Articles

Video: ಮೆಕ್ಕಾಗೆ ಕೇಸರಿ ಬಟ್ಟೆ ತೊಟ್ಟು ಹೋದ ಭಾರತೀಯ: ಕೇಸರಿ ವಸ್ತ್ರ ಕಂಡು ಅಲ್ಲಿ ನಡೆದ ಘಟನೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ!

ಇಸ್ಲಾಂ ಧರ್ಮದಲ್ಲಿ ಮೆಕ್ಕಾ ಯಾತ್ರೆಗೆ ವಿಶೇಷವಾದ ಪ್ರಾಧಾನ್ಯತೆಯನ್ನು ನೀಡಲಾಗಿದೆ. ಜೀವನದಲ್ಲಿ ಒಮ್ಮೆಯಾದರೂ ಮೆಕ್ಕಾಗೆ ಹೋಗಿ ಕಾಬಾ ಶಿಲೆಯನ್ನು ನೋಡಬೇಕೆನ್ನುವುದು ಅನೇಕ ಮುಸ್ಲಿಂ ಬಾಂಧವರ ಜೀವನದ ಕನಸು ಆಗಿರುತ್ತದೆ. ಆದರೆ ಈ ಕನಸು ನನಸಾಗುವುದು ಮಾತ್ರ ಕೆಲವರಿಗೆ ಮಾತ್ರವೇ. ಮೆಕ್ಕಾ ಯಾತ್ರೆಯನ್ನು ಪವಿತ್ರ ಯಾತ್ರೆ ಎಂದೇ ಪರಿಗಣಿಸಲಾಗುತ್ತದೆ. ಜಗತ್ತಿನ ವಿವಿಧ ಮೂಲೆಗಳಿಂದ ಮುಸ್ಲಿಂ ಧರ್ಮದ ಅನುಯಾಯಿಗಳು ದೊಡ್ಡ ಸಂಖ್ಯೆಯಲ್ಲಿ ಮೆಕ್ಕಾಗೆ ಆಗಮಿಸುತ್ತಾರೆ. ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಬಹಳಷ್ಟು ವೈರಲ್ ಆಗಿದ್ದು ಮೆಕ್ಕಾ ಯಾತ್ರೆಯ ವೇಳೆ ನಡೆದಂತಹ ಒಂದು ಘಟನೆಯ ವಿಡಿಯೋ ಇದಾಗಿದೆ.

ವಿಡಿಯೋದಲ್ಲಿ ನಾವು ಗಮನಿಸಿದಾಗ ಭಾರತದ ಗುಜರಾತ್ ನ ಬ್ರೋಚ್ ನಿಂದ ಮೆಕ್ಕಾ ಯಾತ್ರೆಗೆ ತೆರಳಿದ್ದಂತಹ ಮುಸಲ್ಮಾನ ಬಂಧುವೊಬ್ಬರು ತಲೆಗೆ ಮುಸ್ಲಿಂ ಸಂಪ್ರದಾಯದಂತೆ ಬಿಳಿಯ ಟೋಪಿಯನ್ನು ಧರಿಸಿದ್ದಾರೆ. ಇನ್ನು ಅವರು ಮೈಮೇಲೆ ಕೇಸರಿ ಬಣ್ಣದ ಮುಸ್ಲಿಂ ಸಂಪ್ರದಾಯದ ರೀತಿಯ ವಸ್ತ್ರವನ್ನು ಧರಿಸಿದ್ದಾರೆ. ಆದರೆ ಅವರು ಧರಿಸಿದ ಕೇಸರಿ ವಸ್ತ್ರದ ವಿಷಯವಾಗಿ ಅಲ್ಲೊಂದು ದೊಡ್ಡ ಚರ್ಚೆಯೇ ನಡೆದಿದೆ. ಮೆಕ್ಕಾದಲ್ಲಿ ಒಬ್ಬ ಮುಸಲ್ಮಾನ ವ್ಯಕ್ತಿಯು ಈ ಭಾರತೀಯ ಮುಸಲ್ಮಾನ ವ್ಯಕ್ತಿಯನ್ನು ಕೇಸರಿ ಬಣ್ಣದ ಬಟ್ಟೆ ಧರಿಸಿ ಇರುವುದಕ್ಕೆ ಕಾರಣವೇನು??ಎನ್ನುವ ಪ್ರಶ್ನೆಯನ್ನು ಮಾಡಿದ್ದಾರೆ.

ಕೇಸರಿ ಬಣ್ಣದ ವಸ್ತ್ರ ತೊಟ್ಟ ಭಾರತೀಯ ಮುಸಲ್ಮಾನ ವ್ಯಕ್ತಿಯು ಪೀರ್ ಬಾಬಾ ಅವರ ಆಯ್ಕೆ ಈ ಕೇಸರಿ ಬಣ್ಣ ಎಂಬುದಾಗಿ ಹೇಳಿದ್ದಾರೆ. ಅವರು ಈ ಮಾತನ್ನು ಹೇಳಿದ ಮೇಲೆ ಅವರನ್ನು ಪ್ರಶ್ನೆ ಮಾಡಿದ ಮುಸ್ಲಿಂ ವ್ಯಕ್ತಿಯು ತಮ್ಮ ಧರ್ಮದಲ್ಲಿ ಕೇಸರಿ ಬಟ್ಟೆಗೆ ಅವಕಾಶ ಇಲ್ಲ ಎಂದು ಹೇಳುತ್ತಾ, ಧಾರ್ಮಿಕ ಗ್ರಂಥಗಳಲ್ಲಿ ತಿಳಿಸಿರುವ ಒಂದಷ್ಟು ವಿಚಾರಗಳನ್ನು ವಿವರಿಸಿದ್ದಾರೆ. ಇಸ್ಲಾಂ ಧರ್ಮದ ದೇವರಾದ ಅಲ್ಲಾಹ್ ಹೇಳಿರುವುದು ಬಿಳಿಯ ವಸ್ತ್ರಗಳು ಮಾತ್ರವೇ, ಕೇಸರಿ ವಸ್ತ್ರಗಳೆಲ್ಲ ಎಂದಿದ್ದಾರೆ. ಅಲ್ಲದೇ ಕೇಸರಿ ವಸ್ತ್ರವನ್ನು ಧರಿಸಿರುವ ವ್ಯಕ್ತಿಯು ಅಲ್ಲಾಹನ ಗಿಂತ ಪೀರ್ ಬಾಬಾರಿಗೆ ಪ್ರಾಧ್ಯಾನ್ಯತೆಯನ್ನು ನೀಡುತ್ತಿದ್ದು ಅದು ತಪ್ಪು ಎಂದು ತಿಳಿಸಿದ್ದಾರೆ.

ಕೇಸರಿ ವಸ್ತ್ರವನ್ನು ಧರಿಸಿ ಮೆಕ್ಕಾಗೆ ಬಂದಿರುವುದು ಅಲ್ಲಾಹನ ಮೇಲಿನ ಗೌರವಕ್ಕಿಂತ ಪೀರ್ ಮೇಲಿನ ಅಧಿಕವಾದ ಗೌರವವನ್ನು ತೋರಿಸುತ್ತದೆ. ಪೀರ್ ಗಳು ಹೇಳುವುದು ತಪ್ಪು ವಿಚಾರಗಳು, ಆ ತಪ್ಪುಗಳನ್ನು ಪಾಲಿಸಬಾರದು. ಅಲ್ಲಾಹ್ ನು ಹೇಳಿರುವ ಮಾರ್ಗದಲ್ಲಿ ಮಾತ್ರವೇ ನಾವು ನಡೆಯಬೇಕು ಆದ್ದರಿಂದ ಬಿಳಿ ಬಟ್ಟೆಗಳನ್ನು ಧರಿಸಿ ಬರಬೇಕು ಎಂದು ಬುದ್ಧಿ ಮಾತನ್ನು ಹೇಳಿದ್ದಾರೆ. ಕೇಸರಿ ವಸ್ತ್ರವನ್ನು ಧರಿಸಿದ್ದ ಭಾರತೀಯ ವ್ಯಕ್ತಿಯು ತಾನು ತಲೆಯ ಮೇಲೆ ಬಿಳಿ ಟೋಪಿಯನ್ನು ಇಟ್ಟುಕೊಂಡಿರುವುದು ಅಲ್ಲಾಹ್ ನ ಮೇಲಿನ ಗೌರವದಿಂದ ಎನ್ನುತ್ತಾರೆ.

ವಿಡಿಯೋ ನೋಡಿ

ಅದಕ್ಕೂ ಸಹ ಇನ್ನೊಬ್ಬ ವ್ಯಕ್ತಿಯು ನೀವು ಧರಿಸಿರುವ ಟೋಪಿ ಸಹಾ ಸಂಪ್ರಯಬದ್ಧವಾಗಿ ಇಲ್ಲ. ಬದಲಾಗಿ ಅದರ ವಿನ್ಯಾಸ ಪೀರ್ ಅವರನ್ನು ಗೌರವಿಸುವ ಹಾಗೆ ಕಂಡಿದೆ ಎನ್ನುತ್ತಾ, ಟೋಪಿಯ ವಿಚಾರದಲ್ಲಿ ಸಹ ಸಾಕಷ್ಟು ಚರ್ಚೆಯನ್ನು ನಡೆಸಿ ಕೇಸರಿ ಧರಿಸಿ ಮೆಕ್ಕಾಗೆ ಹೋದ ಭಾರತೀಯ ಮುಸ್ಲಿಂ ವ್ಯಕ್ತಿಗೆ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಈ ವಿಡಿಯೋವನ್ನು ಈಗಾಗಲೇ 26 ಲಕ್ಷಕ್ಕಿಂತಲೂ ಅಧಿಕ ಜನರು ವೀಕ್ಷಣೆಯನ್ನು ಮಾಡಿದ್ದಾರೆ. ಅನೇಕರು ಪರ ವಿರೋಧ ಕಾಮೆಂಟ್ ಗಳನ್ನು ಮಾಡಿದ್ದಾರೆ. 36 ಸಾವಿರಕ್ಕೂ ಅಧಿಕ ಜನರು ಈ ವಿಡಿಯೋಗೆ ಲೈಕ್ ಗಳನ್ನು ನೀಡಿದ್ದಾರೆ.

Leave a Comment

Your email address will not be published. Required fields are marked *