Articles

ಎಲೆಕ್ಟ್ರಿಕ್ ಬೈಕ್ ಚಾರ್ಜಿಂಗ್ ವೇಳೆ ಶಾಕ್; 23 ವರ್ಷದ ಯುವತಿ ಸಾವು

ಎಲೆಕ್ಟ್ರಿಕ್ ಟು ವೀಲರ್ ಬ್ಯಾಟರಿ ಚಾರ್ಜಿಂಗ್ ಹಚ್ಚುವ ಸಂದರ್ಭದಲ್ಲಿ ಶಾಕ್ ತಗುಲಿ 23 ವರ್ಷದ ಯುವತಿ ದಾರುಣ ಸಾವಿಗೀಡಾಗಿದ್ದಾಳೆ. ಪ್ರಸ್ತುತ ಈ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕರಾಡ್ ತಾಲೂಕಿನಲ್ಲಿ ಘಟಿಸಿದೆ. ಶಿವಾನಿ ಅನಿಲ್ ಪಾಟೀಲ್ ಸಾವಿಗೀಡಾದ ಯುವತಿಯ ಹೆಸರು.

ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಕರಾಡ್ ಹತ್ತಿರದ ಮೊಪ್ರೆಯಲ್ಲಿ ಶಿವಾನಿ ಪಾಟೀಲ್ ರ ಮನೆಯಲ್ಲಿ ಎಲೆಕ್ಟ್ರಿಕ್ ಟು ವೀಲರ್ ಇದ್ದು ಶುಕ್ರವಾರದಂದು ಊರಿಗೆ ಹೋಗುವ ಸಲುವಾಗಿ ಬ್ಯಾಟರಿ ಚಾರ್ಜಿಂಗ್ ಚೆಕ್ ಮಾಡಿದ್ದಾರೆ. ಬ್ಯಾಟರಿಗೆ ಚಾರ್ಜ್ ಕಡಿಮೆ ಇರುವದನ್ನು ಕಂಡ ಶಿವಾನಿ ಬ್ಯಾಟರಿ ಹೊರಗೆ ತೆಗೆದಿದ್ದಾಳೆ.

ನಂತರ ಅದನ್ನು ಮನೆಯಲ್ಲಿ ತೆಗೆದುಕೊಂಡು ಹೋಗಿದ್ದಾಳೆ. ಬ್ಯಾಟರಿ ಚಾರ್ಜಿಂಗ್ ಹಚ್ಚುವ ಸಂದರ್ಭದಲ್ಲಿ ಶಿವಾನಿಗೆ ಜೋರಾದ ಶಾಕ್ ತಗುಲಿದೆ. ಈ ಇನ್ಸಿಡೆಂಟ್ ನಲ್ಲಿ ಶಿವಾನಿಗೆ ತಕ್ಷಣ ಸಮೀಪದ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಆದರೆ ದುರದೃಷ್ಟ ಶಿವಾನಿಯು ಉಪಚಾರದ ಸಂದರ್ಭದಲ್ಲಿಯೇ ಅಸುನೀಗಿದ್ದಾಳೆ ಎಂದು ಪೊಲೀಸರು ತಮ್ಮ ವರದಿಯಲ್ಲಿ ದಾಖಲಿಸಿಕೊಂಡಿದ್ದಾರೆ.

Leave a Comment

Your email address will not be published. Required fields are marked *