Articles

Video; ಗಣೇಶನ ಮೆರವಣಿಗೆಯಲ್ಲಿ ನೋ ಪಾರ್ಕಿಂಗ್ ನಲ್ಲಿ ವಾಹನಗಳನ್ನು ನಿಲ್ಲಿಸಿದರೆ ಅಷ್ಟೆ; ಚೆಕಿಂಗ್ ಗಾಗಿ ಸ್ವತಃ ಗಜರಾಜ್!

ಸದ್ಯ ಭಾರತದಲ್ಲಿಡೆ ಮುದ್ದು ಮತ್ತು ಪ್ರೀತಿಯ ಗಣೇಶನ ಎಂಟ್ರಿ ಭರ್ಜರಿಯಾಗಿ ಆಗಿದೆ. ಇದಕ್ಕೆ ಹೋಲುವ ತಮಾಷೆಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಕಾಣಲು ಸಿಗುತ್ತಿದೆ. ಗಜರಾಜನ ಈ ವಿಡಿಯೋವನ್ನು ನೋಡಿದಾಗ ನಿಮಗೂ ಸಹ ನಗು ತಡೆಯುವುದು ಸಾಧ್ಯವಿಲ್ಲ.

ವಿಡಿಯೋ ನೋಡಿ

ಪ್ರಸ್ತುತ ವಿಡಿಯೋವನ್ನು ಟ್ವಿಟರ್ ನಲ್ಲಿ ಐಎಫ್ಎಸ್ ಆಫೀಸರ್ ಆದ ಸುಶಾಂತ್ ನಂದ ಅವರು ತಮ್ಮ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡಿ Don’t park in no parking zone ಎಂದು ಸುಂದರವಾದ ಕ್ಯಾಪ್ಷನ್ ನೀಡಿದ್ದಾರೆ.

ಪಾರ್ವತಿ ಪರಶಿವನ ಮುದ್ದು ಮಗ ಹಾಗೂ ಭಕ್ತರ ಪ್ರೀತಿಯ ಗಣಪ ತನ್ನದೇ ಗಣೇಶೋತ್ಸವದ ಆಗಮನಕ್ಕೆ ಬಂದು ಮೆರವಣಿಗೆಯ ಮುಖಾಂತರ ಮರಳಿ ಹೋಗುವ ತಯಾರಿಯಲ್ಲಿ ಇದ್ದಾನೆ. ಈ ಮೆರವಣಿಗೆಯಲ್ಲಿ ಯಾವುದೇ ರೀತಿಯ ವಾಹನಗಳ ಅಡೆತಡೆ ನಿರ್ಮಾಣವಾಗಬಾರದು ಎಂಬ ರೀತಿಯಲ್ಲಿ ಸ್ವಂತ ಗಜರಾಜನೇ ಪಟ್ಟಣದಲ್ಲಿ ಮೆರವಣಿಗೆಯ ಪೂರ್ವದಲ್ಲಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದಾನೆ ಎನಿಸುತ್ತಿದೆ. ಕಾರಣ ಈ ದೃಶ್ಯದಲ್ಲಿ ರೋಡ್ ಬದಿಗೆ ಪಾರ್ಕ್ ಮಾಡಲಾದ ಟು ವೀಲರ್ ಗೆ ಆನೆ ಜೋರಾಗಿ ಒದೆ ನೀಡಿದೆ. ಅದು ಒಂದು ಸಲ ಅಲ್ಲ ಎರಡು ಸಲ ಚೆನ್ನಾಗಿ ಒದೆ ನೀಡಿ ಬದಿಗೆ ಸರಿಸಿದೆ. ಅದಕ್ಕೆಂತಲೇ ಹೇಳೋದು ಚೆಕಪ್ ಫುಲ್ ಸಖತ್ ಆಗಿದೆ. ರಸ್ತೆ ಮೇಲೆ ನಮ್ಮ ಬೈಕ್ ಇದ್ದರೂ ಈಗಲೇ ಬದಿಗೆ ಸರಿಸಿ ಬಿಡಬೇಕು ಎನ್ನುವ ಹಾಗಿದೆ ಈ ದೃಶ್ಯ.

ನೋಡಿ ಈ ತಮಾಷೆಯ ವಿಡಿಯೋ…

ವಿಡಿಯೋದಲ್ಲಿ ಆನೆಯೊಂದು ರಾತ್ರಿಯ ಸಮಯದಲ್ಲಿ ಕಾಡಿನಿಂದ ಪಟ್ಟಣದಲ್ಲಿ ಎಂಟ್ರಿ ಮಾಡಿದೆ. ಈ ಸಂದರ್ಭದಲ್ಲಿ ಅದು ಯಾಕೋ ರೋಷದಿಂದ ರಸ್ತೆಯ ಮೇಲೆ ಸುತ್ತಾಡುತ್ತಿರುವಾಗ ರಸ್ತೆ ಬದಿಗೆ ನಿಂತ ಬೈಕ್ ಗೆ ಚೆನ್ನಾಗಿ ಒದೆ ನೀಡಿ ಬದಿಗೆ ಸರಿಸಿದ ದೃಶ್ಯ ಇಲ್ಲಿ ಕಾಣಬಹುದು. ಈ ವಿಡಿಯೋವನ್ನು ಇಲ್ಲಿಯವರೆಗೆ 1 ಲಕ್ಷ 19 ಸಾವಿರ ಜನರು ನೋಡಿದ್ದಾರೆ. ಜೊತೆಗೆ ಸುಮಾರು 5 ಸಾವಿರಕ್ಕೂ ಮೇಲ್ಪಟ್ಟು ಲೈಕ್ಸ್ ಗಳನ್ನು ಮಾಡಿದ್ದಾರೆ.

Leave a Comment

Your email address will not be published. Required fields are marked *