‘ಈ’ 6 ಕ್ರಿಕೇಟ್ ಆಟಗಾರರು ಕೋಟ್ಯಾಧೀಶರಾಗಿದ್ದರು ಸಹ ಸರ್ಕಾರಿ ನೌಕರಿ ಮಾಡುತ್ತಿದ್ದಾರೆ……..!!

ಗೆಳೆಯರೇ, ಭಾರತದಲ್ಲಿ ಅನೇಕ ಆಟಗಳನ್ನು ಆಡುತ್ತಾರೆ. ಆದರೆ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಏಕಮೇವ ಆಟವೆಂದರೆ ಅದು ಕ್ರಿಕೇಟ್. ಭಾರತ ದೇಶದಲ್ಲಿ ಅನೇಕ ದಿಗ್ಗಜ ಆಟಗಾರರು ಆಗಿ ಹೋಗಿದ್ದಾರೆ. ಅಲ್ಲದೆ ಸದ್ಯಕ್ಕೂ ಸಹ ಜಗಮೆಚ್ಚುವ ಕ್ರಿಕೇಟ್ ಆಟಗಾರರು ನಮ್ಮ ಭಾರತ ತಂಡದಲ್ಲಿ ಇದ್ದಾರೆ. ಆದರೆ ಇಂದು ನಾವು ಕ್ರಿಕೇಟ್ ಜಗತ್ತಿನಲ್ಲಿ ತಮ್ಮ ಹೆಸರು ಗಳಿಸಿಕೊಂಡ ಆರು ದಿಗ್ಗಜ ಆಟಗಾರರ ಬಗ್ಗೆ ತಿಳಿಸಲಿದ್ದೇವೆ ಏಕೆಂದರೆ ಈ ಆಟಗಾರರು ತಾವು ಕೋಟ್ಯಾಧಿಪತಿ ಯಾಗಿದ್ದರು ಸಹ ಇಂದು ಅವರು ಭಾರತ ಸರಕಾರದ ಅಡಿಯಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ.

ಎಂ ಎಸ್ ಧೋನಿ
ಈ ಪಟ್ಟಿಯಲ್ಲಿ ಮೊದಲನೆಯ ಆಟಗಾರರ ಹೆಸರು ಎಂ ಎಸ್ ಧೋನಿ ಇದೆ. ಕ್ರಿಕೇಟ್ ಜಗತ್ತಿನಲ್ಲಿಯ ಒಬ್ಬಮಹಾನ್ ಮತ್ತು ಎಲ್ಲಕ್ಕಿಂತ ಯಶಸ್ವೀ ಆಟಗಾರ ಹಾಗೂ ಕ್ಯಾಪ್ಟನ್ ಎಂದು ಹೆಗ್ಗಳಿಕೆಗೆ ಹೆಸರಾದವರು ಎಂ ಎಸ್ ಧೋನಿ. ಅವರ ನಾಯಕತ್ವದ ಅಡಿಯಲ್ಲಿ ಭಾರತವು 2007 ರಲ್ಲಿ ಟಿ-20 ವಿಶ್ವಕಪ್ ಮತ್ತು 2011 ರಲ್ಲಿ ವಿಶ್ವಕಪ್ ಗೆದ್ದುಕೊಂಡಿದೆ. ಮತ್ತು 2013 ರಲ್ಲಿ ಚಾಂಪಿಯನ್ ಟ್ರಾಫಿ ಸಹ ಭಾರತ ತನ್ನ ವಶಪಡಿಸಿಕೊಂದಿದೆ. ಇಷ್ಟೊಂದು ಸಾಧನೆ ಮಾಡಿರುವ ನಾಯಕ ಧೋನಿಯವರನ್ನು ಭಾರತ ಸರ್ಕಾರ ಲಷ್ಕರ್ ಕರ್ನಲ್ ಈ ಪದವಿ ಕೊಟ್ಟು ಇವರನ್ನು ಸನ್ಮಾನಿಸಲಾಯಿತು. ಇಂದಿಗೂ ಸಹ ಧೋನಿಯವರು ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಸಚಿನ್ ತೆಂಡೂಲ್ಕರ್
ಈ ಪಟ್ಟಿಯಲ್ಲಿಯ ಎರಡನೆಯ ವ್ಯಕ್ತಿ ಸಚಿನ್ ತೆಂಡೂಲ್ಕರ್ ಇದ್ದಾರೆ. ಸ್ನೇಹಿತರೇ, ಸಚಿನ್ ತೆಂಡೂಲ್ಕರ್ ಇವರನ್ನು ಜನರು ಕ್ರಿಕೆಟ್ ದೇವರು ಎಂದೂ ಸಹ ಕರೆಯುತ್ತಾರೆ. ಏಕೆಂದರೆ ಸಚಿನ್ ಭಾರತ ಮಾತ್ರವಲ್ಲದೆ ಇಡೀ ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಅದಕ್ಕಾಗಿಯೇ ಸಚಿನ್ ಅವರನ್ನು ಕ್ರಿಕೆಟ್ ದೇವರು ಎಂದೂ ಕರೆಯುತ್ತಾರೆ. ಭಾರತ ತಂಡಕ್ಕೆ ಅವರ ಕೊಡುಗೆಯನ್ನು ಗುರುತಿಸಿ, ಅವರನ್ನು ಭಾರತೀಯ ವಾಯುಪಡೆಯಲ್ಲಿ ಕ್ಯಾಪ್ಟನ್ ಹುದ್ದೆಗೆ ಬಡ್ತಿ ನೀಡಲಾಗಿದೆ. ಹೀಗಾಗಿ ಅವರು ಸಹ ಭಾರತಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಹರ್ಭಜನ್ ಸಿಂಗ್
ಈ ಪಟ್ಟಿಯಲ್ಲಿರುವ ನಮ್ಮ ಮುಂದಿನ ಆಟಗಾರ ಹರ್ಭಜನ್ ಸಿಂಗ್. ಹರ್ಭಜನ್ ಭಾರತದ ಪರ ಯಶಸ್ವಿ ಸ್ಪಿನ್ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಮತ್ತು ಹರ್ಭಜನ್ ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ಚರ್ಚೆಯಾಗುತ್ತಾರೆ. ಕ್ರಿಕೆಟ್‌ನ ಹೊರತಾಗಿ, ಹರ್ಭಜನ್ ಪಂಜಾಬ್ ಪೊಲೀಸ್‌ನಲ್ಲಿ ಡಿಎಸ್‌ಪಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಕಪಿಲ್ ದೇವ್
ಈ ಪಟ್ಟಿಯಲ್ಲಿ ನಮ್ಮ ನಾಲ್ಕನೇ ಆಟಗಾರ ಕಪಿಲ್ ದೇವ್. 1983 ರಲ್ಲಿ ಭಾರತ ಮೊದಲ ಬಾರಿಗೆ ವಿಶ್ವಕಪ್ ಗೆದ್ದಾಗ, ಕಪಿಲ್ ದೇವ್ ಆ ತಂಡದ ನಾಯಕರಾಗಿದ್ದರು. ಕಪಿಲ್ ದೇವ್ ಆ ಕಾಲದ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರು. ಕಪಿಲ್ ದೇವ್ ಪ್ರಸ್ತುತ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಜೋಗಿಂದರ್ ಶರ್ಮಾ
ಸ್ನೇಹಿತರೇ, ನಮ್ಮ ಮುಂದಿನ ಆಟಗಾರ ಜೋಗಿಂದರ್ ಶರ್ಮಾ, ಜೋಗಿಂದರ್ ಶರ್ಮಾ ಅವರ 2007 ರ T20 ವಿಶ್ವಕಪ್‌ನ ಕೊನೆಯ ಓವರ್ ಅನ್ನು ಎಂದಿಗೂ ಮರೆಯುವುದಿಲ್ಲ ಏಕೆಂದರೆ ಕೊನೆಯ ಓವರನಲ್ಲಿ ಭಾರತಕ್ಕೆ ಜಯ ತಂದು ಕೊಟ್ಟವರು ಇವರೇ. ಇವರು ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ಅವರನ್ನು ಹರಿಯಾಣ ಪೊಲೀಸ್‌ನಲ್ಲಿ ಡಿಎಸ್‌ಪಿಯಾಗಿ ನೇಮಕಾತಿ ಮಾಡಲಾಗಿದೆ.

ಉಮೇಶ್ ಯಾದವ್
ಸ್ನೇಹಿತರೇ, ಉಮೇಶ್ ಯಾದವ್ ಭಾರತ ತಂಡದ ಅತ್ಯಂತ ವೇಗದ ಮತ್ತು ಪ್ರಮುಖ ಬೌಲರ್. ಆದರೆ, ಉಮೇಶ್ ಕ್ರಿಕೆಟಿಗನಾಗುವ ಪಯಣ ಅಷ್ಟು ಸುಲಭವಾಗಿರಲಿಲ್ಲ. ಭಾರತೀಯ ವೇಗದ ಬೌಲರ್ ಉಮೇಶ್ ಯಾದವ್ ಅವರಿಗೆ ಭಾರತೀಯ ರಿಸರ್ವ್ ಬ್ಯಾಂಕ್‌ ಆಫ್ ಇಂಡಿಯಾನಲ್ಲಿ ಕ್ರೀಡಾ ಕೋಟಾದಿಂದ ಮ್ಯಾನೇಜರ್ ಹುದ್ದೆ ನೀಡಲಾಗಿದೆ.