಮಾರು 43 ಸಾವಿರ ಕೋಟಿ ರೂಪಾಯಿಗಳಷ್ಟಿದೆ. ರಾಕೇಶ್ ಅವರ ಸಂಪತ್ತು 9 ವರ್ಷಗಳಲ್ಲಿ 4 ಪಟ್ಟು ಹೆಚ್ಚಿದೆ. ಇವರು ಟೈಟನ್, ಸ್ಟಾರ್ ಹೆಲ್ತ್, ಮೆಟ್ರೋಬ್ರಾಡ್, ಟಾಟಾ ಮೋಟರ್ಸ ಮತ್ತು ಕ್ರಿಸಿಲ್ ಇನ್ ಕಂಪನಿಗಳಲ್ಲಿ ಅತೀ ಹೆಚ್ಚು ಹಣ ಹೂಡಿಕೆ ಮಾಡಿದ್ದಾರೆ.