ಬಾಲಿವುಡ್ ನಲ್ಲಿ ಸೂಪರ್ ಸ್ಟಾರ್ ಎನಿಸಿಕೊಂಡಿರುವ ನಟ ಸಲ್ಮಾನ್ ಖಾನ್ ಅವರು ತಮ್ಮ ಮುಂಬರುವ ಚಿತ್ರ ಟೈಗರ್ ತ್ರೀ ಗಾಗಿ ಜಿಮ್ ನಲ್ಲಿ ಸಿಕ್ಕಾಪಟ್ಟೆ ಬೆವರು ಹರಿಸಿ ತಮ್ಮ ದೇಹವನ್ನು ಹುರಿಗೊಳಿಸುವ ಕಡೆಗೆ ಹೆಚ್ಚಿನ ಗಮನವನ್ನು ನೀಡಿದ್ದಾರೆ. ಇನ್ನೊಂದು ಕಡೆ ಅವರ ಸಹೋದರ ಅರ್ಬಾಜ್ ಖಾನ್ ತಮ್ಮ ಟಾಕ್ ಶೋ ಪಿಂಚ್ ಟು ನ ಪ್ರೇಮೀಯರ್ ಎಪಿಸೋಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದ ಫಾರ್ಮೆಟ್ ನ ಪ್ರಕಾರ ಅರ್ಬಾಜ್ ಖಾನ್ ಸೋಶಿಯಲ್ ಮೀಡಿಯಾ ಗಳಲ್ಲಿ ಮಾಡಲಾಗದಂತಹ ಟ್ವೀಟುಗಳ ಆಧಾರದಲ್ಲಿ ಕಾರ್ಯಕ್ರಮದ ಅತಿಥಿಗಳಿಗೆ ಪ್ರಶ್ನೆಗಳನ್ನು ಕೇಳುತ್ತಾರೆ. ಇಂತಹದೇ ಒಂದು ಪ್ರಯತ್ನವನ್ನು ಅರ್ಬಾಜ್ ಖಾನ್ ತಮ್ಮ ಸಹೋದರ ಸಲ್ಮಾನ್ ಖಾನ್ ಅವರ ಜೊತೆಯಲ್ಲಿ ಕೂಡಾ ಮಾಡಿದ್ದಾರೆ. ನೆಟ್ಟಿಗರೊಬ್ಬರು ಟ್ವೀಟ್ ಮಾಡಿ, ಸಲ್ಮಾನ್ ಖಾನ್ ರವರಿಗೆ ದುಬೈನಲ್ಲಿ ಪತ್ನಿಯದ್ದು, ಅವರಿಗೆ 17 ವರ್ಷದ ಮಗಳು ಕೂಡಾ ಇದ್ದಾಳೆ ಎನ್ನುವ ವಾದವನ್ನು ಮಾಡುತ್ತಾ ಟ್ವೀಟ್ ಮಾಡಿದ್ದಾರೆ.
ಪಿಂಚ್ ಟು ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ನಟ ಸಲ್ಮಾನ್ ಖಾನ್ ನೆಟ್ಟಿಗರು ಮಾಡಿದ ಆರೋಪಕ್ಕೆ ತನ್ನದೇ ಆದ ರೀತಿಯಲ್ಲಿ ಆಸಕ್ತಿಕರವಾದ ಉತ್ತರವನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಅರ್ಬಾಜ್ ಖಾನ್ ಅವರು ಮಾತನಾಡುತ್ತಾ ಶೋ ಗಾಗಿ ಬರುವಂತಹ ಬಹುತೇಕ ಕಾಮೆಂಟ್ ಗಳು ಪಾಸಿಟಿವ್ ಹಾಗೂ ಒಳ್ಳೆಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಆದರೆ ಕೆಲವೊಮ್ಮೆ ಇಂತಹ ವಿಚಾರಗಳನ್ನು ಕೆಲವರು ಟ್ವೀಟ್ ಮಾಡುತ್ತಾರೆ ಎಂದಿದ್ದಾರೆ. ಅಂತಹದೇ ಒಂದು ಟ್ವೀಟ್ ಮಾಡಿದ ಟ್ವಿಟರ್ ಬಳಕೆದಾರರು ತಮ್ಮ ಟ್ವೀಟ್ ನಲ್ಲಿ, “ನಟ ಸಲ್ಮಾನ್ ಖಾನ್ ರಹಸ್ಯವಾಗಿ ದುಬೈನಲ್ಲಿ ಮದುವೆಯಾಗಿದ್ದಾರೆ. ಅವರ ಪತ್ನಿ ದುಬೈನಲ್ಲಿದ್ದು ಅವರಿಗೆ 17 ವರ್ಷ ವಯಸ್ಸಿನ ಮಗಳು ಇದ್ದಾಳೆ ಎಂದಿದ್ದಾರೆ”
ಅಲ್ಲದೇ ಆ ಹೇಡಿ ಎಲ್ಲಿ ಅಡಗಿದ್ದಾನೆ, ಆತನ ಪತ್ನಿ ನೂರ್ ಮತ್ತು ಮಗಳು ದುಬೈನಲ್ಲಿರುವ ವಿಷಯ ಬಹಳಷ್ಟು ಜನರಿಗೆ ಗೊತ್ತಿದೆ. ಭಾರತದ ಜನರನ್ನು ಎಲ್ಲಿಯವರೆಗೆ ಮೂರ್ಖರನ್ನಾಗಿ ಮಾಡುವೆ? ಎಂದು ಪ್ರಶ್ನೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಅರ್ಬಾಜ್ ಟ್ವೀಟ್ ಬಗ್ಗೆ ಹೇಳಿದಾಗ, ಅದನ್ನು ಕೇಳಿ ಸಲ್ಮಾನ್ ಖಾನ್ ಅವಾಕ್ಕಾಗಿದ್ದಾರೆ. ಈ ವಿಚಾರ ಯಾರ ಬಗ್ಗೆ ಕೇಳಿರುವುದು ಎಂದು ಪ್ರಶ್ನೆ ಮಾಡಿದ್ದಾರೆ. ಅರ್ಬಾಜ್ ಅದು ನಿಮ್ಮ ಕುರಿತಾಗಿಯೇ ಹೇಳಿರುವ ವಿಚಾರ ಎಂದು ಸ್ಪಷ್ಟನೆ ನೀಡಿದ್ದಾರೆ. ಆಗ ಸಲ್ಮಾನ್ ಖಾನ್ ಉತ್ತರ ನೀಡುತ್ತಾ ಇವರ ಬಳಿ ಬಹಳಷ್ಟು ಮಾಹಿತಿ ಇದ್ದಹಾಗಿದೆ ಇವೆಲ್ಲಾ ಕೂಡ ಸುಳ್ಳು ಸುದ್ದಿಗಳು ಅವರು ನಿಜಕ್ಕೂ ಯಾರ ಬಗ್ಗೆ ಮಾತನಾಡುತ್ತಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ. ಏತಕ್ಕಾಗಿ ಇಂತಹ ಪೋಸ್ಟ್ ಮಾಡಿದರೋ ಗೊತ್ತಿಲ್ಲ.
ನಾನು ಇದಕ್ಕೆ ಏನು ಹೇಳುವುದಿಲ್ಲ ಎಂದು ಆ ವ್ಯಕ್ತಿ ಅಂದುಕೊಂಡಿದ್ದಾರೆಯೇ?? ಎಂದು ಪ್ರಶ್ನೆ ಮಾಡಿದ್ದಾರೆ. ಮಾತು ಮುಂದುವರಿಸಿದ ಸಲ್ಮಾನ್ ಖಾನ್, “ಸಹೋದರ ನನಗೆ ಯಾವ ಹೆಂಡತಿಯೂ ಇಲ್ಲ, ನಾನು ಭಾರತದಲ್ಲಿ ವಾಸಿಸುತ್ತಿದ್ದೇನೆ. ಒಂಬತ್ತು ವರ್ಷ ವಯಸ್ಸಾಗಿದ್ದಾಗನಿಂದಲೂ ಮುಂಬೈನ ಗ್ಯಾಲಕ್ಸಿ ಅಪಾರ್ಟ್ಮೆಂಟ್ ನಲ್ಲಿ ವಾಸಿಸುತ್ತಿದ್ದೇನೆ. ಈ ವ್ಯಕ್ತಿಯು ಹೇಳಿರುವ ವಿಚಾರಕ್ಕೆ ನಾನು ವಾದ ಮಾಡಲು ಇಷ್ಟಪಡುವುದಿಲ್ಲ. ಇಡೀ ಭಾರತದ ಜನರಿಗೆ ನಾನು ಎಲ್ಲಿ ವಾಸ ಮಾಡುತ್ತಿದ್ದೇನೆ ಎನ್ನುವುದು ತಿಳಿದಿದೆ” ಎಂದು ಹೇಳಿದ್ದಾರೆ.
ಇನ್ನು ಇದೇ ಸಂಚಿಕೆಯಲ್ಲಿ ಅರ್ಬಾಜ್ ಮತ್ತೊಂದು ಟ್ವಿಟರ್ ಬಗ್ಗೆ ಹೇಳುತ್ತಾ, ಸಲ್ಮಾನ್ ಖಾನ್ ಅವರ ಮನೆ ಆಡಂಬರ ಹಾಗೂ ಎಗ್ಗಿಲ್ಲದೆ ಖರ್ಚು ಮಾಡುವ ಸ್ಥಳ ಎಂದು ಹೇಳಿದ್ದಾರೆ ಎನ್ನುವ ವಿಚಾರ ಹೇಳಿದಾಗ,
ಇದಕ್ಕೆ ಉತ್ತರಿಸಿದ ಸಲ್ಮಾನ್ ಖಾನ್, ನನ್ನ ಮನೆಯಲ್ಲಿ ಅಂತಹ ಯಾವ ಚಟುವಟಿಕೆಗಳನ್ನು ನೀವು ನೋಡಿ ಇಂತಹ ಮಾತನ್ನು ಆಡಿದ್ದೀರಿ ಎಂದು ಕೇಳಿದ್ದಾರೆ. ಅರ್ಬಾಜ್ ನಡೆಸಿಕೊಡುತ್ತಿರುವ ಪಿಂಚ್ ಟು ಶೋ ನ ಎರಡನೇ ಆವೃತ್ತಿ ಬಹಳ ಜೋರಾಗಿ ಆರಂಭವಾಗಿದ್ದು, ಆದರೆ ಪ್ರೋಮೋಗಳು ಸದ್ದು ಮಾಡಿದೆ. ಈ ಬಾರಿ ಬಾಲಿವುಡ್ ನ ಬಹಳ ಸುಪ್ರಸಿದ್ದ ನಟ ನಟಿಯರು ಅತಿಥಿಗಳಾಗಿ ಆಗಮಿಸಲಿದ್ದಾರೆ ಎನ್ನಲಾಗಿದೆ. ಇನ್ನು ಅವರಿಗೆ ಯಾವ ರೀತಿಯ ಪ್ರಶ್ನೆಗಳು ಎದುರಾಗುತ್ತವೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
