Articles

ತೀಕ್ಷ್ಣ ದೃಷ್ಟಿಯುಳ್ಳವರಿಗೆ ಮಾತ್ರ; ಈ ಫಿಶಿಂಗ್ ಚಿತ್ರದಲ್ಲಿ ಅಡಗಿವೆ 6 ಇಂಗ್ಲೀಷ್ ಪದಗಳು. ಯಾವವು ಅಂತ ಹೇಳಲು ಸಾಧ್ಯವೇ?

ಸೋಶಿಯಲ್ ಮೀಡಿಯಾದಲ್ಲಿ ಅನೇಕ ಬಾರಿ ತಲೆ ತಿನ್ನುವ ಚಿತ್ರಗಳು ವೈರಲ್ ಆಗುತ್ತವೆ. ಇಂಥ ಚಿತ್ರಗಳಿಗೆ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳೆಂದು ಕರೆಯುತ್ತಾರೆ. ಈ ರೀತಿಯ ಚಿತ್ರಗಳನ್ನು ಸರಿಯಾಗಿ ನೋಡಿದ ನಂತರವೂ ತಿಳಿದುಕೊಳ್ಳುವುದು ತುಂಬಾ ಕಷ್ಟವಾಗುತ್ತದೆ. ಎಷ್ಟೇ ಗಮನವಹಿಸಿ ನೋಡಿದರೂ ನಮ್ಮ ಕಣ್ಣುಗಳು ಮೋಸ ಹೋಗುತ್ತವೆ. ಸದ್ಯ ಇದೇ ರೀತಿಯ ಒಂದು ಹೊಸ ಚಿತ್ರವು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಪ್ರಸ್ತುತ ಚಿತ್ರದಲ್ಲಿ ಅದ್ಯಾವ ರೀತಿಯ ಒಗಟಾಗಿದೆ ಮತ್ತು ಇದನ್ನು ಬಿಡಿಸಲು ನಿಮಗೆ ಸಾಧ್ಯವೇ ಎಂಬುದನ್ನು ನೋಡೋಣ ಬನ್ನಿ.

ಆಪ್ಟಿಕಲ್ ಎಲ್ಯೂಶನ್ ನ ಈ ಫಿಶಿಂಗ್ ಮಾಡುತ್ತಿರುವ ಒಗಟಿನ ಚಿತ್ರದಲ್ಲಿ 6 ಇಂಗ್ಲಿಷ್ ಪದಗಳು ಅಡಗಿವೆ. ಈ ಆರೂ ಇಂಗ್ಲಿಷ್ ಪದಗಳು ನಮ್ಮ ಕಣ್ಣುಗಳ ಮುಂದೆ ಇದ್ದರೂ ಸಹ ನಮ್ಮ ಗಮನ ಆ ಕಡೆ ಹೋಗುತ್ತಿಲ್ಲ. ಹೀಗಾಗಿ ಪ್ರಸ್ತುತ ಚಿತ್ರ ಯೂಸರ್ಸ್ಗಳಿಗೆ ದೊಡ್ಡ ತಲೆನೋವಾಗಿದೆ. ಯೂಸರ್ಸ್ ಗಳು ಈ ಚಿತ್ರದಲ್ಲಿಯ ಉತ್ತರವನ್ನು ಹುಡುಕಲು ಪ್ರಸ್ತುತ ಚಿತ್ರ ತಮ್ಮ ಮಿತ್ರರಿಗೂ ಶೇರ್ ಮಾಡುತ್ತಿದ್ದಾರೆ. ಹಾಗೆ ನೋಡಲಾಗಿ ಪ್ರಸ್ತುತ ಪ್ರಶ್ನೆಯ ಉತ್ತರ ತುಂಬಾ ಸರಳವಾಗಿದೆ. ಆದರೆ ನಿಮ್ಮ ಮೈಂಡ್ ಇದನ್ನು ಎಷ್ಟು ಬೇಗ ಕಂಡು ಹಿಡಿಯುತ್ತದೆ ಅದು ನಿಮ್ಮ ಮೇಲೆ ಡಿಪೆಂಡ್ ಆಗಿದೆ. ಇಲ್ಲಿ ಅಡಗಿದ ಆರು ಇಂಗ್ಲಿಷ್ ಪದಗಳಲ್ಲಿ ನೀವು ಎಷ್ಟು ಪದಗಳನ್ನು ಕಂಡುಹಿಡಿಯುತ್ತೀರಿ? ಟ್ರೈ ಮಾಡಿ ನೋಡೋಣ.

ತಲೆಯಲ್ಲಿ ಹುಳ ಬೀಳುವ ಈ ಚಿತ್ರದ ಉತ್ತರವನ್ನು ಹುಡುಕಲು ಸಾಕಷ್ಟು ಯೂಸರ್ಸ್ ಗಳು ಪ್ರಯತ್ನಿಸುತ್ತಿದ್ದಾರೆ. ಇಂಟರ್ನೆಟ್ ನಲ್ಲಿ ವೈರಲ್ ಆಗುತ್ತಿರುವ ಈ ಚಿತ್ರ ಸದ್ಯಕ್ಕೆ ಜಾಣರ ತಲೆ ನೋವಾಗಿದೆ. ಈ ಚಿತ್ರದಲ್ಲಿ ಅಡಗಿದ ಆ ಆರು ಶಬ್ದಗಳು ಒಂದು ವೇಳೆ ಹುಡುಕಿದ್ದೆ ಆದರೆ ನಿಮ್ಮ ಕಣ್ಣುಗಳು ಸೂಕ್ಷ್ಮತೆಯನ್ನು ಗ್ರಹಿಸುವಲ್ಲಿ ತುಂಬಾನೇ ವಿಲಕ್ಷಣವಾಗಿವೆ ಅಂತಲೇ ಅರ್ಥ. ಒಂದು ವೇಳೆ ನಿಮ್ಮ ಕಣ್ಣುಗಳು ಈ ಪ್ರಶ್ನೆಯ ಉತ್ತರವನ್ನು ಹುಡುಕಲು ಯಶಸ್ವಿಯಾಗದಿದ್ದರೆ ಬೇಜಾರಾಗಬೇಡಿ, ನಾವೇ ಉತ್ತರವನ್ನು ಹೇಳುತ್ತೇವೆ.

ಪ್ರಸ್ತುತ ಚಿತ್ರದಲ್ಲಿ ಅಡಗಿದ ಶಬ್ದಗಳು ಈ ಕೆಳಗಿನಂತಿವೆ.
Tree, Boy, Hot, Fish, Nice ಮತ್ತು Wave.

Leave a Comment

Your email address will not be published. Required fields are marked *